ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪಾಕ್‌ ಕ್ರಿಕೆಟ್‌ ಲೀಗ್‌ನಲ್ಲಿ ಚೆಂಡು ವಿರೂಪ ಪ್ರಕರಣ; ಕೃತ್ಯ ಕ್ಯಾಮೆರಾದಲ್ಲಿ ಸೆರೆ

PSL 2026: ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಸಿಲುಕಿದಾಗ, ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಅವರಂತಹ ಉನ್ನತ ಆಟಗಾರರಿಗೂ ದೀರ್ಘಾವಧಿಯ ನಿಷೇಧ ಹೇರಲಾಯಿತು ಎಂಬುದನ್ನು ಗಮನಿಸಬೇಕು. ಕೇಂದ್ರಬಿಂದುವಾಗಿರುವ ಫಖರ್, ಶಾಹೀನ್ ಮತ್ತು ಹ್ಯಾರಿಸ್ ವಿರುದ್ಧವೂ ಇದೇ ರೀತಿಯ ಕ್ರಮ ಕೈಗೊಳ್ಳಬಹುದೇ? ಎಂದು ಕಾದು ನೋಡಬೇಕಿದೆ.

ಕರಾಚಿ, ಮಾ.30: ಭಾನುವಾರ ಕರಾಚಿ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಪಾಕಿಸ್ತಾನ ಸೂಪರ್ ಲೀಗ್(PSL 2026) ಫ್ರಾಂಚೈಸಿಯ ಲಾಹೋರ್ ಖಲಂದರ್ಸ್‌ ಮೇಲೆ ಚೆಂಡು ವಿರೂಪಗೊಳಿಸಿದ ಆರೋಪ ಹೊರಿಸಲಾಗಿದ್ದು, ಕ್ರಿಕೆಟಿಗ ಫಖರ್ ಜಮಾನ್ ವಿರುದ್ಧ ಈ ತಪ್ಪಿನ ಆರೋಪ ಹೊರಿಸಲಾಗಿದೆ. ಆದರೆ ಮ್ಯಾಚ್ ರೆಫರಿ ರೋಷನ್ ನೇತೃತ್ವದ ಶಿಸ್ತಿನ ವಿಚಾರಣೆಯ ಸಂದರ್ಭದಲ್ಲಿ ಫಖರ್ ತಮ್ಮ ವಿರುದ್ಧ ಹೊರಿಸಲಾದ ಆರೋಪವನ್ನು ನಿರಾಕರಿಸಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೇಳಿಕೆಯಲ್ಲಿ ತಿಳಿಸಿದೆ.

"ಮುಂದಿನ 48 ಗಂಟೆಗಳ ಒಳಗೆ ಮತ್ತೊಂದು ವಿಚಾರಣೆ ನಡೆಯಲಿದೆ, ನಂತರ ಮ್ಯಾಚ್ ರೆಫರಿ ತಮ್ಮ ತೀರ್ಪನ್ನು ಹಂಚಿಕೊಳ್ಳುತ್ತಾರೆ. ತಪ್ಪಿತಸ್ಥರೆಂದು ಸಾಬೀತಾದರೆ, ಲೆವೆಲ್ 3 ಅಪರಾಧಕ್ಕೆ ಕನಿಷ್ಠ ಶಿಕ್ಷೆ ಒಂದು ಪಂದ್ಯದ ನಿಷೇಧ ಹೇರಲಾಗುತ್ತದೆ" ಎಂದು ಪಾಕ್‌ ಕ್ರಿಕೆಟ್‌ ಮಂಡಳಿ ತಿಳಿಸಿದೆ.

ಕರಾಚಿ ಕಿಂಗ್ಸ್ ಗೆಲುವಿಗೆ ಇನ್ನೂ 14 ರನ್‌ಗಳ ಅಗತ್ಯವಿದ್ದಾಗ, ವೇಗದ ಬೌಲರ್ ಹ್ಯಾರಿಸ್ ರೌಫ್ ಅಂತಿಮ ಓವರ್ ಎಸೆದಾಗ ವಿವಾದ ಭುಗಿಲೆದ್ದಿತು. ಲಾಹೋರ್ ನಾಯಕ ಶಾಹೀನ್ ಶಾ ಅಫ್ರಿದಿ, ಫಖಾರ್ ಜಮಾನ್ ಮತ್ತು ರೌಫ್ ಮೂವರೂ ಪರಸ್ಪರ ಚರ್ಚೆಯ ಸಮಯದಲ್ಲಿ‌ ತೊಡಗಿದ್ದರು. ಈ ವೇಳೆ ಫಖಾರ್ ಜಮಾನ್ ಚೆಂಡನ್ನು ಬಲವಾಗಿ ಬೆರಳಿಂದ ಒತ್ತುವುದು ಕಂಡು ಬಂತು, ತಕ್ಷಣ ಫೀಲ್ಡ್‌ ಅಂಪೈರ್‌ ಚೆಂಡನ್ನು ಪರಿಶೀಲನೆ ನಡೆಸಿದರು.

MI vs KKR: ಮತ್ತೆ ಮುಂಬೈ ಇಂಡಿಯನ್ಸ್ ವಿರುದ್ಧ ಟಾಸ್‌ ಫಿಕ್ಸಿಂಗ್‌ ಆರೋಪ

ಅಂಪೈರ್ ಫೈಸಲ್ ಅವರು ನಾಯಕ ಅಫ್ರಿದಿಯನ್ನು ಕರೆದು, ಚೆಂಡನ್ನು ಪರಿಶೀಲಿಸಿ, ಬಾಂಗ್ಲಾದೇಶದ ಎರಡನೇ ಆನ್-ಫೀಲ್ಡ್ ಅಂಪೈರ್ ಶರ್ಫುದ್ದೌಲಾ ಅವರೊಂದಿಗೆ ದೀರ್ಘ ಚರ್ಚೆ ನಡೆಸಿದರು. ಇಬ್ಬರೂ ಅಂಪೈರ್‌ಗಳು ಚೆಂಡನ್ನು ಉದ್ದೇಶಪೂರ್ವಕವಾಗಿ ವಿರೂಪಗೊಳಿಸಲಾಗಿದೆ ಎಂದು ನಿರ್ಧರಿಸಿ ಕರಾಚಿಗೆ ಐದು ಪೆನಾಲ್ಟಿ ರನ್‌ಗಳನ್ನು ನೀಡಿದರು. ಮಾತ್ರವಲ್ಲದೆ ಚೆಂಡನ್ನು ಕೂಡ ಬದಲಾಯಿಸಿದರು. ಅಂತಿಮವಾಗಿ ಕರಾಚಿ ತಂಡ 19.3 ಓವರ್‌ಗಳಲ್ಲಿ ಗುರಿ ಬೆನ್ನಟ್ಟಿ ನಾಲ್ಕು ವಿಕೆಟ್‌ ಅಂತರದ ಗೆಲುವು ದಾಖಲಿಸಿದರು.

ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಂದಿನ ವಿಚಾರಣೆಯ ಸಮಯದಲ್ಲಿ ಹೈ-ಡೆಫಿನಿಷನ್ ಪ್ರಸಾರ ದೃಶ್ಯಾವಳಿಗಳು ಮತ್ತು ಮ್ಯಾಚ್ ರೆಫರಿಯ ವರದಿಯನ್ನು ವಿವರವಾಗಿ ಪರಿಶೀಲಿಸುವ ನಿರೀಕ್ಷೆಯಿದೆ, ಇದು ಚೆಂಡಿನ ಭೌತಿಕ ಸ್ಥಿತಿಯು ಅಂಪೈರ್‌ಗಳ ಉದ್ದೇಶಪೂರ್ವಕ ವಿರೂಪಗೊಳಿಸುವಿಕೆಯ ವೀಕ್ಷಣೆಗಳಿಗೆ ಹೊಂದಿಕೆಯಾಗುತ್ತದೆಯೇ ಎಂದು ನಿರ್ಧರಿಸುತ್ತದೆ.



ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಸಿಲುಕಿದಾಗ, ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಅವರಂತಹ ಉನ್ನತ ಆಟಗಾರರಿಗೂ ದೀರ್ಘಾವಧಿಯ ನಿಷೇಧ ಹೇರಲಾಯಿತು ಎಂಬುದನ್ನು ಗಮನಿಸಬೇಕು. ಕೇಂದ್ರಬಿಂದುವಾಗಿರುವ ಫಖರ್, ಶಾಹೀನ್ ಮತ್ತು ಹ್ಯಾರಿಸ್ ವಿರುದ್ಧವೂ ಇದೇ ರೀತಿಯ ಕ್ರಮ ಕೈಗೊಳ್ಳಬಹುದೇ? ಎಂದು ಕಾದು ನೋಡಬೇಕಿದೆ.