India ODI Squad: ಅ.15ಕ್ಕೆ ರೋಹಿತ್, ಕೊಹ್ಲಿ ಆಸೀಸ್ಗೆ ಪ್ರಯಾಣ
ಒಂದು ವೇಳೆ ವಿಂಡೀಸ್ ವಿರುದ್ಧದ 2ನೇ ಟೆಸ್ಟ್ ಕೂಡ ಬೇಗನೆ ಮುಗಿದರೆ, ಏಕದಿನ ತಂಡದಲ್ಲಿರುವ ಆಟಗಾರರಿಗೆ ಮನೆಗೆ ಮರಳಿ ಮತ್ತೆ ದೆಹಲಿಗೆ ಹಿಂದಿರುಗುವ ಕಿರು ವಿರಾಮವೂ ಲಭಿಸಬಹುದು ಎನ್ನಲಾಗಿದೆ. ಟೆಸ್ಟ್‌ನ ಭಾಗವಾಗದ ಆಟಗಾರರು ಮೊದಲ ಹಂತದಲ್ಲಿ ಪ್ರಯಾಣ ಬೆಳೆಸಿ ಅಭ್ಯಾಸ ನಿರತರಾಗಲಿದ್ದಾರೆ.

-

ನವದೆಹಲಿ: ಬಹುನಿರೀಕ್ಷಿತ ಆಸ್ಟ್ರೆಲಿಯಾ ಪ್ರವಾಸದ ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳ ಸರಣಿಗೆ ಭಾರತ ತಂಡದ ಆಟಗಾರರು(India ODI Squad) ಅಕ್ಟೋಬರ್ 15ರಂದು ನವದೆಹಲಿಯಿಂದ ಎರಡು ಗುಂಪುಗಳಲ್ಲಿ ಪ್ರಯಾಣಿಸಲಿದ್ದಾರೆ ಎಂದು ಬಿಸಿಸಿಐ(BCCI) ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ. ಟಿಕೆಟ್ ಲಭ್ಯತೆಯ ಆಧಾರದಲ್ಲಿ ತಂಡವನ್ನು ಎರಡು ಗುಂಪುಗಳಲ್ಲಿ ವಿಂಗಡಿಸಲಾಗಿದೆ.
ಟಿಕೆಟ್ ಲಭ್ಯತೆ ಮತ್ತು ಲಾಜಿಸ್ಟಿಕ್ಸ್ ಕಾರಣಗಳಿಂದಾಗಿ ಬಿಸಿಸಿಐ ಈ ರೀತಿಯ ಪ್ರಯಾಣ ವ್ಯವಸ್ಥೆಯನ್ನು ಮಾಡಿದೆ ಎನ್ನಲಾಗಿದೆ. ಮೊದಲ ಗುಂಪಿನ ಆಟಗಾರರು ಬೆಳಗ್ಗೆ ಪ್ರಯಾಣಿಸಿದರೆ, ಎರಡನೇ ಗುಂಪಿನ ಆಟಗಾರರು ಸಂಜೆ ಪ್ರಯಾಣಿಸಲಿದ್ದಾರೆ.
ಮಾಜಿ ನಾಯಕರಾದ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಟೆಸ್ಟ್ ನಿವೃತ್ತಿ ಬಳಿಕ ಆಡುತ್ತಿರುವ ಮೊದಲ ಸರಣಿ ಇದಾಗಿರುವ ಕಾರಣ ಉಭಯ ಆಟಗಾರರ ಅಭಿಮಾನಿಗಳು ನೆಚ್ಚಿನ ಆಟಗಾರರ ಆಟವನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ. ಟೆಸ್ಟ್‌ನಲ್ಲಿ ಸೈ ಎನಿಸಿಕೊಂಡಿರುವ ನಾಯಕ ಶುಭಮನ್ ಗಿಲ್ ಏಕದಿನದಲ್ಲಿಯೂ ತಮ್ಮ ನಾಯಕತ್ವದ ಸಾಮರ್ಥ್ಯವನ್ನು ತೋರುವ ವಿಶ್ವಾಸದಲ್ಲಿದ್ದಾರೆ.
ಕೊಹ್ಲಿ ಲಂಡನ್‌ನಲ್ಲಿದ್ದರೂ ಕೂಡ ಅವರು ನವದೆಹಲಿಯಲ್ಲಿ ಪ್ರಯಾಣಕ್ಕೆ ಮುನ್ನ ತಂಡ ಕೂಡಿಕೊಳ್ಳಲಿದ್ದಾರೆ. ರೋಹಿತ್, ಕೊಹ್ಲಿ ಅ.15ರಂದೇ ಅಥವಾ ಅದಕ್ಕೆ ಒಂದು ದಿನ ಮುನ್ನವೇ ನವದೆಹಲಿಗೆ ತಲುಪಬಹುದು ಎನ್ನಲಾಗಿದೆ. ಭಾರತ ತಂಡ ಪ್ರವಾಸದ ಮೊದಲ ಪಂದ್ಯವನ್ನು ಅ.19ರಂದು ಪರ್ತ್ನಲ್ಲಿ ಆಡಲಿದೆ.
ಇದನ್ನೂ ಓದಿ IND vs SA: ಇಂದು ಭಾರತ-ದಕ್ಷಿಣ ಆಫ್ರಿಕಾ ಕಾದಾಟ; ಹ್ಯಾಟ್ರಿಕ್ ಗೆಲುವಿನ ವಿಶ್ವಾಸದಲ್ಲಿ ಕೌರ್ ಪಡೆ
ಒಂದು ವೇಳೆ ವಿಂಡೀಸ್ ವಿರುದ್ಧದ 2ನೇ ಟೆಸ್ಟ್ ಕೂಡ ಬೇಗನೆ ಮುಗಿದರೆ, ಏಕದಿನ ತಂಡದಲ್ಲಿರುವ ಆಟಗಾರರಿಗೆ ಮನೆಗೆ ಮರಳಿ ಮತ್ತೆ ದೆಹಲಿಗೆ ಹಿಂದಿರುಗುವ ಕಿರು ವಿರಾಮವೂ ಲಭಿಸಬಹುದು ಎನ್ನಲಾಗಿದೆ. ಟೆಸ್ಟ್‌ನ ಭಾಗವಾಗದ ಆಟಗಾರರು ಮೊದಲ ಹಂತದಲ್ಲಿ ಪ್ರಯಾಣ ಬೆಳೆಸಿ ಅಭ್ಯಾಸ ನಿರತರಾಗಲಿದ್ದಾರೆ.