ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

SL Bhyrappa: ಸಾಹಿತ್ಯ ಲೋಕಕ್ಕೆ ಭೈರಪ್ಪನವರ ಪ್ರವೇಶ ಹೇಗಾಯ್ತು? ಟಾಪ್‌ ಟೆನ್‌ ಕಾದಂಬರಿಗಳು ಯಾವುವು ಗೊತ್ತಾ?

SL Bhyrappa passes away: ಭೈರಪ್ಪನವರ ಕಾದಂಬರಿಗಳಾದ ‘ವಂಶವೃಕ್ಷ’, ‘ತಬ್ಬಲಿಯು ನೀನಾದೆ ಮಗನೆ’, ‘ನಾಯಿನೆರಳು’, ‘ಮತದಾನ’ ಕೃತಿಗಳು ಚಲನಚಿತ್ರಗಳಾಗಿ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಗಳಿಸಿ ಜನಪ್ರಿಯಗೊಂಡಿವೆ. ‘ಗೃಹಭಂಗ’ ದೂರದರ್ಶನದಲ್ಲಿ ಧಾರಾವಾಹಿಯಾಗಿ ಮೂಡಿಬಂದು ಎಲ್ಲಾ ಸಹೃದಯರ ಹೃದಯದಲ್ಲಿ ನೆಲೆನಿಂತಿದೆ.

ಸಾಹಿತ್ಯ ಲೋಕಕ್ಕೆ ಭೈರಪ್ಪನವರ ಪ್ರವೇಶ ಹೇಗಾಯ್ತು?

-

Rakshita Karkera Rakshita Karkera Sep 24, 2025 3:30 PM

ಬೆಂಗಳೂರು: ಸಾಹಿತ್ಯ ಕ್ಷೇತ್ರದ ಧೃವತಾರೆ ಭೈರಪ್ಪನವರು ಮೊತ್ತಮೊದಲು ಬರೆದದ್ದು ಸಣ್ಣಕತೆ. ಅವರ ʼಅವ್ವʼ ಎಂಬ ಸಣ್ಣಕಥೆ ಕಸ್ತೂರಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದು, ಇದನ್ನು ಅವರ ಮೊದಲ ಸಣ್ಣಕಥೆ ಎಂದು ಪರಿಗಣಿಸಲಾಗಿದೆ. ಅವರ ಕತೆಗಳು ʼಗತಜನ್ಮʼ ಎಂಬ ಹೆಸರಿನಲ್ಲಿ ಸಂಕಲನವಾಗಿ ನಂತರ ಪ್ರಕಟವಾದವು.

ನಾಲ್ಕು ಚಲನಚಿತ್ರ, ಒಂದು ಧಾರಾವಾಹಿ

ಭೈರಪ್ಪನವರ ಕಾದಂಬರಿಗಳಾದ ‘ವಂಶವೃಕ್ಷ’, ‘ತಬ್ಬಲಿಯು ನೀನಾದೆ ಮಗನೆ’, ‘ನಾಯಿನೆರಳು’, ‘ಮತದಾನ’ ಕೃತಿಗಳು ಚಲನಚಿತ್ರಗಳಾಗಿ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಗಳಿಸಿ ಜನಪ್ರಿಯಗೊಂಡಿವೆ. ‘ಗೃಹಭಂಗ’ ದೂರದರ್ಶನದಲ್ಲಿ ಧಾರಾವಾಹಿಯಾಗಿ ಮೂಡಿಬಂದು ಎಲ್ಲಾ ಸಹೃದಯರ ಹೃದಯದಲ್ಲಿ ನೆಲೆನಿಂತಿದೆ. ವಂಶವೃಕ್ಷ ಸಿನಿಮಾ ತೆಲುಗಿನಲ್ಲಿ ಅನಿಲ್‌ ಕಪೂರ್‌ ನಟನೆಯಲ್ಲಿ ರಿಮೇಕ್‌ ಆಗಿದೆ. ʼದಾಟುʼ ಹಿಂದಿಯಲ್ಲಿ ಟಿವಿ ಧಾರಾವಾಹಿಯಾಗಿದೆ.

ಅತಿ ಹೆಚ್ಚು ಗೌರವಧನ

ಕನ್ನಡದಲ್ಲಿ ತಮ್ಮ ಪುಸ್ತಕಗಳಿಗೆ ಅತಿ ಹೆಚ್ಚು ಗೌರವಧನ ಪಡೆದ ಕಾದಂಬರಿಕಾರ ಎಸ್ ಎಲ್‌ ಭೈರಪ್ಪನವರು. ಆದರೆ ಈ ಹಣವನ್ನು ಅವರು ತಮಗಾಗಿ ಬಳಸಲಿಲ್ಲ. ಬದಲಾಗಿ ಅದಕ್ಕಾಗಿಯೇ ಒಂದು ಟ್ರಸ್ಟ್‌ ರಚಿಸಿದ್ದು, ಅದರ ಮೂಲಕ ಆ ಹಣವನ್ನು ಬಡ, ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ವಿನಿಯೋಗಿಸುತ್ತಿದ್ದಾರೆ. ತನಗೆ ಬಾಲ್ಯದಲ್ಲಿ ಒದಗಿದ ಕಷ್ಟ ಬೇರೆ ಮಕ್ಕಳಿಗೆ ಬರದಿರಲಿ ಎಂಬುದು ಅವರ ಆಶಯ.

ಅತಿ ಹೆಚ್ಚು ಅನುವಾದ

ಭೈರಪ್ಪನವರ ಬಹುತೇಕ ಎಲ್ಲ ಕೃತಿಗಳೂ ಇತರ ಭಾಷೆಗಳಿಗೆ ಅನುವಾದವಾಗಿವೆ. ಕನ್ನಡದಂತೆಯೇ ಮರಾಠಿ ಹಾಗೂ ಹಿಂದಿಯಲ್ಲೂ ಅವರು ಬೆಸ್ಟ್ ಸೆಲ್ಲರ್.‌ ಎಲ್ಲ ಕಾದಂಬರಿಗಳೂ ಭಾರತದ ಹೆಚ್ಚಿನ ಭಾಷೆಗಳಿಗೆ ಹಾಗೂ 6 ಕಾದಂಬರಿಗಳು ಇಂಗ್ಲಿಷ್‌ಗೆ ಅನುವಾದ ಆಗಿವೆ. ಇವರ ಕೃತಿಗಳ ಮೇಲೆ 20ಕ್ಕೂ ಹೆಚ್ಚು ಮಂದಿ ಪಿಎಚ್‌.ಡಿ ಮಾಡಿದ್ದಾರೆ.

ಟಾಪ್‌ ಟೆನ್‌ ಕಾದಂಬರಿಗಳು

  • ವಂಶವೃಕ್ಷ
  • ಗೃಹಭಂಗ
  • ಪರ್ವ
  • ಉತ್ತರಕಾಂಡ
  • ಮಂದ್ರ
  • ಆವರಣ
  • ನಿರಾಕರಣ
  • ದಾಟು
  • ಅನ್ವೇಷಣ
  • ಸಾರ್ಥ

ಪದ್ಮಶ್ರೀ, ಪದ್ಮಭೂಷಣ, ಸರಸ್ವತಿ ಸಮ್ಮಾನ್

ಕೇಂದ್ರ ಸರ್ಕಾರದ ಪದ್ಮಗೌರವಗಳಾದ ಪದ್ಮಶ್ರೀ ಹಾಗೂ ಪದ್ಮಭೂಷಣ ಎರಡೂ ಪ್ರಶಸ್ತಿಗಳನ್ನು ಪಡೆದ ಕನ್ನಡದ ಕೆಲವೇ ಬರಹಗಾರರಲ್ಲಿ ಭೈರಪ್ಪ ಒಬ್ಬರು. ಬಿರ್ಲಾ ಫೌಂಡೇಶನ್‌ ನೀಡುವ ಸರಸ್ವತಿ ಸಮ್ಮಾನ್‌ ಪ್ರಶಸ್ತಿಯನ್ನು ಅವರು ಸ್ವೀಕರಿಸಿದ್ದಾರೆ. ಇದು ಭಾರತದಲ್ಲೇ ಅತಿ ಹೆಚ್ಚಿನ ನಗದು ಮೊತ್ತ ನೀಡುವ (15 ಲಕ್ಷ ರೂ.) ಪ್ರಶಸ್ತಿ.