MI vs KKR: ಮತ್ತೆ ಮುಂಬೈ ಇಂಡಿಯನ್ಸ್ ವಿರುದ್ಧ ಟಾಸ್ ಫಿಕ್ಸಿಂಗ್ ಆರೋಪ
Toss Controversy MI vs KKR Clash: 2024ರ ಐಪಿಎಲ್ನಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಆರ್‌ಸಿಬಿ ವಿರುದ್ಧದ ಪಂದ್ಯದ ವೇಳೆ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಟಾಸ್ ಹಾಕಿದಾಗ, ನಾಣ್ಯವು ಸ್ವಲ್ಪ ದೂರದಲ್ಲಿ ಬಿದ್ದಿತ್ತು. ನಾಣ್ಯವನ್ನು ನೋಡಿ ಮ್ಯಾಚ್ ರೆಫರಿ ಮುಂಬೈ ಇಂಡಿಯನ್ಸ್ ಟಾಸ್ ಗೆದ್ದಿದೆ ಎಂದಿದ್ದರು. ಆಗಲೂ ನಾಣ್ಯವನ್ನು ವಿಡಿಯೊ ಮೂಲಕ ತೋರಿಸದೇ ಇದ್ದದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.
Toss Controversy MI vs KKR Clash -
ಮುಂಬಯಿ, ಮಾ.29: ಪ್ರತಿ ಬಾರಿಯಂತೆ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್(IPL 2026)ನಲ್ಲಿಯೂ ಮುಂಬೈ ಇಂಡಿಯನ್ಸ್(Mumbai Indians) ತಂಡದ ವಿರುದ್ಧ ಟಾಸ್ ಫಿಕ್ಸಿಂಗ್ ಆರೋಪ ಕೇಳಿಬಂದಿದೆ. ಭಾನುವಾರ ನಡೆದಿದ್ದ ಕೋಲ್ಕತಾ ನೈಟ್‌ರೈಡರ್ಸ್(MI vs KKR) ವಿರುದ್ಧದ ಪಂದ್ಯದ ಟಾಸ್ ಪ್ರಕ್ರಿಯೆಯ ವಿಡಿಯೊ ದೊಡ್ಡ ವಿವಾದ ಸೃಷ್ಟಿಸಿದೆ.
ಮುಂಬೈ ತಂಡದ ನಾಯಕ ಹಾರ್ದಿಕ್ ಪಾಂಡ್ಯ ನಾಣ್ಯವನ್ನು ಚಿಮ್ಮಿಸಿದಾಗ ಎದುರಾಳಿ ಕೆಕೆಆರ್ ತಂಡದ ನಾಯಕ ಅಜಿಂಕ್ಯ ರಹಾನೆ ಟೈಲ್ಸ್ ಎಂದು ಹೇಳಿದರು. ದೂರಕ್ಕೆ ಹೋಗಿ ಬಿದ್ದ ನಾಣ್ಯವನ್ನು ಕ್ಯಾಮೆರಾದಲ್ಲಿ ತೋರಿಸುವ ಮುನ್ನವೇ ರೆಫರಿ ಮುಂಬೈ ಇಂಡಿಯನ್ಸ್ ಟಾಸ್ ಗೆದ್ದಿದೆ ಎಂದು ಘೋಷಿಸಿದರು. ನಿಯಮದ ಪ್ರಕಾರ ಕ್ಯಾಮೆರಾದಲ್ಲಿ ಟಾಸ್ ಕಾಯಿನ್ ತೋರಿಸಬೇಕು. ಆದರೆ ಈ ಪಂದ್ಯದಲ್ಲಿ ಈ ನಿಯಮವನ್ನು ಗಾಳಿಗೆ ತೂರಿ ಟಾಸ್ ಫಿಕ್ಸಿಂಗ್ ಮಾಡಲಾಗಿದೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ.
ಮುಂಬೈ ಇಂಡಿಯನ್ಸ್ ಪಂದ್ಯದ ವೇಳೆ ಮಾತ್ರ ಟಾಸ್ ಪ್ರಕ್ರಿಯೆ ಈ ರೀತಿ ಆಗುತ್ತದೆ. ಬೇರಾವ ಪಂದ್ಯದಲ್ಲಿಯೂ ಇದು ಸಂಭವಿಸುದಿಲ್ಲ. ಇದೊಂದು ಮುಂಬೈ ಫ್ರಾಂಚೈಸಿಯ ವ್ಯವಸ್ಥಿತ ಕೃತ್ಯ ಎಂದು ಹಲವರು ಆರೋಪಿಸಿದ್ದಾರೆ.
ಎರಡು ಬಾರಿ ಡಿಆರ್‌ಎಸ್ ಪರಿಶೀಲನೆ ರದ್ದುಗೊಳಿಸಿದ ಬಿಸಿಸಿಐ!
2024ರ ಐಪಿಎಲ್ನಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಆರ್‌ಸಿಬಿ ವಿರುದ್ಧದ ಪಂದ್ಯದ ವೇಳೆ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಟಾಸ್ ಹಾಕಿದಾಗ, ನಾಣ್ಯವು ಸ್ವಲ್ಪ ದೂರದಲ್ಲಿ ಬಿದ್ದಿತ್ತು. ನಾಣ್ಯವನ್ನು ನೋಡಿ ಮ್ಯಾಚ್ ರೆಫರಿ ಮುಂಬೈ ಇಂಡಿಯನ್ಸ್ ಟಾಸ್ ಗೆದ್ದಿದೆ ಎಂದಿದ್ದರು. ಆಗಲೂ ನಾಣ್ಯವನ್ನು ವಿಡಿಯೊ ಮೂಲಕ ತೋರಿಸದೇ ಇದ್ದದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಅಂದಿನ ಆರ್‌ಸಿಬಿ ನಾಯಕನಾಗಿದ್ದ ಫಾಫ್ ಡುಪ್ಲೆಸಿಸ್ ಈ ಘಟನೆ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು.
#HardikPandya flicks the coin… camera moves away 😅
— Honest Review (@honestreview01) March 29, 2026
Didn’t see head or tail, but #MumbaiIndians win the toss! 🎥➡️🤷♂️🏏
“A miracle like this is possible only for the #Mumbai team.” #IPL pic.twitter.com/MaC93os6XT
ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಬೌಲಿಂಗ್ ಆಯ್ದುಕೊಂಡಿತು. ಬ್ಯಾಟಿಂಗ್ ಆಹ್ವಾನ ಪಡೆದ ಕೆಕೆಆರ್ ಬೊಂಬಾಟ್ ಬ್ಯಾಟಿಂಗ್ ನಡೆಸಿ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 220 ರನ್ ಪೇರಿಸಿತು. ಜಬಾಬಿತ್ತ ಮುಂಬೈ ತಂಡ ಈ ಮೊತ್ತವನ್ನು 19.1 ಓವರ್‌ಗಳಲ್ಲಿ 224 ರನ್ ಬಾರಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿತು.