ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rishabh Pant: ಕೊಹ್ಲಿಯ 18ನೇ ನಂಬರ್ ಜೆರ್ಸಿ ಧರಿಸಿ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ ರಿಷಭ್ ಪಂತ್

ಕೊಹ್ಲಿ ಟೆಸ್ಟ್ ನಿವೃತ್ತಿಯ ನಂತರ ಭಾರತೀಯ ಆಟಗಾರನೊಬ್ಬ 18ನೇ ನಂಬರ್ ಜೆರ್ಸಿ ಧರಿಸುತ್ತಿರುವುದು ಇದೇ ಮೊದಲಲ್ಲ. ಜೂನ್‌ನಲ್ಲಿ, ಇಂಗ್ಲೆಂಡ್ ಲಯನ್ಸ್ ವಿರುದ್ಧದ ಭಾರತ ಎ ಪರ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ವೇಗದ ಬೌಲರ್ ಮುಖೇಶ್ ಕುಮಾರ್ ಈ ಸಂಖ್ಯೆಯನ್ನು ಧರಿಸಿದ್ದು ಕಂಡುಬಂದಿತ್ತು ಇದು ಭಾರತದ ಮಾಜಿ ನಾಯಕನಿಗೆ ಅಗೌರವ ತೋರುವಂತಿದೆ ಎಂದು ಅಭಿಮಾನಿಗಳು ಟೀಕಿಸಿದ್ದರು.

ಬೆಂಗಳೂರು: ವಿಕೆಟ್​ ಕೀಪರ್-ಬ್ಯಾಟರ್​ ರಿಷಭ್​ ಪಂತ್(Rishabh Pant)​ ಮೂರು ತಿಂಗಳ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್​ಗೆ ಮರಳಿದ್ದಾರೆ. ಪ್ರವಾಸಿ ದಕ್ಷಿಣ ಆಫ್ರಿಕಾ ಎ(South Africa A) ವಿರುದ್ಧ ಉದ್ಯಾನನಗರಿಯ ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ ಗುರುವಾರ ಆರಂಭವಾದ ಮೊದಲ ಚತುರ್ದಿನ ಪಂದ್ಯದಲ್ಲಿ ಅವರು ಭಾರತ ಎ ತಂಡದ ನಾಯಕರಾಗಿ ವಿಶೇಷ ಜೆರ್ಸಿಯೊಂದಿಗೆ ಕಣಕ್ಕಿಳಿದರು.

ವಿರಾಟ್‌ ಕೊಹ್ಲಿ(Virat Kohli)ಯ 18 ನಂಬರ್‌ ಜೆರ್ಸಿ ತೊಟ್ಟು ಪಂತ್‌ ಮೈದಾನಕ್ಕಿಳಿದರು. ಸದ್ಯ 18 ನೇ ನಂಬರ್ ಜೆರ್ಸಿ ದಿನದ ಚರ್ಚಾಸ್ಪದ ವಿಷಯವಾಯಿತು. ವಿರಾಟ್ ಕೊಹ್ಲಿ ಮೇ ತಿಂಗಳಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದಾಗಿನಿಂದ, ಅಭಿಮಾನಿಗಳು ಆ ಸಂಖ್ಯೆಯನ್ನು ಅವರ ಪರಂಪರೆಯ ಸಂಕೇತವೆಂದು ಪರಿಗಣಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಅವರ 10 ನೇ ನಂಬರ್ ಮತ್ತು ಎಂಎಸ್ ಧೋನಿ ಅವರ 7 ನೇ ನಂಬರ್‌ಗೆ ಮಾಡಿದಂತೆ ಕೊಹ್ಲಿ ಅವರ ಸಂಖ್ಯೆಯನ್ನು ನಿವೃತ್ತಿಗೊಳಿಸುವಂತೆ ಅನೇಕರು ಬಿಸಿಸಿಐ ಅನ್ನು ಒತ್ತಾಯಿಸಿದರು, ಆದರೆ ಮಂಡಳಿ ಇನ್ನೂ ಅಂತಹ ಹೆಜ್ಜೆ ಇಡಬೇಕಿದೆ.

ಕೊಹ್ಲಿ ಟೆಸ್ಟ್ ನಿವೃತ್ತಿಯ ನಂತರ ಭಾರತೀಯ ಆಟಗಾರನೊಬ್ಬ 18ನೇ ನಂಬರ್ ಜೆರ್ಸಿ ಧರಿಸುತ್ತಿರುವುದು ಇದೇ ಮೊದಲಲ್ಲ. ಜೂನ್‌ನಲ್ಲಿ, ಇಂಗ್ಲೆಂಡ್ ಲಯನ್ಸ್ ವಿರುದ್ಧದ ಭಾರತ ಎ ಪರ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ವೇಗದ ಬೌಲರ್ ಮುಖೇಶ್ ಕುಮಾರ್ ಈ ಸಂಖ್ಯೆಯನ್ನು ಧರಿಸಿದ್ದು ಕಂಡುಬಂದಿತ್ತು ಇದು ಭಾರತದ ಮಾಜಿ ನಾಯಕನಿಗೆ ಅಗೌರವ ತೋರುವಂತಿದೆ ಎಂದು ಅಭಿಮಾನಿಗಳು ಟೀಕಿಸಿದ್ದರು.

ಇದನ್ನೂ ಓದಿ ಭಾರತ ಎ ತಂಡದಿಂದ ಮೊಹಮ್ಮದ್‌ ಶಮಿ ಔಟ್, ರಿಷಭ್‌ ಪಂತ್‌ಗೆ ನಾಯಕತ್ವ!

ಪಂತ್​ ಕಳೆದ ಜುಲೈ ಅಂತ್ಯದಲ್ಲಿ ನಡೆದ ಇಂಗ್ಲೆಂಡ್​ ಪ್ರವಾಸದ 4ನೇ ಟೆಸ್ಟ್​ ಪಂದ್ಯದ ವೇಳೆ ಪಾದದ ಮೂಳೆ ಮುರಿತಕ್ಕೊಳಗಾಗಿದ್ದರು. ನಂತರದಲ್ಲಿ ಅವರು ಶಸ್ತ್ರಚಿಕಿತ್ಸೆ ಇಲ್ಲದೆ ಚೇತರಿಕೆ ಕಂಡಿದ್ದಾರೆ. ಏಷ್ಯಾಕಪ್​, ವಿಂಡೀಸ್​ ವಿರುದ್ಧದ ತವರಿನ ಸರಣಿ, ಆಸೀಸ್​ ಪ್ರವಾಸ ತಪ್ಪಿಸಿಕೊಂಡಿರುವ ಪಂತ್​, ಮುಂಬರುವ ದಣ ಆಫ್ರಿಕಾ ವಿರುದ್ಧದ ಟೆಸ್ಟ್​ಗೆ ಫಿಟ್​ ಆಗುವ ದೃಷ್ಟಿಯಿಂದ ಈ ಸರಣಿಯ 2 ಪಂದ್ಯಗಳು ಮಹತ್ವದ್ದಾಗಿವೆ.