R Ashwin: ಸಿಡ್ನಿ ಥಂಡರ್ ಪರ ಸ್ಪಿನ್ ಮೋಡಿ ಮಾಡಲು ಆರ್. ಅಶ್ವಿನ್ ಸಜ್ಜು
ಬಿಗ್‌ಬ್ಯಾಷ್ ಮಾತ್ರವಲ್ಲದೆ ಐಎಲ್‌ಟಿ–20 ಹರಾಜಿನಲ್ಲಿ ಅಶ್ವಿನ್ ಭಾಗವಹಿಸಿದ್ದು, ಜನವರಿ 4 ರಂದು ಹರಾಜು ಮುಕ್ತಾಯಗೊಂಡ ಬಳಿಕ ಡಿ.14 ರಿಂದ ಜನವರಿ 18 ರವರೆಗೆ ನಡೆಯುವ ಈ ಋತುವಿನ ಕೊನೆಯ ಭಾಗದಲ್ಲಿ ಅವರು ಥಂಡರ್ ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ.

-

ನವದೆಹಲಿ: ಅಂತಾರಾಷ್ಟ್ರೀಯ ಮತ್ತು ಐಪಿಎಲ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿರುವ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್(R Ashwin) ಅವರು ಇದೀಗ ಮುಂಬರುವ ಬಿಗ್ ಬ್ಯಾಷ್ ಲೀಗ್ (Big Bash League) ನಲ್ಲಿ ಸಿಡ್ನಿ ಥಂಡರ್ ತಂಡದ ಪರ ಆಡಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಮುಂಬರುವ ಬಿಬಿಎಲ್ ಆವೃತ್ತಿಯಲ್ಲಿ ಸಿಡ್ನಿ ಥಂಡರ್(Sydney Thunder) ತಂಡದ ಪರ ಕಣಕ್ಕಿಳಿಯಲು ಅಶ್ವಿನ್ ಸಜ್ಜಾಗಿದ್ದು ಆ ಮೂಲಕ ಈ ಟೂರ್ನಿಯಲ್ಲಿ ಭಾಗವಹಿಸಲಿರುವ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಕಳೆದ ವರ್ಷದ ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ವೇಳೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದ ಅಶ್ವಿನ್, 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯದ ಬಳಿಕ ಇತ್ತೀಚೆಗೆ ಐಪಿಎಲ್‌ಗೂ ನಿವೃತ್ತಿ ಘೋಷಿಸಿದ್ದರು. ಇದೀಗ ಅವರು ‘ಸಿಡ್ನಿ ಥಂಡರ್ ತಂಡದ ಪರ ಕಣಕ್ಕಿಳಿಯಲಿದ್ದಾರೆ‘ ಎಂದು 'ಫಾಕ್ಸ್ ಸ್ಪೋರ್ಟ್ಸ್' ವರದಿ ಮಾಡಿದೆ. ಈ ವಾರದ ಕೊನೆಯಲ್ಲಿ ಸಿಡ್ನಿ ಥಂಡರ್ ಫ್ರಾಂಚೈಸಿ ಅಧಿಕೃತವಾಗಿ ಘೋಷಣೆ ಮಾಡುವ ನಿರೀಕ್ಷೆಯಿದೆ.
ಬಿಗ್‌ಬ್ಯಾಷ್ ಮಾತ್ರವಲ್ಲದೆ ಐಎಲ್‌ಟಿ–20 ಹರಾಜಿನಲ್ಲಿ ಅಶ್ವಿನ್ ಭಾಗವಹಿಸಿದ್ದು, ಜನವರಿ 4 ರಂದು ಹರಾಜು ಮುಕ್ತಾಯಗೊಂಡ ಬಳಿಕ ಡಿ.14 ರಿಂದ ಜನವರಿ 18 ರವರೆಗೆ ನಡೆಯುವ ಈ ಋತುವಿನ ಕೊನೆಯ ಭಾಗದಲ್ಲಿ ಅವರು ಥಂಡರ್ ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ.
ಬಿಸಿಸಿಐ ನಿಯಮದ ಪ್ರಕಾರ ರಾಷ್ಟ್ರೀಯ ಅಥವಾ ಐಪಿಎಲ್‌ನಲ್ಲಿ ತೊಡಗಿಸಿಕೊಂಡಿರುವಾಗ ಭಾರತೀಯ ಆಟಗಾರರು ವಿದೇಶಿ ಲೀಗ್‌ಗಳಲ್ಲಿ ಭಾಗವಹಿಸುವುವಂತಿಲ್ಲ. ಅಶ್ವಿನ್ ಈ ಎರಡೂ ಮಾದರಿಯಿಂದಲೂ ನಿವೃತ್ತಿಯಾಗಿರುವ ಕಾರಣ ಅವರು ವಿದೇಶಿ ಲೀಗ್ ಆಡಬಹುದು.
ಇದನ್ನೂ ಓದಿ IND vs PAK: ʻಆಂಡಿ ಪೈಕ್ರಾಫ್ಟ್ ಸ್ಕೂಲ್ ಟೀಚರ್ ಅಲ್ಲʼ-ಪಾಕಿಸ್ತಾನವನ್ನು ಟೀಕಿಸಿದ ಆರ್ ಅಶ್ವಿನ್!