ವಿಶಾಖಪಟ್ಟಣಂ, ಡಿ.6: ಭಾರತ ವಿರುದ್ಧದ ಮೂರನೇ ಏಕದಿನ(IND vs SA 3rd ODI) ಪಂದ್ಯದಲ್ಲಿ ಅಮೋಘ ಶತಕ ಬಾರಿಸಿದ ದಕ್ಷಿಣ ಆಫ್ರಿಕಾದ ಎಡಗೈ ಆರಂಭಿಕ ಬ್ಯಾಟರ್ ಕ್ವಿಂಟನ್ ಡಿ ಕಾಕ್(Quinton de Kock) ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ಭಾರತದ ವಿರುದ್ಧ ಅತಿ ಹೆಚ್ಚು ಏಕದಿನ ಶತಕಗಳನ್ನು ಗಳಿಸಿದ ಆರಂಭಿಕ ಆಟಗಾರ ಸನತ್ ಜಯಸೂರ್ಯ ಅವರ ದಾಖಲೆಯನ್ನು ಸರಿಗಟ್ಟಿದರು. ಇದು ಡಿ ಕಾಕ್ ಅವರ ಭಾರತದ ವಿರುದ್ಧ ಏಳನೇ ಶತಕ.
ಸರಣಿಯ ಆರಂಭಿಕ ಎರಡು ಪಂದ್ಯಗಳಲ್ಲಿ ನಿರೀಕ್ಷಿತ ಬ್ಯಾಟಿಂಗ್ ತೋರದ ಡಿ ಕಾಕ್ ಈ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನದ ಮೂಲಕ ಗಮನಸೆಳೆದರು. ಆರಂಭದಿಂದಲೇ ಡಿ ಕಾಕ್ ಸಂಪೂರ್ಣ ನಿಯಂತ್ರಣದಲ್ಲಿ ಕಾಣಿಸಿಕೊಂಡರು. 80 ಎಸೆತಗಳಲ್ಲಿ ಶತಕ ಗಳಿಸಿದರು. ಅಂತಿಮವಾಗಿ 106 ರನ್ ಗಳಿಸಿ ಪ್ರಸಿದ್ಧ್‌ಗೆ ವಿಕೆಟ್ ಒಪ್ಪಿಸಿದರು. ಇದಕ್ಕೂ ಮುನ್ನ ಪ್ರಸಿದ್ಧ್‌ಗೆ ಸತತ ಸಿಕ್ಸರ್ ಮತ್ತು ಬೌಂಡರಿ ರುಚಿ ತೋರಿಸಿದ್ದರು. ಡಿ ಕಾಕ್ ಬ್ಯಾಟಿಂಗ್ ಇನಿಂಗ್ಸ್‌ನಲ್ಲಿ 6 ಸಿಕ್ಸರ್ ಮತ್ತು 8 ಬೌಂಡರಿ ಸಿಡಿಯಿತು.
ಡಿ ಕಾಕ್ 23 ಇನ್ನಿಂಗ್ಸ್‌ಗಳಲ್ಲಿ ಭಾರತ ವಿರುದ್ಧ 7 ಶತಕ ಬಾರಿಸಿದರೆ, ಶ್ರೀಲಂಕಾದ ಜಯಸೂರ್ಯ 85 ಇನ್ನಿಂಗ್ಸ್ ಆಡಿದ್ದರು. ಎಬಿ ಡಿವಿಲಿಯರ್ಸ್ ಅವರ ಭಾರತದಲ್ಲಿ ಏಳು ಏಕದಿನ ಶತಕಗಳ ದಾಖಲೆಯನ್ನು ಕೂಡ ಡಿ ಕಾಕ್ ಸರಿಗಟ್ಟಿದರು. ಇದು ಯಾವುದೇ ಪ್ರವಾಸಿ ಬ್ಯಾಟ್ಸ್‌ಮನ್ ಗಳಿಸಿದ ಅತಿ ಹೆಚ್ಚು ಶತಕ.
500 ಟಿ20 ವಿಕೆಟ್ ಪೂರೈಸಿದ ಕೆಕೆಆರ್ ಪವರ್ ಕೋಚ್ ಆಂಡ್ರೆ ರಸೆಲ್
ಭಾರತ ವಿರುದ್ಧ ಅತಿ ಹೆಚ್ಚು ಏಕದಿನ ಶತಕಗಳು
7 ಶತಕ; ಕ್ವಿಂಟನ್ ಡಿ ಕಾಕ್ (23 ಇನ್ನಿಂಗ್ಸ್)
7 ಶತಕ; ಸನತ್ ಜಯಸೂರ್ಯ (85 ಇನ್ನಿಂಗ್ಸ್)
6 ಶತಕ; ಎಬಿ ಡಿವಿಲಿಯರ್ಸ್ (32 ಇನ್ನಿಂಗ್ಸ್)
6 ಶತಕ; ರಿಕಿ ಪಾಂಟಿಂಗ್ (59 ಇನ್ನಿಂಗ್ಸ್)
6 ಶತಕ; ಕುಮಾರ ಸಂಗಕ್ಕಾರ (71 ಇನ್ನಿಂಗ್ಸ್)
ನಿಯೋಜಿತ ವಿಕೆಟ್‌ಕೀಪರ್ ಆಗಿ ಅತಿ ಹೆಚ್ಚು ಏಕದಿನ ಶತಕಗಳು
ಕುಮಾರ್ ಸಂಗಕ್ಕಾರ; 23 ಶತಕ
ಕ್ವಿಂಟನ್ ಡಿ ಕಾಕ್; 23 ಶತಕ
ಶೈ ಹೋಪ್; 19 ಶತಕ
ಆಡಮ್ ಗಿಲ್‌ಕ್ರಿಸ್ಟ್; 16 ಶತಕ
ಜೋಸ್ ಬಟ್ಲರ್; 11 ಶತಕ
ಎಬಿ ಡಿವಿಲಿಯರ್ಸ್, ಎಂಎಸ್ ಧೋನಿ; ತಲಾ 10 ಶತಕ
ವಿದೇಶದಲ್ಲಿ ಅತಿ ಹೆಚ್ಚು ಏಕದಿನ ಶತಕಗಳು
ಸಚಿನ್ ತೆಂಡೂಲ್ಕರ್ - ಯುಎಇ(7)
ಸಯೀದ್ ಅನ್ವರ್ - ಯುಎಇ(7)
ಎಬಿ ಡಿವಿಲಿಯರ್ಸ್ - ಭಾರತದಲ್ಲಿ(7)
ರೋಹಿತ್ ಶರ್ಮಾ - ಇಂಗ್ಲೆಂಡ್(7)
ಕ್ವಿಂಟನ್ ಡಿ ಕಾಕ್ - ಭಾರತದಲ್ಲಿ(7)