ಭಾರತ-ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್ ಪಂದ್ಯದ ಅಂಪೈರ್‌ಗಳ ಪಟ್ಟಿ ಪ್ರಕಟ
T20 world cup final 2026: ಇಲ್ಲಿಂಗ್‌ವರ್ತ್‌ಗೆ ಇದು ಸತತ ಎರಡನೇ ಟಿ20 ವಿಶ್ವಕಪ್ ಫೈನಲ್ ಆಗಿದೆ. ಇದಲ್ಲದೆ, ಅವರು ಅಹಮದಾಬಾದ್‌ನಲ್ಲಿ ನಡೆದ 2023 ರ ಏಕದಿನ ವಿಶ್ವಕಪ್‌ನ ಫೈನಲ್ ಮತ್ತು ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿಯೂ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು.
T20 World Cup final match officials -
ಅಹಮದಾಬಾದ್, ಮಾ.7: ಭಾರತ ಮತ್ತು ನ್ಯೂಜಿಲೆಂಡ್(India vs New Zealand) ನಡುವಿನ 2026ರ ಟಿ 20 ವಿಶ್ವಕಪ್ ಫೈನಲ್ ಪಂದ್ಯಕ್ಕೆ(T20 World Cup final match officials) ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪಂದ್ಯದ ಅಧಿಕಾರಿಗಳನ್ನು ದೃಢಪಡಿಸಿದೆ. ಮಾರ್ಚ್ 8 (ಭಾನುವಾರ) ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಈ ಫೈನಲ್ ಪಂದ್ಯ ನಡೆಯಲಿದೆ. ರಿಚರ್ಡ್ ಇಲ್ಲಿಂಗ್‌ವರ್ತ್ ಮತ್ತು ಅಲೆಕ್ಸ್ ವಾರ್ಫ್ ಅವರು ಹೈ-ಆಕ್ಟೇನ್ ಮುಖಾಮುಖಿಗೆ ಆನ್-ಫೀಲ್ಡ್ ಅಂಪೈರ್‌ಗಳಾಗಿ ಸೇವೆ ಸಲ್ಲಿಸಲಿದ್ದಾರೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 2024 ರ ಆವೃತ್ತಿಯ ಫೈನಲ್‌ನಲ್ಲಿ ಕ್ರಿಸ್ ಗಫಾನಿ ಅವರೊಂದಿಗೆ ಕಾರ್ಯನಿರ್ವಹಿಸಿದ್ದ ಇಲ್ಲಿಂಗ್‌ವರ್ತ್‌ಗೆ ಇದು ಸತತ ಎರಡನೇ ಟಿ20 ವಿಶ್ವಕಪ್ ಫೈನಲ್ ಆಗಿದೆ. ಇದಲ್ಲದೆ, ಅವರು ಅಹಮದಾಬಾದ್‌ನಲ್ಲಿ ನಡೆದ 2023 ರ ಏಕದಿನ ವಿಶ್ವಕಪ್‌ನ ಫೈನಲ್ ಮತ್ತು ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿಯೂ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು.
ಅಲೆಕ್ಸ್ ವಾರ್ಫ್ ಬಗ್ಗೆ ಹೇಳುವುದಾದರೆ, ಕಳೆದ ವರ್ಷ ಐಸಿಸಿ ಎಲೈಟ್ ಪ್ಯಾನೆಲ್ ಆಫ್ ಅಂಪೈರ್‌ಗಳಲ್ಲಿ ಹೆಸರಿಸಲ್ಪಡುವ ಮೊದಲು ಅವರು 2022 ರ ಮಹಿಳಾ ODI ವಿಶ್ವಕಪ್ ಮತ್ತು 2023 ರ ಪುರುಷರ ODI ವಿಶ್ವಕಪ್‌ನಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು. ಇದಲ್ಲದೆ, ನಡೆಯುತ್ತಿರುವ T20 ವಿಶ್ವಕಪ್ ಆವೃತ್ತಿಯಲ್ಲಿ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನ್ಯೂಜಿಲೆಂಡ್ ನಡುವಿನ ಮೊದಲ ಸೆಮಿಫೈನಲ್‌ನಲ್ಲೂ ಕಾರ್ಯನಿರ್ವಹಿಸಿದ್ದರು.
ಫೈನಲ್ ಪಂದ್ಯದ ಅಧಿಕಾರಿಗಳ ಪಟ್ಟಿ
ಆನ್-ಫೀಲ್ಡ್ ಅಂಪೈರ್‌ಗಳು: ರಿಚರ್ಡ್ ಇಲ್ಲಿಂಗ್‌ವರ್ತ್ ಮತ್ತು ಅಲೆಕ್ಸ್ ವಾರ್ಫ್
ಮೂರನೇ ಅಂಪೈರ್: ಅಲ್ಲಾಹುದ್ದೀನ್ ಪಾಲೇಕರ್
ನಾಲ್ಕನೇ ಅಂಪೈರ್: ಆಡ್ರಿಯನ್ ಹೋಲ್ಡ್‌ಸ್ಟಾಕ್
ಪಂದ್ಯದ ರೆಫರಿ: ಆಂಡಿ ಪೈಕ್ರಾಫ್ಟ್
T20 world cup final 2026: ಫೈನಲ್ ಪಂದ್ಯಕ್ಕೆ ಮಳೆ ಬಂದರೆ, ಟೈಗೊಂಡರೆ ಏನು ಗತಿ? ನಿಯಮ ಏನು ಹೆಳುತ್ತದೆ?
ಸಂಗೀತ ರಸಮಂಜರಿ
ಪ್ಯೂರ್ಟೊ ರಿಕಾನ್ ಗ್ಯಾಮಿ ಪ್ರಶಸ್ತಿ ವಿಜೇತ ಗಾಯಕ ರಿಕಿ ಮಾರ್ಟಿನ್ ಅವರು ಫೈನಲ್ ಪಂದ್ಯದ ಆರಂಭಕ್ಕೂ ಮುನ್ನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ‘ದಾಂಡಿಯಾ ಕ್ವೀನ್’ ಫಾಲ್ಗುಣಿ ಪಾಠಕ್ ಮತ್ತು ಬಾಲಿವುಡ್ ಹಿನ್ನೆಲೆ ಗಾಯಕ ಸುಖ್ವಿಂದರ್ ಸಿಂಗ್ ಅವರ ಗಾಯನ ಕಾರ್ಯಕ್ರಮ ಕೂಡ ಆಯೋಜಿಸಲಾಗಿದೆ. ಟಾಸ್ ಹಾಕುವ ಮುನ್ನ ಈ ಕಾರ್ಯಕ್ರಮಗಳು ನಡೆಯಲಿವೆ. ಪಂದ್ಯ ವೀಕ್ಷಣೆಗೆ ಸ್ಟೇಡಿಯಂ ಗೇಟ್ ಮಧ್ಯಾಹ್ನ 3.30ಕ್ಕೆ ತೆರೆಯಲಿದೆ.
ಫೈನಲ್ ಪಂದ್ಯದ ಸಂದರ್ಭದಲ್ಲಿ ಜನರ ಪ್ರಯಾಣಕ್ಕಾಗಿ ಪಶ್ವಿಮ ರೈಲ್ವೆ ವಿಭಾಗವು ಮುಂಬೈನಿಂದ ಅಹಮದಾಬಾದ್ ನಗರಕ್ಕೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ.