2027ರ ಏಕದಿನ ವಿಶ್ವಕಪ್ ಟೂರ್ನಿಗೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅಗತ್ಯವಿಲ್ಲ ಎಂದ ಸಂದೀಪ್ ಪಾಟೀಲ್!
2027ರ ಏಕದಿನ ವಿಶ್ವಕಪ್‌ಗೆ ಇನ್ನು ಸರಿಸುಮಾರು ಒಂದು ವರ್ಷ ಮಾತ್ರ ಬಾಕಿ ಉಳಿದಿದೆ. ಆದರೆ ಈ ಮಹತ್ವದ ಟೂರ್ನಿಯಲ್ಲಿ ಭಾರತ ತಂಡದ ಮಾಜಿ ನಾಯಕರುಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಪಾಲ್ಗೊಳ್ಳುವ ಬಗ್ಗೆ ಇನ್ನೂ ಅನಿಶ್ಚಿತತೆ ಮುಂದುವರಿದಿದೆ. ಇಬ್ಬರು ಹಿರಿಯ ಆಟಗಾರರು ಏಕದಿನ ಕ್ರಿಕೆಟ್‌ನಲ್ಲಿ ಮುಂದುವರಿಯುತ್ತಾರೆಯೇ ಎಂಬುದು ಸದ್ಯದ ಪ್ರಮುಖ ಚರ್ಚೆಯ ವಿಷಯವಾಗಿದೆ.
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಬಗ್ಗೆ ಸಂದೀಪ್ ಪಾಟೀಲ್ ಹೇಳಿಕೆ. -
ನವದೆಹಲಿ: ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಅವರ ಭವಿಷ್ಯದ ಕುರಿತು ಭಾರತೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. 2027ರ ಏಕದಿನ ವಿಶ್ವಕಪ್‌ಗೆ (ODI World Cup 2027) ಇನ್ನು ಸರಿಸುಮಾರು ಒಂದು ವರ್ಷ ಮಾತ್ರ ಬಾಕಿ ಇರುವ ಹಿನ್ನೆಲೆಯಲ್ಲಿ, ಈ ಇಬ್ಬರು ಹಿರಿಯ ಆಟಗಾರರು ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆಯೇ ಎಂಬ ಬಗ್ಗೆ ಅನಿಶ್ಚಿತತೆ ಮುಂದುವರಿದಿದೆ.
2027ರ ವಿಶ್ವಕಪ್ ಆರಂಭವಾಗುವ ವೇಳೆಗೆ ರೋಹಿತ್ ಶರ್ಮಾ 40 ವರ್ಷ ಹಾಗೂ ವಿರಾಟ್ ಕೊಹ್ಲಿ 39 ವರ್ಷ ವಯಸ್ಸಿನವರಾಗಿರಲಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತದ ಮಾಜಿ ಆಲ್‌ರೌಂಡರ್ ಸಂದೀಪ್ ಪಾಟೀಲ್, ಭಾರತೀಯ ತಂಡದ ಬೆಂಚ್ ಸಾಮರ್ಥ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಹತ್ವದ ಹೇಳಿಕೆ ನೀಡಿದ್ದಾರೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಂಡದಲ್ಲಿದ್ದರೂ ಅಥವಾ ಇಲ್ಲದಿದ್ದರೂ, ಅದು ಭಾರತ ತಂಡ ಅಥವಾ ಅದರ ಪ್ರದರ್ಶನದ ಮೇಲೆ ಯಾವುದೇ ದೊಡ್ಡ ಪರಿಣಾಮ ಬೀರುವುದಿಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
2027ರ ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ ಮತ್ತು ಕೊಹ್ಲಿ ಭಾಗವಹಿಸುವುದು ಹಲವು ಅಂಶಗಳ ಮೇಲೆ ಅವಲಂಬಿತವಾಗಿದೆ ಎಂದು ಅವರು ತಿಳಿಸಿದ್ದಾರೆ. ಇಬ್ಬರು ಆಟಗಾರರು ಮುಂದುವರಿದು ಆಡಲು ಬಯಸುತ್ತಾರೆಯೇ, ಅವರ ಫಿಟ್ನೆಸ್ ಹೇಗಿರಲಿದೆ ಹಾಗೂ ಆಯ್ಕೆಗಾರರ ಯೋಜನೆ ಏನು ಎಂಬುದರ ಮೇಲೆ ಅವರ ವಿಶ್ವಕಪ್ ಭಾಗವಹಿಸುವಿಕೆ ನಿರ್ಧಾರವಾಗಲಿದೆ ಎಂದು ಸಂದೀಪ್ ಪಾಟೀಲ್ ಹೇಳಿದ್ದಾರೆ.
India vs Japan ಏಕೈಕ ಟಿ20ಐ ಪಂದ್ಯವನ್ನು ಎಲ್ಲಿ ವೀಕ್ಷಿಸಬೇಕು? ಲೈವ್ ಸ್ಟ್ರೀಮಿಂಗ್ ವಿವರ!
“ಮುಂದುವರಿದು ಆಡಬೇಕೇ ಎಂಬುದು ಈ ಇಬ್ಬರು ಆಟಗಾರರ ನಿರ್ಧಾರ. ಅವರು ಇನ್ನೂ ಆಡುವುದನ್ನು ಮುಂದುವರಿಸಲು ಬಯಸುತ್ತಾರೆಯೇ? ತಮ್ಮ ಫಿಟ್ನೆಸ್‌ನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆಯೇ? ಆಯ್ಕೆಗಾರರ ತಂತ್ರವೇನು? ಆಯ್ಕೆಗಾರರು ಮುಂದಿನ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸುತ್ತಿದ್ದಾರೆಯೇ? ಹಾಲಿ ಆಟಗಾರರ ಜೊತೆಗೆ, ಒಂದು ವೇಳೆ ಇವರನ್ನು ತಂಡದಿಂದ ಹೊರಗಿಡುವ ಸಮಯ ಬಂದರೆ, ಅವರ ಸ್ಥಾನವನ್ನು ತುಂಬಲು ಸಾಕಷ್ಟು ಸಾಮರ್ಥ್ಯ ಹೊಂದಿರುವ ಆಟಗಾರರು ನಮ್ಮ ಬಳಿ ಇದ್ದಾರೆಯೇ ಎಂಬುದನ್ನೂ ನಾವು ಯಾವಾಗಲೂ ಪರಿಗಣಿಸಬೇಕು,” ಎಂದು ಮಾಜಿ ಆಲ್‌ರೌಂಡರ್ ಸ್ಪೋರ್ಟ್ಸ್ ನೆಕ್ಸ್ಟ್‌ಗೆ ತಿಳಿಸಿದ್ದಾರೆ.
“ನಾನು ಈಗಷ್ಟೇ ಹೇಳಿದಂತೆ, ಭಾರತದ ಬೆಂಚ್ ಸಾಮರ್ಥ್ಯ ಗಮನಿಸಿದರೆ, ವಿರಾಟ್ ಕೊಹ್ಲಿ ಅಥವಾ ರೋಹಿತ್ ಶರ್ಮಾ ತಂಡದಲ್ಲಿದ್ದರೂ ಇಲ್ಲದಿದ್ದರೂ ಯಾವುದೇ ಸಮಸ್ಯೆ ಉಂಟಾಗುತ್ತದೆ ಎಂದು ನನಗೆ ಅನಿಸುವುದಿಲ್ಲ,” ಎಂದು ಅವರು ಹೇಳಿದ್ದಾರೆ.
ವೈಭವ್ ಸೂರ್ಯವಂಶಿಯ ಸಿಕ್ಸ್ ಹೊಡೆಯುವ ಕೌಶಲ ನನಗೆ ತುಂಬಾ ಇಷ್ಟ: ಸೂರ್ಯಕುಮಾರ್ ಯಾದವ್!
“ಈ ಇಬ್ಬರು ಆಟಗಾರರು ಹಲವು ವರ್ಷಗಳಿಂದ ಕ್ರಿಕೆಟ್ ಆಡುತ್ತಿದ್ದಾರೆ ಮತ್ತು ಮುಂದಿನ ದಿನಗಳಲ್ಲಿ ದಿಗ್ಗಜ ಆಟಗಾರರೆಂದು ಪರಿಗಣಿಸಲ್ಪಡಲಿದ್ದಾರೆ. ರೋಹಿತ್ ಶರ್ಮಾ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಅದ್ಭುತ ಆಟಗಾರರಾಗಿದ್ದಾರೆ. ವಿರಾಟ್ ಕೊಹ್ಲಿ ಬಗ್ಗೆ ಹೇಳುವುದಾದರೆ, ಅವರ ಕುರಿತು ನಾನು ಎಷ್ಟು ಹೇಳಿದರೂ ಕಡಿಮೆಯೇ,” ಎಂದು ಮಾಜಿ ಆಲ್‌ರೌಂಡರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಭಾರತದ ಏಕದಿನ ತಂಡ: ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರುತುರಾಜ್ ಗಾಯಕ್ವಾಡ್, ಕೆಎಲ್ ರಾಹುಲ್, ಧ್ರುವ್ ಜುರೆಲ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಪ್ರಸಿಧ್ ಕೃಷ್ಣ, ಗುರ್ನೂರ್ ಬ್ರಾರ್, ಮೊಹಮ್ಮದ್ ಸಿರಾಜ್, ಆಕಿಬ್ ನಬಿ, ಯಶಸ್ವಿ ಜೈಸ್ವಾಲ್, ನಮನ ಧೀರ್