IND vs AUS: ಐದನೇ ಟಿ20ಐ ಪಂದ್ಯದಿಂದ ತಿಲಕ್ ವರ್ಮಾರನ್ನು ಕೈ ಬಿಡಲು ಕಾರಣವೇನು?
Why Tilak Verma not playing 5th T20I: ಆಸ್ಟ್ರೇಲಿಯಾ ವಿರುದ್ದ ಐದನೇ ಹಾಗೂ ಟಿ20ಐ ಸರಣಿಯ ಕೊನೆಯ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ XIನಲ್ಲಿ ಒಂದು ಬದಲಾವಣೆಯನ್ನು ತರಲಾಗಿದೆ. ತಿಲಕ್ ವರ್ಮಾ ಅವರನ್ನು ಕೈ ಬಿಟ್ಟು ರಿಂಕು ಸಿಂಗ್‌ಗೆ ಅವಕಾಶವನ್ನು ನೀಡಲಾಗಿದೆ. ಇದರ ಬಗ್ಗೆ ನಾಯಕ ಸೂರ್ಯಕುಮಾರ್ ಯಾದವ್ ಸ್ಪಷ್ಟನೆ ನೀಡಿದ್ದಾರೆ.
ಐದನೇ ಟಿ20ಐನಲ್ಲಿ ತಿಲಕ್ ವರ್ಮಾ ಆಡದೆ ಇರಲು ಕಾರಣವೇನು? -
ಬ್ರಿಸ್ಬೇನ್: ಇಲ್ಲಿನ ಗಬ್ಬಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐದನೇ ಹಾಗೂ ಟಿ20ಐ ಸರಣಿಯ (IND vs AUS) ಕೊನೆಯ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದ ಭಾರತ ತಂಡದ ಪ್ಲೇಯಿಂಗ್ XIನಲ್ಲಿ (India's Playing XI) ಒಂದು ಬದಲಾವಣೆಯನ್ನು ತರಲಾಗಿದೆ. ತಿಲಕ್ ವರ್ಮಾ (Tilak Verma) ಅವರನ್ನು ಕೈ ಬಿಟ್ಟು, ರಿಂಕು ಸಿಂಗ್‌ಗೆ ಅವಕಾಶವನ್ನು ನೀಡಲಾಗಿದೆ. ಇದಕ್ಕೆ ಕಾರಣವೇನೆಂದು ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ತಿಳಿಸಿದ್ದಾರೆ. ಅಂದ ಹಾಗೆ ನಾಲ್ಕು ಪಂದ್ಯಗಳ ಅಂತ್ಯಕ್ಕೆ ಭಾರತ ತಂಡ, 2-1 ಅಂತರದಲ್ಲಿ ಟಿ20ಐ ಸರಣಿಯಲ್ಲಿ 2-1 ಮುನ್ನಡೆಯನ್ನು ಪಡೆದಿದೆ.
ಶನಿವಾರ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಮಿಚೆಲ್ ಮಾರ್ಷ್ ಅವರು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಆ ಮೂಲಕ ಈ ಇಲ್ಲಿನ ಕಂಡೀಷನ್ಸ್ ಬೌಲರ್‌ಗಳು ಬಳಸಿಕೊಳ್ಳಬೇಕೆಂಬುದು ಮಾರ್ಷ್ ಅವರ ತಂತ್ರವಾಗಿತ್ತು. ಇನ್ನೂ ಐದೂ ಪಂದ್ಯಗಳಲ್ಲಿ ಸತತವಾಗಿ ಟಾಸ್ ಸೋತರೂ ಈ ಸರಣಿಯಲ್ಲಿನ ಫಲಿತಾಂಶದಿಂದ ಖುಷಿ ಇದೆ ಎಂದು ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ತಿಳಿಸಿದ್ದರು.
IND vs AUS 5th T20I: ಇಂದಿನ ಭಾರತ-ಆಸೀಸ್ ಅಂತಿಮ ಟಿ20ಗೆ ಭಾರೀ ಮಳೆ ಮುನ್ಸೂಚನೆ
ಆಸ್ಟ್ರೇಲಿಯಾ ತಂಡ ತನ್ನ ಪ್ಲೇಯಿಂಗ್ Xiನಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಕೊಂಡಿಲ್ಲ ಆದರೆ, ಭಾರತ ತಂಡದ ತನ್ನ ಆಡುವ ಬಳಗದಲ್ಲಿ ಒಂದು ಬದಲಾವಣೆಯನ್ನು ತರಲಾಗಿದೆ. ತಿಲಕ್ ವರ್ಮಾ ಅವರನ್ನು ಕೈ ಬಿಟ್ಟು, ರಿಂಕು ಸಿಂಗ್‌ಗೆ ಅವಕಾಶವನ್ನು ನೀಡಲಾಗಿದೆ. ಈ ಬಗ್ಗೆ ನಾಯಕ ಸೂರ್ಯಕುಮಾರ್ ಯಾದವ್ ಅವರು ಇದಕ್ಕೆ ಕಾರಣವನ್ನು ನೀಡಿದ್ದಾರೆ. ರಿಂಕು ಸಿಂಗ್ ಅವರು ಮೊದಲನೇ ಪಂದ್ಯದಲ್ಲಿ ಆಡಿದ್ದರು. ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ನಾಲ್ಕು ಬದಲಾವಣೆಗಳನ್ನು ಮಾಡಿಕೊಂಡಿತ್ತು. ಆದರೆ, ಐದನೇ ಪಂದ್ಯದಲ್ಲಿ ಅದೇ ಆಡುವ ಬಳಗವನ್ನು ಉಳಿಸಿಕೊಳ್ಳಲಾಗಿದೆ.
ಮಿಚೆಲ್ ಮಾರ್ಷ್ ಹೇಳಿಕೆ
"ಮೊದಲು ಬೌಲ್ ಮಾಡುತ್ತೇವೆ. ಇಲ್ಲಿನ ವಿಕೆಟ್ ಚೆನ್ನಾಗಿ ಕಾಣುತ್ತಿದೆ ಹಾಗೂ ಇಲ್ಲಿ ಬಂದು ಆಡುವುದು ಯಾವಾಗಲೂ ಉತ್ತಮವಾಗಿರುತ್ತದೆ. ಇದು ಅದ್ಭುತ ಕ್ರೀಡಾಂಗಣ. ಈ ಸರಣಿಯನ್ನು ಡ್ರಾ ಮಾಡಿಕೊಳ್ಳಲು ನಮಗೆ ಅವಕಾಶವಿದೆ. ಎರಡೂ ತಂಡಗಳು ಕೂಎ ಅದ್ಭುತ ಕ್ರಿಕೆಟ್ ಅನ್ನು ಆಡಿವೆ. ಸ್ವಲ್ಪ ವಿಭಿನ್ನವಾಗಿರುವ ಪಿಚ್ ಇದಾಗಿದೆ. ಭಾರತ ತಂಡ ಅದ್ಭುತವಾಗಿ ಬೌಲ್ ಮಾಡುತ್ತಿದೆ. ಇವತ್ತಿನ ರಾತ್ರಿಯ ಕಂಡೀಷನ್ಸ್ ವಿಭಿನ್ನವಾಗಿರಲಿದೆ ಹಾಗೂ ಪ್ಲೇಯಿಂಗ್ XIನಲ್ಲಿ ಯಾವುದೇ ಬದಲಾವಣೆ ಇಲ್ಲ," ಎಂದು ಟಾಸ್ ವೇಳೆ ಮಿಚೆಲ್ ಮಾರ್ಷ್ ತಿಳಿಸಿದ್ದಾರೆ.
IND vs AUS: ಅರ್ಷದೀಪ್ ಸಿಂಗ್‌ರನ್ನು ಬೆಂಚ್ ಕಾಯಿಸಬಾರದೆಂದ ಇರ್ಫಾನ್ ಪಠಾಣ್!
ಸೂರ್ಯಕುಮಾರ್ ಯಾದವ್ ಏನು ಹೇಳಿದ್ರು?
"ನೀವು ಪಂದ್ಯವನ್ನು ಗೆದ್ದು, ಟಾಸ್ ಸೋಲುವುದು ಅದು ಸರಿಯಾಗಿದೆ. ನಾವು ಮೈದಾನಕ್ಕೆ ಹೋಗಿ ನಮ್ಮನ್ನು ನಾವು ಅಭಿವ್ಯಕ್ತಗೊಳಿಸಬೇಕಾಗಿದೆ. ತಂಡದ ಗುರಿ ಏನೆಂದು ಅರ್ಥ ಮಾಡಿಕೊಳ್ಳುವುದು ಒಳ್ಳೆಯದು. ಇದು 200 ರನ್‌ಗಳ ವಿಕೆಟ್ ಅಲ್ಲ ಎಂದು ಎಲ್ಲಾ ಬ್ಯಾಟ್ಸ್‌ಮನ್‌ಗಳು ಅರ್ಥ ಮಾಡಿಕೊಂಡಿದ್ದಾರೆ. ಕಳೆದ ಪಂದ್ಯದಲ್ಲಿ ಎಲ್ಲಾ ಬಾಕ್ಸ್‌ಗಳನ್ನು ಟಿಕ್ ಮಾಡಲಾಗಿದೆ ಹಾಗೂ ಅದೇ ಲಯವನ್ನು ಈ ಪಂದ್ಯತದಲ್ಲಿ ಮುಂದುವರಿಸುತ್ತೇವೆ. ದ್ವಿಪಕ್ಷೀಯ ಸರಣಿಯನ್ನು ಗೆಲ್ಲುವುದು ಯಾವಾಗಲೂ ಉತ್ತಮವಾಗಿದೆ. ಇದೇ ಸಮಯದಲ್ಲಿ ತಂಡದ ಸಂಯೋಜನೆ ಕೂಡ ಮುಖ್ಯವಾಗುತ್ತದೆ. ಆರಂಭಿಕರನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಬ್ಯಾಟ್ಸ್‌ಮನ್‌ಗಳು ಬ್ಯಾಟಿಂಗ್ ಕ್ರಮಾಂಕದಲ್ಲಿ ಆರಾಮಾದಾಯಕವಾಗಿರಬೇಕಾಗುತ್ತದೆ. ಪ್ಲೇಯಿಂಗ್ XIನಲ್ಲಿ ಒಂದು ಬದಲಾವಣೆ ತರಲಾಗಿದೆ. ತಿಲಕ್ ವರ್ಮಾಗೆ ವಿಶ್ರಾಂತಿ ನೀಡಲಾಗಿದ್ದು, ರಿಂಕು ಸಿಂಗ್ ಆಡುತ್ತಿದ್ದಾರೆ," ಎಂದು ಸೂರ್ಯಕುಮಾರ್ ಯಾದವ್ ತಿಳಿಸಿದ್ದಾರೆ.
ಐದನೇ ಟಿ20ಐ ಪಂದ್ಯಕ್ಕೆ ಉಭಯ ತಂಡಗಳ ಪ್ಲೇಯಿಂಗ್ XI
ಆಸ್ಟ್ರೇಲಿಯಾ: ಮಿಚೆಲ್ ಮಾರ್ಷ್ (ನಾಯಕ), ಜಾಶ್ ಫಿಲಿಪ್, ಜಾಶ್ ಇಂಗ್ಲಿಸ್ (ವಿಕೆಟ್ ಕೀಪರ್), ಟಿಮ್ ಡೇವಿಡ್, ಮ್ಯಾಥ್ಯೂ ಶಾರ್ಟ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೋಯ್ನಿಸ್, ಜೇವಿಯರ್ ಬಾರ್ಟ್ಲೆಟ್, ಬೆನ್ ದ್ವಾರಶುಯಿಸ್, ನೇಥನ್ ಎಲ್ಲಿಸ್, ಆಡಂ ಝಾಂಪ
ಭಾರತ: ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (ಸಿ), ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಿವಂ ದುಬೆ, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಸ್‌ಪ್ರೀತ್ ಬುಮ್ರಾ