ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL Final 2025: ವೀಕ್ಷಣೆಯಲ್ಲಿ ದಾಖಲೆ ಬರೆದ ಆರ್‌ಸಿಬಿ-ಪಂಜಾಬ್‌ ಫೈನಲ್‌ ಪಂದ್ಯ

ಆರ್‌ಸಿಬಿ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಐಪಿಎಲ್ 2025 ರ ಫೈನಲ್ ಇತಿಹಾಸ ನಿರ್ಮಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 18 ವರ್ಷಗಳ ನಂತರ ತನ್ನ ಮೊದಲ ಪ್ರಶಸ್ತಿಯನ್ನು ಎತ್ತಿ ಹಿಡಿಯುವ ಮೂಲಕ ಟಿವಿ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬೃಹತ್ ದಾಖಲೆಗಳನ್ನು ನಿರ್ಮಿಸುವುದರೊಂದಿಗೆ ಅತಿ ಹೆಚ್ಚು ವೀಕ್ಷಿಸಿದ ಟಿ20 ಪಂದ್ಯವಾಯಿತು.

ಮುಂಬಯಿ: 18ನೇ ಆವೃತ್ತಿಯ ಐಪಿಎಲ್‌ನ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB vs PBKS Final) ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಐಪಿಎಲ್ 2025 ರ ಫೈನಲ್(IPL Final 2025) ಪಂದ್ಯವು ದಾಖಲೆಯೊಂದನ್ನು ಬರೆದಿದೆ. ಈ ಪಂದ್ಯ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಟಿ20 ಪಂದ್ಯ ಎಂಬ ದಾಖಲೆ ನಿರ್ಮಿಸಿದೆ. ರೋಮಾಂಚಕ ಫೈನಲ್‌ನಲ್ಲಿ ಆರ್‌ಸಿಬಿ ತಂಡ 6 ರನ್‌ ಅಂತರದಿಂದ ಗೆದ್ದು ಚೊಚ್ಚಲ ಟ್ರೋಫಿ ಗೆದ್ದಿತ್ತು.

ಐಪಿಎಲ್ 2025 ರ ಅಧಿಕೃತ ಪ್ರಸಾರಕ ಮತ್ತು ಡಿಜಿಟಲ್ ಪಾಲುದಾರ ಜಿಯೋಸ್ಟಾರ್ ಪ್ರಕಾರ, ಫೈನಲ್‌ ಪಂದ್ಯವು ಟಿವಿ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ 31.7 ಬಿಲಿಯನ್ ನಿಮಿಷ ವೀಕ್ಷಣೆ ಕಂಡಿದೆ ಎಂದು ಜಿಯೋಸ್ಟಾರ್‌ನ ಸ್ಪೋರ್ಟ್ಸ್ ಮತ್ತು ಲೈವ್ ಎಕ್ಸ್‌ಪೀರಿಯನ್ಸ್‌ನ ಸಿಇಒ ಸಂಜೋಗ್ ಗುಪ್ತಾ ಹೇಳಿದರು.

ಇದನ್ನೂ ಓದಿ IPL 2025: ಆರ್‌ಸಿಬಿಗೆ ಕಪ್‌ ಗೆದ್ದುಕೊಡಬಲ್ಲ ನಾಲ್ವರು ಸ್ಟಾರ್‌ಗಳನ್ನು ಆರಿಸಿದ ವಿಜಯ್ ಮಲ್ಯ!

ಟಿವಿಯಲ್ಲಿ, ಸ್ಟಾರ್ ಸ್ಪೋರ್ಟ್ಸ್ 15 ಬಿಲಿಯನ್ ನಿಮಿಷಗಳ ವೀಕ್ಷಣೆ ಸಮಯವನ್ನು ದಾಖಲಿಸಿದ್ದು, 169 ಮಿಲಿಯನ್ ವೀಕ್ಷಕರನ್ನು ತಲುಪಿದೆ. ಇದು ಯಾವುದೇ T20 ಪಂದ್ಯಕ್ಕೆ ಹೋಲಿಸಿದರೆ ಅತಿ ಹೆಚ್ಚು. ಡಿಜಿಟಲ್ ಭಾಗದಲ್ಲಿ, ಜಿಯೋಹಾಟ್‌ಸ್ಟಾರ್ 892 ಮಿಲಿಯನ್ ವೀಡಿಯೊ ವೀಕ್ಷಣೆಗಳು, ಒಂದೇ ಬಾರಿಗೆ 55 ಮಿಲಿಯನ್ ಗರಿಷ್ಠ ವೀಕ್ಷಕರು ಮತ್ತು 16.74 ಬಿಲಿಯನ್ ನಿಮಿಷಗಳ ವೀಕ್ಷಣೆ ಸಮಯವನ್ನು ಕಂಡಿದ್ದು ಇದು ಕ್ರಿಕೆಟ್ ಇತಿಹಾಸದಲ್ಲಿಯೇ ಅತಿದೊಡ್ಡ ಡಿಜಿಟಲ್ ವೀಕ್ಷಣೆ ಕಂಡ ಪಂದ್ಯವಾಗಿದೆ.

ಐಪಿಎಲ್ 2025 ಸಹ ಕೆಲವು ಸ್ಮರಣೀಯ ಕ್ಷಣಗಳನ್ನು ಕಂಡಿತು. ಆರ್‌ಸಿಬಿ ಪ್ರಶಸ್ತಿ ಗೆಲುವಿನ ಜತೆಗೆ, 14 ವರ್ಷದ ವೈಭವ್ ಸೂರ್ಯವಂಶಿ ಐಪಿಎಲ್ ಇತಿಹಾಸದಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರರಾದರು.