ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರಣಜಿ ಟ್ರೋಫಿ; ಕರ್ನಾಟಕದ ಸಂಭವನೀಯರ ತಂಡದಲ್ಲಿ ಕೆ.ಎಲ್‌ ರಾಹುಲ್

Ranji Trophy: ರಾಹುಲ್ ಜತೆಗೆ ದೇವದತ್ತ ಪಡಿಕ್ಕಲ್, ಪ್ರಸಿದ್ಧ ಕೃಷ್ಣ, ಕರುಣ್ ನಾಯರ್ ಇದ್ದಾರೆ. 12 ವರ್ಷಗಳ ಹಿಂದೆ ವಿನಯಕುಮಾರ್ ನಾಯಕತ್ವದಲ್ಲಿ ಕರ್ನಾಟಕ ತಂಡವು ರಣಜಿ ಟ್ರೋಫಿ ಜಯಿಸಿತ್ತು. ಅದರ ನಂತರ ಮತ್ತೆ ಗೆದ್ದಿಲ್ಲ. ಈಗ ಅವರು ಕೋಚ್ ಆಗಿ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ.

kl rahul

ಬೆಂಗಳೂರು, ಸೆ.22: ಮುಂಬರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಗೆ ಕರ್ನಾಟಕ 26 ಆಟಗಾರರ ಸಂಭವನೀಯರ ತಂಡವನ್ನು ಪ್ರಕಟಿಸಿದೆ. ಈ ತಂಡದಲ್ಲಿ ಟೀಮ್‌ ಇಂಡಿಯಾದ ಅನುಭವಿ ಆಟಗಾರ ಕೆ.ಎಲ್‌ ರಾಹುಲ್‌ ಹೆಸರು ಕೂಡ ಒಳಗೊಂಡಿದೆ. ಮುಖ್ಯ ಕೋಚ್ ಆಗಿ ನೇಮಕ ವಾಗಿರುವ ಆರ್. ವಿನಯಕುಮಾರ್ ಅವರಿಗೆ ಇದು ಮೊದಲ ಟೂರ್ನಿಯಾಗಿದೆ.

ರಾಹುಲ್ ಜತೆಗೆ ದೇವದತ್ತ ಪಡಿಕ್ಕಲ್, ಪ್ರಸಿದ್ಧ ಕೃಷ್ಣ, ಕರುಣ್ ನಾಯರ್ ಇದ್ದಾರೆ. 12 ವರ್ಷಗಳ ಹಿಂದೆ ವಿನಯಕುಮಾರ್ ನಾಯಕತ್ವದಲ್ಲಿ ಕರ್ನಾಟಕ ತಂಡವು ರಣಜಿ ಟ್ರೋಫಿ ಜಯಿಸಿತ್ತು. ಅದರ ನಂತರ ಮತ್ತೆ ಗೆದ್ದಿಲ್ಲ. ಈಗ ಅವರು ಕೋಚ್ ಆಗಿ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ.

ರಣಜಿ ಮಾತ್ರವಲ್ಲದೆ ಕರ್ನಲ್ ಸಿ.ಕೆ. ನಾಯ್ಡು ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಸಂಭವನೀಯರ ತಂಡವನ್ನು ಆಯ್ಕೆ ಮಾಡಲಾಗಿದೆ. ರಾಹುಲ್ ದ್ರಾವಿಡ್ ಪುತ್ರ ಸಮಿತ್ ಸ್ಥಾನ ಪಡೆದಿದ್ದಾರೆ.

ಸಂಭವನೀಯ ತಂಡಗಳು

ರಣಜಿ ಟ್ರೋಫಿ: ಮಯಂಕ್ ಅಗರವಾಲ್, ಕೆ.ಎಲ್. ರಾಹುಲ್, ಕರುಣ್ ನಾಯರ್, ಆರ್. ಸ್ಮರಣ್, ಕೆ.ವಿ. ಅನೀಶ್, ದೇವದತ್ತ ಪಡಿಕ್ಕಲ್, ರೋಹನ್ ಎ ಪಾಟೀಲ, ನಿಕಿನ್ ಜೋಸ್, ಕೆ.ಎಲ್. ಶ್ರೀಜಿತ್, ಅನೀಶ್ವರ್ ಗೌತಮ್, ಶ್ರೇಯಸ್ ಗೋಪಾಲ್, ರಿತೇಶ್ ಭಟ್ಕಳ, ಶಿಖರ್ ಶೆಟ್ಟಿ, ಮೊಹ್ಸಿನ್ ಖಾನ್, ಮಾಧವ್ ಪಿ ಬಜಾಜ್, ಎಂ. ಕೀರ್ತಿ, ಪಾರಸ್ ಗುರುಭಕ್ಷ ಆರ್ಯ, ಅಭಿಲಾಶ್ ಶೆಟ್ಟಿ, ಪ್ರಸಿದ್ಧ ಎಂ ಕೃಷ್ಣ, ವಿದ್ವತ್ ಕಾವೇರಪ್ಪ, ವಿ. ವೈಶಾಖ, ಎಲ್.ಆರ್. ಕುಮಾರ್, ಭೀಮರಾವ್, ಕೃತಿಕ್ ಕೃಷ್ಣ, ಲವನೀತ್ ಸಿಸೊಡಿಯಾ, ಸಿ. ಸಂಜಯ್ ಅಶ್ವಿನ್ (ಮೂವರು ವಿಕೆಟ್‌ಕೀಪರ್). ಮುಖ್ಯ ಕೋಚ್: ಆರ್. ವಿನಯಕುಮಾರ್, ಫೀಲ್ಡಿಂಗ್ ಕೋಚ್: ದೀಪಕ್ ಚೌಗುಲೆ.

2027ರ ಏಕದಿನ ವಿಶ್ವಕಪ್‌ ಟೂರ್ನಿಗೆ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಅಗತ್ಯವಿಲ್ಲ ಎಂದ ಸಂದೀಪ್‌ ಪಾಟೀಲ್‌!

ಸಿ.ಕೆ. ನಾಯ್ಡು ಟ್ರೋಫಿ: ಪ್ರಖರ್ ಚತುರ್ವೇದಿ, ಹರ್ಷಿಲ್ ಧರ್ಮಾನಿ, ಬಿ. ವಿಜಯರಾಜ್, ಸಿದ್ಧಾರ್ಥ್ ಅಖಿಲ್, ರೋಹನ್ ಎಂ ಯರೇಶಿಮಿ, ಧ್ರುವ ಪ್ರಭಾಕರ್, ಕೆ.ಪಿ. ಕಾರ್ತಿಕೇಯ, ಸಿರೀಶ್ ಬಳಗಾರ್, ಯಶೋವರ್ಧನ ಪರಾಂತಪ್, ಎಲ್. ಮನ್ವಂತ್ ಕುಮಾರ್, ಸಮಿತ್ ದ್ರಾವಿಡ್, ಸಮರ್ಥ ನಾಗರಾಜ್, ರಾಹುಲ್ ಬೆಲ್ಲದ್, ವೈಭವ್ ಶರ್ಮಾ, ಎಸ್. ಇಶಾನ್, ಕೃಷವ್ ಸೋಮಸುಂದರ್, ಹಾರ್ದಿಕ್ ರಾಜ್, ವಲ್ಲಭ ಹೆಗಡೆ, ಧೀರಜ್ ಜೆ ಗೌಡ, ಕೆ. ಅಂಬರೀಶ್, ಅಕ್ಷತ್ ಪ್ರಭಾಕರ್, ಕೃಶಿವ್ ಬಜಾಜ್, ಯುವರಾಜ್ ಅರೋರಾ, ಅನಿರುದ್ಧ ಶ್ರೀನಿವಾಸ್, ಯು. ಕರಣ್ (ನಾಲ್ವರು ವಿಕೆಟ್‌ಕೀಪರ್). ಮುಖ್ಯ ಕೋಚ್: ಗಣೇಶ್ ಸತೀಶ್, ಫೀಲ್ಡಿಂಗ್ ಕೋಚ್: ರಾಜಶೇಖರ್ ಶಾನಭಾಳ್.