ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ರಣಜಿ ಕ್ವಾರ್ಟರ್‌ಫೈನಲ್: ಗೆಲುವಿನ ನಿರೀಕ್ಷೆಯಲ್ಲಿ ಕರ್ನಾಟಕ

Ranji Trophy Quarter-Final: ಎರಡನೇ ದಿನದಾಟದ ಮುಕ್ತಾಯಕ್ಕೆ ಮುಂಬೈ ತಂಡವು 2 ವಿಕೆಟ್‌ಗಳಿಗೆ 189 ರನ್ ಗಳಿಸಿ ಒಟ್ಟು 136 ರನ್‌ಗಳ ಮುನ್ನಡೆ ಸಾಧಿಸಿತ್ತು. ಭಾನುವಾರ ಆಟ ಮುಂದುವರಿಸಿದ ಮುಂಬೈ ಕೆಳಕ್ರಮಾಂಕದಲ್ಲಿ ತನುಷ್ ಕೋಟ್ಯಾನ್ ಅಜೇಯ 48 ಮತ್ತು ತುಷಾರ್ ದೇಶಪಾಂಡೆ 47 ಬ್ಯಾಟಿಂಗ್‌ ನೆರವಿನಿಂದ 98.3 ಓವರ್‌ಗಳಲ್ಲಿ 377 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು.

Rahul

ಮುಂಬಯಿ, ಫೆ.8: ಕರ್ನಾಟಕ ಮತ್ತು ಮುಂಬೈ(Mumbai vs Karnataka) ನಡುವಣ ರಣಜಿ ಟ್ರೋಫಿ ಕ್ವಾರ್ಟರ್‌ ಫೈನಲ್(Ranji Trophy Quarter-Final) ಪಂದ್ಯವು ರೋಚಕ ಹಂತಕ್ಕೆ ತಲುಪಿದೆ. ರಾಜ್ಯ ತಂಡಕೆ ಗೆಲ್ಲಲು ಇನ್ನೂ 212 ರನ್ ಗಳಿಸಬೇಕಿದ್ದು ಇನ್ನೂ ಎರಡು ದಿನ ಬಾಕಿ ಉಳಿದಿವೆ. ಭಾನುವಾರ ದಿನದಾಟದ ಅಂತ್ಯಕ್ಕೆ 2 ವಿಕೆಟ್‌ಗೆ 113 ರನ್‌ ಗಳಿಸಿದೆ. ಅನುಭವಿ ಬ್ಯಾಟರ್‌ ಕೆ.ಎಲ್.‌ ರಾಹುಲ್‌ 60* ಮತ್ತು ಕರುಣ್‌ ನಾಯರ್‌ 39* ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಎಂಸಿಎ–ಬಿಕೆಸಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕರ್ನಾಟಕವು ಶನಿವಾರ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಿತ್ತು. ಆದರೆ ಎರಡನೇ ಇನಿಂಗ್ಸ್‌ನಲ್ಲಿ ತಿರುಗೇಟು ನೀಡಿದ್ದ ಆತಿಥೇಯ ಮುಂಬೈ, ಕರ್ನಾಟಕಕ್ಕೆ 325 ರನ್‌ಗಳ ಜಯದ ಗುರಿಯೊಡ್ಡಿತು.

ಚೇಸಿಂಗ್‌ ಆರಂಭಿಸಿದ ಕರ್ನಾಟಕ ಆರಂಭದಲ್ಲೇ ಆಘಾತ ಎದುರಿಸಿತು. ಮಯಾಂಕ್‌ ಅಗರ್ವಾಲ್‌ 3 ರನ್‌ ಗಳಿಸಿದ ವೇಳೆ ವಿಕೆಟ್‌ ಕಳೆದುಕೊಂಡರು. ಆದರೆ ನಾಯಕ ದೇವದತ್ತ ಪಡಿಕ್ಕಲ್ (39) ಮತ್ತು ರಾಹುಲ್ ಅವರು ಎರಡನೇ ವಿಕೆಟ್ ಜತೆಯಾಟದಲ್ಲಿ 84 ರನ್ ಸೇರಿಸಿ ಆಸರೆಯಾದರು. ಆದರೆ ತನುಷ್ ಕೋಟ್ಯಾನ್ ಅವರ ಬೌಲಿಂಗ್‌ನಲ್ಲಿ ಯಶಸ್ವಿ ಜೈಸ್ವಾಲ್ ಪಡೆದ ಕ್ಯಾಚ್‌ಗೆ ದೇವದತ್ತ ಔಟಾದರು. ಆ ಬಳಿಕ ರಾಹುಲ್‌ ಜತೆಗೂಡಿದ ನಾಯರ್‌ ಉತ್ತಮ ಸಾಥ್‌ ನೀಡಿದರು. ಸದ್ಯ ಬ್ಯಾಟಿಂಗ್‌ ಕಾಯ್ದುಕೊಂಡಿರುವ ಉಭಯ ಆಟಗಾರರು ಸೋಮವಾರ ಲಂಚ್‌ ವರೆಗೆ ನಿಂತು ಆಡಿದರೆ ಗೆಲುವು ನಮ್ಮವರದ್ದಾಗಲಿದೆ.

ನಮೀಬಿಯಾ ಪಂದ್ಯಕ್ಕೂ ಮುನ್ನ ತಂಡ ಸೇರಲಿದ್ದಾರೆ ವಾಷಿಂಗ್ಟನ್‌ ಸುಂದರ್‌

ಎರಡನೇ ದಿನದಾಟದ ಮುಕ್ತಾಯಕ್ಕೆ ಮುಂಬೈ ತಂಡವು 2 ವಿಕೆಟ್‌ಗಳಿಗೆ 189 ರನ್ ಗಳಿಸಿ ಒಟ್ಟು 136 ರನ್‌ಗಳ ಮುನ್ನಡೆ ಸಾಧಿಸಿತ್ತು. ಭಾನುವಾರ ಆಟ ಮುಂದುವರಿಸಿದ ಮುಂಬೈ ಕೆಳಕ್ರಮಾಂಕದಲ್ಲಿ ತನುಷ್ ಕೋಟ್ಯಾನ್ ಅಜೇಯ 48 ಮತ್ತು ತುಷಾರ್ ದೇಶಪಾಂಡೆ 47 ಬ್ಯಾಟಿಂಗ್‌ ನೆರವಿನಿಂದ 98.3 ಓವರ್‌ಗಳಲ್ಲಿ 377 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು.

ಸಂಕ್ಷಿಪ್ತ ಸ್ಕೋರು

ಮೊದಲ ಇನಿಂಗ್ಸ್: ಮುಂಬೈ 48.1 ಓವರ್‌ಗಳಲ್ಲಿ 120. ಕರ್ನಾಟಕ: 47.1 ಓವರ್‌ಗಳಲ್ಲಿ 173. ಎರಡನೇ ಇನಿಂಗ್ಸ್: ಮುಂಬೈ: 98.3 ಓವರ್‌ಗಳಲ್ಲಿ 377 (ಆಕಾಶ್ ಆನಂದ್ 70, ಮುಷೀರ್ ಖಾನ್ 49, ಸಿದ್ಧೇಶ್ ಲಾಡ್ 25, ಸೂರ್ಯಾಂಶ್ ಶೆಡಗೆ 25, ಕೋಟ್ಯಾನ್ ಔಟಾಗದೇ 48, ತುಷಾರ್ ದೇಶಪಾಂಡೆ 47, ವಿದ್ಯಾಧರ್ ಪಾಟೀಲ 78ಕ್ಕೆ2, ಪ್ರಸಿದ್ಧಕೃಷ್ಣ 71ಕ್ಕೆ1, ವಿದ್ವತ್ ಕಾವೇರಪ್ಪ 78ಕ್ಕೆ2, ಶಿಖರ್ ಶೆಟ್ಟಿ 45ಕ್ಕೆ3).

ಕರ್ನಾಟಕ: 29 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 113 (ಕೆ.ಎಲ್. ರಾಹುಲ್ ಬ್ಯಾಟಿಂಗ್ 60, ದೇವದತ್ತ ಪಡಿಕ್ಕಲ್ 39, ಶಾರ್ದೂಲ್ ಠಾಕೂರ್ 24ಕ್ಕೆ1, ತನುಷ್ ಕೋಟ್ಯಾನ್ 13ಕ್ಕೆ1).