ಕೋಲ್ಕತಾ: ಭಾರತ ಮತ್ತು ದಕ್ಷಿಣ ಆಫ್ರಿಕಾ(IND vs SA Test) ನಡುವಣ 2 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ನ.14ರಂದು ಐತಿಹಾಸಿಕ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಆರಂಭವಾಗಲಿದೆ. ಸರಣಿ 2025-27 ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವಾಗಿದ್ದು, ಎರಡೂ ತಂಡಗಳು ವಿಶ್ವ ಕ್ರಿಕೆಟ್‌ನಲ್ಲಿ ಬಲಿಷ್ಠ ತಂಡಗಳಲ್ಲಿ ಒಂದಾಗಿ ಉಳಿದಿವೆ, ಭಾರತ ತಮ್ಮ ಡಬ್ಲ್ಯೂಟಿಸಿ ಸ್ಥಾನವನ್ನು ಬಲಪಡಿಸಲು ನೋಡುತ್ತಿದ್ದರೆ, ದಕ್ಷಿಣ ಆಫ್ರಿಕಾ ತಮ್ಮ ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಗುರಿಯನ್ನು ಹೊಂದಿದೆ.
ಈ ಸರಣಿಯಲ್ಲಿ ಟೀಮ್ ಇಂಡಿಯಾದ ಆಟಗಾರರಾದ ರಿಷಭ್ ಪಂತ್, ಶುಭಮನ್ ಗಿಲ್, ಕೆ.ಎಲ್ ರಾಹುಲ್ ಮತ್ತು ಕುಲ್‌ದೀಪ್ ಯಾದವ್ ಮಹತ್ವದ ದಾಖಲೆ ನಿರ್ಮಿಸುವ ಸನಿಹದಲ್ಲಿದ್ದಾರೆ. ರಿಷಭ್ ಪಂತ್ ಮರಳುವಿಕೆ ಭಾರತಕ್ಕೆ ಪ್ರಮುಖ ಉತ್ತೇಜನ ನೀಡಲಿದೆ. ತಂಡದ ಬೌಲಿಂಗ್ ಕೂಡ ಸಮತೋಲಿತವಾಗಿ ಕಾಣುತ್ತದೆ, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ವೇಗದ ದಾಳಿಯನ್ನು ಮುನ್ನಡೆಸುತ್ತಿದ್ದಾರೆ ಮತ್ತು ಸ್ಪಿನ್ನರ್‌ಗಳಾದ ರವೀಂದ್ರ ಜಡೇಜಾ ಮತ್ತು ಕುಲದೀಪ್ ಯಾದವ್ ಟರ್ನಿಂಗ್ ಟ್ರ್ಯಾಕ್‌ಗಳಲ್ಲಿ ಪ್ರಾಬಲ್ಯ ಸಾಧಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ ಶಫಾಲಿ ವರ್ಮಾಗೆ ಶರ್ಮಾಗೆ ಒಂದೂವರೆ ಕೋಟಿ ರು ಚೆಕ್ ನೀಡಿದ ಹರಿಯಾಣ ಸಿಎಂ!
ಇಂಗ್ಲೆಂಡ್‌ನಲ್ಲಿ 2-2 ಡ್ರಾ ಸಾಧಿಸಿ, ವೆಸ್ಟ್ ಇಂಡೀಸ್ ವಿರುದ್ಧ 2-0 ಅಂತರದಲ್ಲಿ ಜಯ ಸಾಧಿಸಿ ಭಾರತ ಈ ಸರಣಿಯನ್ನು ಉತ್ತಮ ಫಾರ್ಮ್‌ನಲ್ಲಿ ಪ್ರವೇಶಿಸಿದೆ. ನಾಯಕ ಶುಭಮನ್ ಗಿಲ್ ಈ ವರ್ಷ ಬ್ಯಾಟಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು, ಏಳು ಟೆಸ್ಟ್‌ಗಳಲ್ಲಿ ಐದು ಶತಕಗಳೊಂದಿಗೆ ಸುಮಾರು 79 ಸರಾಸರಿಯನ್ನು ಗಳಿಸಿದ್ದಾರೆ.
ಭಾರತೀಯ ಆಟಗಾರರು ನಿರ್ಮಿಸಲಿರುವ ದಾಖಲೆಗಳು
161 ರನ್: ಶುಭಮನ್ ಗಿಲ್ ಟೆಸ್ಟ್‌ನಲ್ಲಿ ವೇಗವಾಗಿ 3,000 ರನ್ ಗಳಿಸಿದ ಎರಡನೇ ಭಾರತೀಯ ಆಟಗಾರನಾಗಲು ಅವರಿಗೆ 161 ರನ್‌ಗಳ ಅಗತ್ಯವಿದೆ. ವೀರೇಂದ್ರ ಸೆಹ್ವಾಗ್ ಪ್ರಸ್ತುತ ಈ ದಾಖಲೆಯನ್ನು ಹೊಂದಿದ್ದಾರೆ. ಅವರು ಕೇವಲ 55 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ತಲುಪಿದ್ದಾರೆ.
1 ಶತಕ: ಶುಭಮನ್ ಗಿಲ್ ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಟೆಸ್ಟ್ ಶತಕಗಳನ್ನು ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ ಆಗಲು ಅವರು ಒಂದು ಶತಕ ಬಾರಿಸಬೇಕಿದೆ.
4 ಸಿಕ್ಸರ್: ಶುಭಮನ್ ಗಿಲ್ ಟೆಸ್ಟ್ ಕ್ರಿಕೆಟ್‌ನಲ್ಲಿ 50 ಅಥವಾ ಅದಕ್ಕಿಂತ ಹೆಚ್ಚು ಸಿಕ್ಸ್‌ಗಳನ್ನು ಬಾರಿಸಿದ ಒಂಬತ್ತನೇ ಭಾರತೀಯ ಬ್ಯಾಟ್ಸ್‌ಮನ್ ಆಗಲು ಅವರು 4 ಸಿಕ್ಸ್‌ರ್ ಬಾರಿಸಬೇಕಿದೆ. ವೀರೇಂದ್ರ ಸೆಹ್ವಾಗ್, ರಿಷಭ್ ಪಂತ್, ರೋಹಿತ್ ಶರ್ಮಾ, ರವೀಂದ್ರ ಜಡೇಜಾ, ಎಂಎಸ್ ಧೋನಿ, ಸಚಿನ್ ತೆಂಡೂಲ್ಕರ್, ಕಪಿಲ್ ದೇವ್ ಮತ್ತು ಸೌರವ್ ಗಂಗೂಲಿ ಈ ಸಾಧನೆಗೈದ ಭಾರತೀಯ ಆಟಗಾರರು.
2 ಸಿಕ್ಸರ್: ರಿಷಭ್ ಪಂತ್ ಟೆಸ್ಟ್ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಭಾರತೀಯ ಆಟಗಾರನಾಗಲು ಅವರಿಗೆ 2 ಸಿಕ್ಸರ್ ಅಗತ್ಯವಿದೆ. ವೀರೇಂದ್ರ ಸೆಹ್ವಾಗ್ 91 ಸಿಕ್ಸರ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.
15 ರನ್: ಕೆಎಲ್ ರಾಹುಲ್ ಟೆಸ್ಟ್ ಕ್ರಿಕೆಟ್‌ನಲ್ಲಿ 4000 ರನ್‌ಗಳನ್ನು ಪೂರ್ಣಗೊಳಿಸಲು ಅವರಿಗೆ 15 ರನ್‌ಗಳ ಅಗತ್ಯವಿದೆ.
10 ರನ್: ರವೀಂದ್ರ ಜಡೇಜಾ ಅವರು 10 ರನ್ ಬಾರಿಸಿದರೆ 4000 ಪ್ಲಸ್ ರನ್ ಮತ್ತು 300 ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದ ವಿಶ್ವದ ನಾಲ್ಕನೇ ಕ್ರಿಕೆಟಿಗನಾಗಲಿದ್ದಾರೆ. ಕಪಿಲ್ ದೇವ್, ಇಯಾನ್ ಬೋಥಮ್ ಮತ್ತು ಡೇನಿಯಲ್ ವೆಟ್ಟೋರಿ ಮೊದಲಿಗರು.
12 ವಿಕೆಟ್: ರವೀಂದ್ರ ಜಡೇಜಾ ಅವರು ಟೆಸ್ಟ್‌ನಲ್ಲಿ ಅತಿ ವೇಗವಾಗಿ 350 ವಿಕೆಟ್‌ಗಳನ್ನು ಪಡೆದ ನಾಲ್ಕನೇ ಭಾರತೀಯ ಬೌಲರ್ ಆಗಲು 12 ವಿಕೆಟ್ ಅಗತ್ಯವಿದೆ. ದಾಖಲೆ ಮಾಜಿ ಆಟಗಾರ ಆರ್.ಅಶ್ವಿನ್ ಹೆಸರಿನಲ್ಲಿದೆ. ಅಶ್ವಿನ್ 66 ಪಂದ್ಯಗಳಲ್ಲಿ ಈ ದಾಖಲೆ ಹೊಂದಿದ್ದಾರೆ.
12 ವಿಕೆಟ್: ಕುಲ್ದೀಪ್ ಯಾದವ್ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 350 ವಿಕೆಟ್‌ಗಳನ್ನು ಪೂರ್ಣಗೊಳಿಸಲು 12 ವಿಕೆಟ್ ಪಡೆಯಬೇಕಿದೆ.