ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs AUS: ಐದನೇ ಪಂದ್ಯ ಮಳೆಗೆ ಬಲಿ, ಆಸೀಸ್‌ ಎದುರು 2-1 ಅಂತರದಲ್ಲಿ ಟಿ20ಐ ಸರಣಿ ಗೆದ್ದ ಭಾರತ!

IND vs AUS 5th T20I Highlights: ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಐದನೇ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಈ ಹಿನ್ನೆಲೆಯಲ್ಲಿ ಟಿ20ಐ ಸರಣಿಯ ಕೊನೆಯ ಪಂದ್ಯ ಫಲಿತಾಂಶವಿಲ್ಲದೆ ಅಂತ್ಯವಾಯಿತು. ಆ ಮೂಲಕ ಸೂರ್ಯಕುಮಾರ್‌ ಯಾದವ್‌ ನಾಯಕತ್ವದ ಟೀಮ್‌ ಇಂಡಿಯಾ 2-1 ಅಂತರದಲ್ಲಿ ಟಿ20ಐ ಸರಣಿಯನ್ನು ಮುಡಿಗೇರಿಸಿಕೊಂಡಿದೆ.

ಐದನೇ ಪಂದ್ಯ ಮಳೆಗೆ ಬಲಿ, ಟಿ20ಐ ಸರಣಿ ಗೆದ್ದ ಟೀಮ್‌ ಇಂಡಿಯಾ!

ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ 2-1 ಅಂತರದಲ್ಲಿ ಟಿ20ಐ ಸರಣಿ ಗೆದ್ದಿದೆ. -

Profile
Ramesh Kote Nov 8, 2025 5:40 PM

ಬ್ರಿಸ್ಬೇನ್‌: ಆಸ್ಟ್ರೇಲಿಯಾ (Australia) ವಿರುದ್ದದ ಐದನೇ ಹಾಗೂ ಟಿ20ಐ ಸರಣಿಯ (IND vs AUS) ಕೊನೆಯ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಇದರ ಪರಿಣಾಮ ಐದನೇ ಪಂದ್ಯ ಫಲಿತಾಂಶವಿಲ್ಲದೆ ಅಂತ್ಯವಾಯಿತು, ಇದರ ಹೊರತಾಗಿಯೂ ಸೂರ್ಯಕುಮಾರ್‌ ಯಾದವ್‌ ನಾಯಕತ್ವದ ಭಾರತ ತಂಡ (India) ಟಿ20ಐ ಸರಣಿಯನ್ನು 2-1 ಅಂತರದಲ್ಲಿ ಮುಡಿಗೇರಿಸಿಕೊಂಡಿತು. ಶನಿವಾರ ಇಲ್ಲಿನ ದಿ ಗಬ್ಬಾ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಟೀಮ್‌ ಇಂಡಿಯಾ, 4.5 ಓವರ್‌ಗಳಿಗೆ ವಿಕೆಟ್‌ ನಷ್ಟವಿಲ್ಲದೆ 52 ರನ್‌ ಗಳಿಸಿತ್ತು. ಈ ವೇಳೆ ಮಳೆ ಬಂದಿದ್ದರಿಂದ ಪಂದ್ಯವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಅಂಪೈರ್‌ಗಳು ಪಂದ್ಯವನ್ನು ಫಲಿತಾಂಶವಿಲ್ಲದೆ ಮುಗಿಸಿದರು. ಭಾರತದ ಪರ ಅಭಿಷೇಕ್‌ ಶರ್ಮಾ (23*) ಹಾಗೂ ಶುಭಮನ್‌ ಗಿಲ್‌ (29*) ರನ್‌ ಗಳಿಸಿದರು.

ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯ ಕೂಡ ಮಳೆಯಿಂದಾಗಿ ರದ್ದಾಗಿತ್ತು. ಎರಡನೇ ಪಂದ್ಯವನ್ನು ಆಸ್ಟ್ರೇಲಿಯಾ ಗೆದ್ದುಕೊಂಡಿತ್ತು. ನಂತರ ಭಾರತ ತಂಡ, ಮೂರನೇ ಮತ್ತು ನಾಲ್ಕನೇ ಪಂದ್ಯಗಳನ್ನು ಗೆದ್ದು ಮತ್ತೆ ಕಮ್‌ಬ್ಯಾಕ್‌ ಮಾಡಿತ್ತು. ಇನ್ನೇನು ಐದನೇ ಪಂದ್ಯವನ್ನು ಗೆದ್ದು ಟಿ20ಐ ಸರಣಿಯನ್ನು 3-1 ಅಂತರದಲ್ಲಿ ಗೆಲ್ಲಬೇಕೆಂದಿದ್ದ ಭಾರತ ತಂಡಕ್ಕೆ ಮಳೆರಾಯ ನಿರಾಶೆ ಮೂಡಿಸಿತು. ಆದರೂ ಭಾರತ ತಂಡ, ಐದು ಪಂದ್ಯಗಳ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತು. ಆಸ್ಟ್ರೇಲಿಯಾ ಇದುವರೆಗೆ ಭಾರತ ತಂಡವನ್ನು ತವರಿನಲ್ಲಿ ಎರಡಕ್ಕಿಂತ ಹೆಚ್ಚು ಪಂದ್ಯಗಳ ಟಿ20ಐ ಸರಣಿಯಲ್ಲಿ ಸೋಲಿಸಿಲ್ಲ. ಇದೀಗ ಭಾರತ ಆ ದಾಖಲೆಯನ್ನು ಮುರಿಯಿತು.

IND vs AUS: ಐದನೇ ಟಿ20ಐ ಪಂದ್ಯದಿಂದ ತಿಲಕ್‌ ವರ್ಮಾರನ್ನು ಕೈ ಬಿಡಲು ಕಾರಣವೇನು?

ಗಿಲ್‌, ಅಭಿಷೇಕ್‌ ಸ್ಪೋಟಕ ಬ್ಯಾಟಿಂಗ್‌

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಲ್‌ ಮಾಡಲು ಆಸ್ಟ್ರೇಲಿಯಾ ಆಯ್ಕೆ ಮಾಡಿಕೊಂಡಿತು. ಶುಭಮನ್ ಗಿಲ್ ಮತ್ತು ಅಭಿಷೇಕ್ ಶರ್ಮಾ ಜೋಡಿಯೊಂದಿಗೆ ಭಾರತ ತಂಡ ಸ್ಫೋಟಕ ಆರಂಭವನ್ನು ಪಡೆದಿತ್ತು. ಮೊದಲ ಓವರ್‌ನಲ್ಲಿ ಭಾರತ ಎರಡು ಬೌಂಡರಿಗಳ ಸಹಾಯದಿಂದ 11 ರನ್ ಗಳಿಸಿತು. ಮೂರನೇ ಓವರ್‌ನಲ್ಲಿ ಶುಭಮನ್ ಗಿಲ್ ಬೆನ್ ದ್ವಾರಶುಯಿಸ್ ಬೌಲಿಂಗ್‌ನಲ್ಲಿ ನಾಲ್ಕು ಬೌಂಡರಿಗಳನ್ನು ಬಾರಿಸಿದರು. ಪಂದ್ಯದ ಕೊನೆಯಲ್ಲಿ ಅಭಿಷೇಕ್ ಶರ್ಮಾ 13 ಎಸೆತಗಳಲ್ಲಿ 23 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು. ಗಿಲ್‌ ಈಗಾಗಲೇ 16 ಎಸೆತಗಳಲ್ಲಿ 6 ಬೌಂಡರಿಗಳ ಸಹಾಯದಿಂದ 29 ರನ್ ಗಳಿಸಿದ್ದರು.



ಅಭಿಷೇಕ್‌ ಶರ್ಮಾಗೆ ಸರಣಿ ಶ್ರೇಷ್ಠ ಪ್ರಶಸ್ತಿ

ಭಾರತದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು. ಅಭಿಷೇಕ್ 5 ಪಂದ್ಯಗಳಲ್ಲಿ 161 ಸ್ಟ್ರೈಕ್ ರೇಟ್‌ನೊಂದಿಗೆ 163 ರನ್ ಗಳಿಸಿದರು. ಹಿಂದಿನ ಏಷ್ಯಾಕಪ್‌ ಟೂರ್ನಿಯಲ್ಲಿಯೂ ಅವರು ಟೂರ್ನಿ ಶ್ರೇಷ್ಠ ಪ್ರಶಸ್ತಿಯನ್ನು ಶ್ರೇಷ್ಠರಾಗಿದ್ದರು. ಆಸ್ಟ್ರೇಲಿಯಾದ ನೇಥನ್‌ ಎಲ್ಲಿಸ್ 9 ವಿಕೆಟ್‌ಗಳೊಂದಿಗೆ ಸರಣಿಯ ಅತ್ಯಂತ ಯಶಸ್ವಿ ಬೌಲರ್ ಆಗಿದ್ದರು. ಭಾರತದ ವರುಣ್ ಚಕ್ರವರ್ತಿ 5 ವಿಕೆಟ್‌ಗಳನ್ನು ಕಬಳಿಸಿದರು.