ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rishabh Pant: ರಿಷಭ್‌ ಪಂತ್‌ಗೆ ಮತ್ತೆ ಗಾಯ; ದಕ್ಷಿಣ ಆಫ್ರಿಕಾ ಟೆಸ್ಟ್‌ ಸರಣಿಗೆ ಅನುಮಾನ

ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಣ ಮೊದಲನೇ ಟೆಸ್ಟ್‌ ಪಂದ್ಯ ನವೆಂಬರ್‌ 14 ರಿಂದ 18ರವರೆಗೆ ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಎರಡನೇ ಟೆಸ್ಟ್‌ ಪಂದ್ಯ ಗುವಾಹಟಿಯ ಬರ್ಸಪರ ಕ್ರೀಡಾಂಗಣದಲ್ಲಿ ನವೆಂಬರ್‌ 22 ರಿಂದ 26ರ ವರೆಗೆ ಜರುಗಲಿದೆ. ಈ ಟೆಸ್ಟ್‌ ಸರಣಿಯ ಬಳಿಕ ಉಭಯ ತಂಡಗಳ ನಡುವಣ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ.

ದಕ್ಷಿಣ ಆಫ್ರಿಕಾ ಟೆಸ್ಟ್‌ ಸರಣಿಗೂ ಮುನ್ನ ರಿಷಭ್‌ ಪಂತ್‌ಗೆ ಗಾಯ

ಗಾಯಗೊಂಡು ಮೈದಾನ ತೊರೆದ ರಿಷಭ್‌ ಪಂತ್‌ -

Abhilash BC
Abhilash BC Nov 8, 2025 12:45 PM

ಬೆಂಗಳೂರು: ದಕ್ಷಿಣ ಆಫ್ರಿಕಾ 'ಎ'(IND A vs SA A) ವಿರುದ್ಧ ಬೆಂಗಳೂರಿನಲ್ಲಿ ನಡೆಯುತ್ತಿರುವ ಎರಡನೇ ಅನಧಿಕೃತ ಟೆಸ್ಟ್ ಪಂದ್ಯದ 3ನೇ ದಿನದಂದು ಸ್ಟಾರ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಮತ್ತು ಭಾರತ 'ಎ' ತಂಡದ ನಾಯಕ ರಿಷಭ್ ಪಂತ್(Rishabh Pant) ಗಾಯಗೊಂಡು ಮೈದಾನ ತೊರೆದರು. ಅವರ ಗಾಯ ಮುಂಬರುವ ದಕ್ಷಿಣ ಆಫ್ರಿಕಾ ಟೆಸ್ಟ್‌ ಸರಣಿಗೂ ಮುನ್ನ ಟೀಮ್‌ ಇಂಡಿಯಾಕ್ಕೆ ಆತಂಕ ತಂದಿದೆ.

ಕಳೆದ ಇಂಗ್ಲೆಂಡ್‌ ಟೆಸ್ಟ್‌ ಸರಣಿಯಲ್ಲಿ ಪಾದದ ಗಾಯಕ್ಕೆ ತುತ್ತಾಗಿ ಚೇತರಿಕೆ ಕಂಡಿರುವ ಪಂತ್‌ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುವ ಹಾದಿಯಲ್ಲಿದ್ದಾರೆ. ಆದರೆ ಈ ಮಧ್ಯೆ ಮತ್ತೆ ಅವರು ಗಾಯಕ್ಕೆ ತುತ್ತಾಗಿದ್ದಾರೆ. ಶನಿವಾರ ಬ್ಯಾಟಿಂಗ್‌ ನಡೆಸುವ ವೇಳೆ ಪಂತ್‌ಗೆ ಮೂರು ಚೆಂಡಿನ ಏಟು ಬಿದ್ದಿದೆ.

ಹೆಲ್ಮೆಟ್‌, ಎಡ ಮೊಣಕೈಗೆ ಮತ್ತು ಕೊನೆಯ ಹೊಡೆತ ಹೊಟ್ಟೆಯ ಮೇಲೆ ಬಿದ್ದಿದೆ. ಈ ನೋವಿನಿಂ ನರಳಿದ ಪಂತ್‌ ಅಸ್ವಸ್ಥತೆಯಿಂದ ಮೈದಾನದಿಂದ ಹೊರನಡೆದರು. ನವೆಂಬರ್ 14 ರಂದು ಕೋಲ್ಕತ್ತಾದಲ್ಲಿ ಪ್ರಾರಂಭವಾಗುವ ದಕ್ಷಿಣ ಆಫ್ರಿಕಾ ವಿರುದ್ಧದ ಭಾರತದ ಎರಡು ಟೆಸ್ಟ್ ಸರಣಿಗೆ ಅವರನ್ನು ಉಪನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. ಇದೀಗ ಗಾಯಗೊಂಡಿರುವ ಪಂತ್‌ ಈ ಸರಣಿಯಿಂದಲೇ ಹೊರಬೀಳುವ ಸಾಧ್ಯತೆ ಇದೆ.

ಪಂದ್ಯದ ಆರಂಭದಲ್ಲಿ, ಭಾರತ ಎ ತಂಡವು ಧ್ರುವ್ ಜುರೆಲ್ ಅವರ ಅದ್ಭುತ 132* ರನ್‌ಗಳ ನೆರವಿನಿಂದ ಮೊದಲ ಇನ್ನಿಂಗ್ಸ್‌ನಲ್ಲಿ 255 ರನ್ ಗಳಿಸಿತು. ಪಂತ್ 20 ಎಸೆತಗಳಲ್ಲಿ 24 ರನ್ ಗಳಿಸಿ, ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು. ದಕ್ಷಿಣ ಆಫ್ರಿಕಾ ಎ ತಂಡವು 221 ರನ್‌ಗಳಿಗೆ ಆಲೌಟ್ ಆಯಿತು. ನಾಯಕ ಮಾರ್ಕ್ವೆಸ್ ಅಕರ್‌ಮನ್ 118 ಎಸೆತಗಳಲ್ಲಿ 134 ರನ್ ಗಳಿಸಿದರು. ಪ್ರಸಿದ್ಧ್ ಕೃಷ್ಣ (3/35), ಮೊಹಮ್ಮದ್ ಸಿರಾಜ್ (2/61), ಮತ್ತು ಆಕಾಶ್ ದೀಪ್ (2/28) ಭಾರತ ಎ ಪರ ವಿಕೆಟ್ ಹಂಚಿಕೊಂಡರು.



ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಣ ಮೊದಲನೇ ಟೆಸ್ಟ್‌ ಪಂದ್ಯ ನವೆಂಬರ್‌ 14 ರಿಂದ 18ರವರೆಗೆ ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಎರಡನೇ ಟೆಸ್ಟ್‌ ಪಂದ್ಯ ಗುವಾಹಟಿಯ ಬರ್ಸಪರ ಕ್ರೀಡಾಂಗಣದಲ್ಲಿ ನವೆಂಬರ್‌ 22 ರಿಂದ 26ರ ವರೆಗೆ ಜರುಗಲಿದೆ. ಈ ಟೆಸ್ಟ್‌ ಸರಣಿಯ ಬಳಿಕ ಉಭಯ ತಂಡಗಳ ನಡುವಣ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ.

ಇದನ್ನೂ ಓದಿ IND vs SA: ರಿಷಭ್‌ ಪಂತ್‌ ಇನ್‌, ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಗೆ ಭಾರತ ತಂಡ ಪ್ರಕಟ!

ದಕ್ಷಿಣ ಆಫ್ರಿಕಾ ಟೆಸ್ಟ್‌ ಸರಣಿಗೆ ಭಾರತದ ತಂಡ

ಶುಭಮನ್ ಗಿಲ್ (ನಾಯಕ), ರಿಷಭ್ ಪಂತ್ (ವಿಕೆಟ್‌ ಕೀಪರ್‌, ಉಪ ನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ದೇವದತ್ ಪಡಿಕ್ಕಲ್, ಧ್ರುವ ಜುರೆಲ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಜಸ್‌ಪ್ರೀತ್ ಬುಮ್ರಾ, ಅಕ್ಷರ್ ಪಟೇಲ್, ನಿತೀಶ್‌ ಕುಮಾರ್‌ ರೆಡ್ಡಿ, ಮೊಹಮ್ಮದ್‌ ಸಿರಾಜ್‌, ಕುಲ್ದೀಪ್‌ ಯಾದವ್‌, ಆಕಾಶ ದೀಪ್‌.