Rohit Sharma: ಭಾರತ ಏಕದಿನ ಕ್ರಿಕೆಟ್ ನಾಯಕನಾಗಿ ಗಿಲ್ ನೇಮಕ: 13 ವರ್ಷಗಳ ಹಳೆಯ ರೋಹಿತ್ ಟ್ವೀಟ್ ವೈರಲ್
ವರದಿಗಳ ಪ್ರಕಾರ, ರೋಹಿತ್ ಶರ್ಮ, ವಿರಾಟ್‌ಗೆ ಆಸ್ಟ್ರೇಲಿಯಾ ಪ್ರವಾಸವೇ ಕೊನೆ ಸರಣಿ ಆಗಲೂಬಹುದು. ಒಂದು ವೇಳೆ ಅವರನ್ನು ತಂಡದಲ್ಲಿ ಮುಂದುವರಿಸಿದರೂ, 2027ರ ವಿಶ್ವಕಪ್ ಮುನ್ನ ಅಥವಾ ಮುಂದಿನ ವರ್ಷವೇ ನಿವೃತ್ತಿ ಘೋಷಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

-

ಮುಂಬಯಿ: ಕಾಕತಾಳೀಯ ಎಂಬಂತೆ 13 ವರ್ಷಗಳ ಹಿಂದೆ ತನ್ನ ಬಳಿಕ ಭಾರತ ತಂಡದ ನಾಯಕನಾಗಿ ಯಾರು ಆಯ್ಕೆಯಾಗುತ್ತಾರೆ ಎಂದು ರೋಹಿತ್ ಶರ್ಮ(Rohit Sharma) ಅವರು ನುಡಿದಿದ್ದ ಭವಿಷ್ಯವೊಂದು ನಿಜವಾಗಿದೆ. ಈ ವರ್ಷಾರಂಭದಲ್ಲಿ ಭಾರತದ ಟೆಸ್ಟ್ ನಾಯಕನಾಗಿ ಆಯ್ಕೆಯಾಗಿದ್ದ ಶುಭಮನ್ ಗಿಲ್(Shubman Gill) ಇದೀಗ ಏಕದಿನ ತಂಡದ ನಾಯಕನಾಗಿದ್ದಾರೆ.
ಹೌದು, ರೋಹಿತ್ ಶರ್ಮ 2012, ಸೆ.14ರಂದು ಮಾಡಿದ್ದ ಟ್ವೀಟ್‌ವೊಂದರಲ್ಲಿ ‘‘ಒಂದು ಯುಗದ ಅಂತ್ಯ(45) ಹಾಗೂ ಹೊಸ ಯುಗದ ಆರಂಭ(77)’’ ಎಂದು ಬರೆದಿದ್ದರು. ಈ ಸಂಖ್ಯೆಗಳು ಜೆರ್ಸಿಯ ಸಂಖ್ಯೆಯನ್ನು ಉಲ್ಲೇಖಿಸುತ್ತಿದೆ. ರೋಹಿತ್ 45 ಸಂಖ್ಯೆಯ ಜೆರ್ಸಿ ಧರಿಸಿದರೆ, ಗಿಲ್ 77 ಸಂಖ್ಯೆ ಜೆರ್ಸಿ ಧರಿಸುತ್ತಾರೆ. ಅಚ್ಚರಿ ಎಂದರೆ ರೋಹಿತ್ ಅವರು ಟ್ವೀಟ್ ಮಾಡುವಾಗ ಧೋನಿ ಅವರು ಭಾರತ ತಂಡದ ನಾಯನಾಗಿದ್ದರು. ಹೀಗಿದ್ದರೂ ಅವರು ತಾವು ನಾಯಕನಾಗುವ ಮತ್ತು ತಮ್ಮ ಬಳಿಕ ನಾಯಕನಾಗುವ ಬಗ್ಗೆ ನುಡಿದ ಭವಿಷ್ಯ ನಿಜವಾಗಿದೆ. ಹೀಗಾಗಿ ಈ ಟ್ವೀಟ್ ವೈರಲ್ ಆಗಿದೆ.
ಆಸ್ಟ್ರೇಲಿಯಾ ವಿರುದ್ಧದ ಸರಣಿಯಿಂ ಶುಭಮನ್ ಗಿಲ್ ಅವರ ಏಕದಿನ ನಾಯಕತ್ವ ಆರಂಭವಾಗಲಿದೆ. ಮೊದಲ ಏಕದಿನ ಪಂದ್ಯ ಅ.19, 2ನೇ ಪಂದ್ಯ ಅ.23, 3ನೇ ಪಂದ್ಯ ಅ.25ಕ್ಕೆ ನಿಗದಿಯಾಗಿವೆ.
ಇದನ್ನೂ ಓದಿ Rohit Sharma: ರೋಹಿತ್, ವಿರಾಟ್‌ಗೆ ಆಸ್ಟ್ರೇಲಿಯಾ ಪ್ರವಾಸವೇ ಕೊನೆ ಸರಣಿ!
ಈವರೆಗೂ ಭಾರತ ರೋಹಿತ್ ನಾಯಕತ್ವದಲ್ಲಿ ಆಡಿದ 56 ಏಕದಿನದಲ್ಲಿ 42ರಲ್ಲಿ ಗೆದ್ದಿದೆ. 2 ಬಾರಿ ಏಷ್ಯಾಕಪ್, 1 ಬಾರಿ ಚಾಂಪಿಯನ್ಸ್ ಟ್ರೋಫಿಯನ್ನೂ ಗೆಲ್ಲಿಸಿಕೊಟ್ಟಿದ್ದಾರೆ. ಅವರ ನಾಯಕತ್ವದ ದಾಖಲೆ ಉತ್ತಮವಾಗಿದ್ದರೂ, 2027ರ ಏಕದಿನ ವಿಶ್ವಕಪ್ ದೃಷ್ಟಿಯಲ್ಲಿಟ್ಟುಕೊಂಡು ಈಗಲೇ ಗಿಲ್‌ಗೆ ಹೊಣೆಗಾರಿಕೆ ನೀಡಲಾಗಿದೆ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಹೇಳಿದ್ದಾರೆ.
ವರದಿಗಳ ಪ್ರಕಾರ, ರೋಹಿತ್, ವಿರಾಟ್‌ಗೆ ಆಸ್ಟ್ರೇಲಿಯಾ ಪ್ರವಾಸವೇ ಕೊನೆ ಸರಣಿ ಆಗಲೂಬಹುದು. ಒಂದು ವೇಳೆ ಅವರನ್ನು ತಂಡದಲ್ಲಿ ಮುಂದುವರಿಸಿದರೂ, 2027ರ ವಿಶ್ವಕಪ್ ಮುನ್ನ ಅಥವಾ ಮುಂದಿನ ವರ್ಷವೇ ನಿವೃತ್ತಿ ಘೋಷಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.