ನಮೀಬಿಯಾ ಪಂದ್ಯಕ್ಕೂ ಮುನ್ನ ತಂಡ ಸೇರಲಿದ್ದಾರೆ ವಾಷಿಂಗ್ಟನ್ ಸುಂದರ್
Washington Sundar: ವಾಷಿಂಗ್ಟನ್ ಸುಂದರ್ ಲಭ್ಯತೆ ಬಗ್ಗೆ ಹಲವು ಅನುಮಾನಗಳಿದ್ದವು. ಆದರೂ ಅವರನ್ನು ತಂಡದಿಂದ ಬಿಡುಗಡೆ ಮಾಡದೇ ಉಳಿಸಕೊಳ್ಳಲಾಗಿತ್ತು. ಇದೀಗ ಅವರು ಆಡಲು ಫಿಟ್ ಆಗಿರುವ ಕಾರಣ ತಂಡದ ಚಿಂತೆಯೊಂದು ದೂರವಾಗಿದೆ. ಸುಂದರ್ ಜಿಮ್‌ನಲ್ಲಿ ವ್ಯಾಯಾಮ ಮತ್ತು ನೆಟ್ಸ್‌ನಲ್ಲಿ ಬೌಲಿಂಗ್ ಅಭ್ಯಾಸ ನಡೆಸುತ್ತಿರುವ ವಿಡಿಯೊವನ್ನು ಭಾನುವಾರ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
washington sundar -
ಮುಂಬಯಿ, ಫೆ.8: ಫೆಬ್ರವರಿ 12 ರಂದು ನಮೀಬಿಯಾ ವಿರುದ್ಧದ ಟಿ20 ವಿಶ್ವಕಪ್ ಪಂದ್ಯಕ್ಕೂ ಮುನ್ನ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಭಾರತ ತಂಡ ಸೇರಲಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಸಂದರ್ಭದಲ್ಲಿ ವಾಷಿಂಗ್ಟನ್ ಸುಂದರ್ ಪಾರ್ಶ್ವ ನೋವು ಮತ್ತು ಪಕ್ಕೆಲುಬಿನ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಹೀಗಾಗಿ ಸರಣಿಯಿಂದಲೇ ಹೊರಗುಳಿದಿದ್ದರು. ಇದೀಗ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ನಾಯಕ ಸೂರ್ಯಕುಮಾರ್ ಯಾದವ್ ತಿಳಿಸಿದರು.
ಅಮೆರಿಕ ವಿರುದ್ಧದ ಪಂದ್ಯದ ಗೆಲವಿನ ಬಳಿಕ ಮಾತನಾಡಿರುವ ಸೂರ್ಯಕುಮಾರ್, ವಾಷಿಂಗ್ಟನ್ ಸುಂದರ್ ಫಿಟ್ ಸಂಪೂರ್ಣ ಫಿಟ್ ಆಗಿರುವುದಾಗಿ ವೈದ್ಯಕೀಯ ಮತ್ತು ಕ್ರೀಡಾ ವಿಜ್ಞಾನ ತಂಡ ಮಾಹಿತಿ ನೀಡಿದೆ. ಅವರು ನಮೀಬಿಯಾ ಪಂದ್ಯಕ್ಕೂ ಮುನ್ನ ದೆಹಲಿಯಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದರು.
ವಾಷಿಂಗ್ಟನ್ ಸುಂದರ್ ಲಭ್ಯತೆ ಬಗ್ಗೆ ಹಲವು ಅನುಮಾನಗಳಿದ್ದವು. ಆದರೂ ಅವರನ್ನು ತಂಡದಿಂದ ಬಿಡುಗಡೆ ಮಾಡದೇ ಉಳಿಸಕೊಳ್ಳಲಾಗಿತ್ತು. ಇದೀಗ ಅವರು ಆಡಲು ಫಿಟ್ ಆಗಿರುವ ಕಾರಣ ತಂಡದ ಚಿಂತೆಯೊಂದು ದೂರವಾಗಿದೆ. ಸುಂದರ್ ಜಿಮ್‌ನಲ್ಲಿ ವ್ಯಾಯಾಮ ಮತ್ತು ನೆಟ್ಸ್‌ನಲ್ಲಿ ಬೌಲಿಂಗ್ ಅಭ್ಯಾಸ ನಡೆಸುತ್ತಿರುವ ವಿಡಿಯೊವನ್ನು ಭಾನುವಾರ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಲಾಸ್ಟ್ ಓವರ್ ಥ್ರಿಲ್ಲರ್; ನೇಪಾಳ ಎದುರು ಸೋಲಿನ ಭೀತಿಯಿಂದ ಪಾರಾದ ಇಂಗ್ಲೆಂಡ್
ತೀವ್ರ ಜ್ವರದ ಕಾರಣ ಅಮೆರಿಕ ವಿರುದ್ಧ ಪಂದ್ಯ ಆಡದ ಜಸ್‌ಪ್ರೀತ್ ಬುಮ್ರಾ ದ್ವಿತೀಯ ಪಂದ್ಯದಲ್ಲಿ ಆಡಲಿದ್ದಾರಾ ಎಂದು ಕಾದು ನೋಡಬೇಕಿದೆ. ಒಂದೊಮ್ಮೆ ಜಸ್‌ಪ್ರೀತ್ ಆಡಿದರೆ ಅವರಿಗಾಗಿ ಅರ್ಶ್‌ದೀಪ್ ಸಿಂಗ್ ಜಾಗ ಬಿಡಬೇಕಾಗಬಹುದು. ಏಕೆಂದರೆ ಹರ್ಷಿತ್ ರಾಣಾ ಬದಲು ತಂಡ ಸೇರಿರುವ ಮೊಹಮ್ಮದ್ ಸಿರಾಜ್ ಅಮೆರಿಕ ವಿರುದ್ಧ ಅತ್ಯಮೋಘ ಬೌಲಿಂಗ್ ಪ್ರದರ್ಶನ ತೋರುವ ಮೂಲಕ ಮಿಂಚಿದ್ದರು.
ದ್ವಿತೀಯ ಪಂದ್ಯ ಯಾವಾಗ?
ಭಾರತ ಮತ್ತು ನಮೀಬಿಯಾ ನಡುವಣ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಫೆ.12 ರಂದು ನಡೆಯಲಿದೆ. ಬ್ಯಾಟಿಂಗ್ ಸ್ನೇಹಿ ಈ ಪಿಚ್‌ನಲ್ಲಿ ದೊಡ್ಡ ಮೊತ್ತ ನಿರೀಕ್ಷಿಸಬಹುದು. ಇಬ್ಬನಿ ಕಾಟ ಇರುವ ಕಾರಣದಿಂದ ಟಾಸ್ ಕೂಡ ಮುಖ್ಯ ಪಾತ್ರವಹಿಸಲಿದೆ.
ಭಾರತ ತಂಡ
ಇಶಾನ್ ಕಿಶನ್ (ವಿ.ಕೀ.), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್.