ಮುಂಬಯಿ: ಮುಂಬೈ ಬೀದಿಗಳಲ್ಲಿ ಫೆರಾರಿ, ಲ್ಯಾಂಬೊರ್ಗಿನಿ ಕಾರುಗಳಲ್ಲಿ ಸುತ್ತಾಟ ನಡೆಸಿ ಸುದ್ದಿಯಾಗುತ್ತಿದ್ದ ಭಾರತದ ಕ್ರಿಕೆಟ್ ಸ್ಟಾರ್ ರೋಹಿತ್ ಶರ್ಮಾ, ಇದೀಗ ಮತ್ತೊಂದು ಐಷಾರಾಮಿ(Rohit Sharma New Tesla Car) ಕಾರು ಖರೀದಿಸಿದ್ದಾರೆ. ಅದುವೇ ಟೆಸ್ಲಾ ಮಾಡೆಲ್ Y ಕಾರು. ನೂತನ ಟೆಸ್ಲಾ ಕಾರನ್ನು(Tesla Model Y) ರೋಹಿತ್ ಚಲಾಯಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಕಾರಿಗೆ ‘MH01FB3015’ ಎಂಬ ನಂಬರ್ ಪ್ಲೇಟ್ ಹಾಕಲಾಗಿದೆ. ಈ ನಂಬರ್ ತುಂಬಾ ವಿಶೇಷವಾಗಿದ್ದು, ರೋಹಿತ್ ಕುಟುಂಬದೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದೆ.
ಹೌದು, ರೋಹಿತ್ ತಮ್ಮ ಮಕ್ಕಳ ಹುಟ್ಟಿದ ದಿನಾಂಕಗಳನ್ನು ಸೇರಿಸಿ ಈ ನಂಬರ್ ಪ್ಲೇಟ್ ಪಡೆದಿದ್ದಾರೆ. ಮಗಳು ಸಮೈರಾ (30-12-2018) ಮತ್ತು ಮಗ ಅಹಾನ್ (15-11-2024) ಹುಟ್ಟಿದ ದಿನಾಂಕಗಳಿಂದ 30 ಮತ್ತು 15 ಸಂಖ್ಯೆಗಳನ್ನು ಸೇರಿಸಿ '3015' ಎಂದು ಆಯ್ಕೆ ಮಾಡಿದ್ದಾರೆ. ಇದು ರೋಹಿತ್‌ಗೆ ಕೇವಲ ಒಂದು ಸಂಖ್ಯೆಯಲ್ಲ, ಬದಲಿಗೆ ಕುಟುಂಬದ ಮೇಲಿನ ಪ್ರೀತಿಯ ಸಂಕೇತವಾಗಿದೆ. ಇದೇ ನಂಬರ್ ಅವರ ಲಂಬೋರ್ಗಿನಿ ಉರುಸ್ SE ಕಾರಿನಲ್ಲೂ ಇದೆ.
ರೋಹಿತ್ ನೂತನ ಟೆಸ್ಲಾ ಕಾರು
ರೋಹಿತ್ ನಯವಾದ ಎಲೆಕ್ಟ್ರಿಕ್ ಟೆಸ್ಲಾ ಕಾರು ಚಾಲನೆ ಮಾಡುತ್ತಿರುವ ವಿಡಿಯೊ ಭಾರೀ ವೈರಲ್ ಆಗುತ್ತಿದ್ದಂತೆ ಒಬ್ಬ ಎಕ್ಸ್ ಬಳಕೆದಾರ "ಇದಕ್ಕಾಗಿಯೇ ಟೆಸ್ಲಾ ಜಾಹೀರಾತು ಮಾಡುವ ಅಗತ್ಯವಿಲ್ಲ - 45 ಮಿಲಿಯನ್ ಇನ್‌ಸ್ಟಾಗ್ರಾಮ್ ಫಾಲೋವರ್‌ಗಳನ್ನು ಹೊಂದಿರುವ ರೋಹಿತ್ ಶರ್ಮಾ ಹೊಸ ಟೆಸ್ಲಾ ಮಾಡೆಲ್ Y ಖರೀದಿಸಿದ್ದಾರೆ" ಎಂದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರ ಗಮನ ಸೆಳೆದಿದ್ದು, ಅವರು ಅದನ್ನು ರೀಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ India ODI Squad: ಅ.15ಕ್ಕೆ ರೋಹಿತ್, ಕೊಹ್ಲಿ ಆಸೀಸ್ಗೆ ಪ್ರಯಾಣ
ಸದ್ಯ ರೋಹಿತ್ ಅವರು ಅ.19ರಿಂದ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಏಕದಿನ ಸರಣಿಗೆ ಸಿದ್ಧವಾಗುತ್ತಿದ್ದಾರೆ. ಟೆಸ್ಟ್ ನಿವೃತ್ತಿ ಬಳಿಕ ರೋಹಿತ್ ಭಾರತ ಪರ ಆಡುತ್ತಿರುವ ಮೊದಲ ಸರಣಿ ಇದಾಗಿದೆ. ಅವರು ಕೊನೆಯ ಬಾರಿಗೆ ಭಾರತ ಪರ ಆಡಿದ್ದು ಚಾಂಪಿಯನ್ಸ್ ಟ್ರೋಫೊ ಫೈನಲ್ ಪಂದ್ಯದಲ್ಲಿ.