ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

INDW vs PAKW: ಭಾರತ-ಪಾಕ್‌ ಮಹಿಳಾ ಪಂದ್ಯದಲ್ಲಿ ವಿವಾದಕ್ಕೆ ಕಾರಣವಾದ ರನೌಟ್‌, ಟಾಸ್‌ ನಿರ್ಧಾರ

ದ್ವಿಪಕ್ಷೀಯ ಸರಣಿಯಲ್ಲಿ ಸ್ಫೋಟಕ ಬ್ಯಾಟಿಂಗ್‌ ನಡೆಸಿ, ಐಸಿಸಿ ಟೂರ್ನಿಯಲ್ಲಿ ಸದಾ ಕಳಪೆ ಬ್ಯಾಟಿಂಗ್‌ ಪ್ರದರ್ಶನ ತೋರುವ ಸ್ಮೃತಿ ಮಂಧಾನ ತಮ್ಮ ಕಳಪೆ ಫಾರ್ಮ್‌ ಅನ್ನು ಏಕದಿನ ವಿಶ್ವಕಪ್‌ನಲ್ಲಿಯೂ ಮುಂದುವರಿಸಿದ್ದಾರೆ. ಆಡಿದ ಎರಡೂ ಪಂದ್ಯಗಳಲ್ಲಿಯೂ ಎರಡಂಕಿ ಮೊತ್ತ ಪೇರಿಸಲು ವಿಫಲವಾಗಿದ್ದಾರೆ. ಇದೇ ಕಾರಣಕ್ಕೆ ಅವರನ್ನು ಕೆಲ ನೆಟ್ಟಿಗರು ಟ್ರೋಲ್‌ ಮಾಡಲಾರಂಭಿಸಿದ್ದಾರೆ.

ಭಾರತ-ಪಾಕ್‌ ಮಹಿಳಾ ಪಂದ್ಯದಲ್ಲಿ ವಿವಾದಕ್ಕೆ ಕಾರಣವಾದ ರನೌಟ್‌

-

Abhilash BC Abhilash BC Oct 5, 2025 9:30 PM

ಕೊಲಂಬೊ: ಭಾನುವಾರದ ಭಾರತ ಮತ್ತು ಪಾಕಿಸ್ತಾನ ನಡುವಣ ಮಹಿಳಾ ವಿಶ್ವಕಪ್‌(ICC Womens World Cup 2025) ಲೀಗ್‌ ಪಂದ್ಯದಲ್ಲಿ ನಡೆದ ಎರಡು ಘಟನೆಗಳು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಟಾಸ್‌ ವೇಳೆಯೆ ಎಡವಟ್ಟು ಸಂಭವಿಸಿತು. ಭಾರತದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ನಾಣ್ಯವನ್ನು ಚಿಮ್ಮಿಸಿದಾಗ, ಪಾಕ್‌ ನಾಯಕಿ ಫಾತಿಮಾ ಸನಾ(Fatima Sana) ಅವರು ‘ಟೇಲ್ಸ್‌’ ಎಂದು ಹೇಳಿದರು. ಆದರೆ, ಪಂದ್ಯದ ರೆಫರಿ ಶಾಂಡ್ರೆ ಫ್ರಿಟ್ಜ್ ಹಾಗೂ ವೀಕ್ಷಕ ವಿವರಣೆಗಾರ್ತಿ ಮೆಲ್ ಜೋನ್ಸ್ ಅವರು ‘ಹೆಡ್‌’ ಎಂದು ತಪ್ಪಾಗಿ ಕೇಳಿಸಿಕೊಂಡಿದ್ದಾರೆ. ನಾಣ್ಯವು ಹೆಡ್‌ ಬಿದ್ದಿದ್ದರಿಂದ, ರೆಫರಿ ಸೂಚನೆಯಂತೆ ಪಾಕ್‌ ನಾಯಕಿಯು ಬೌಲಿಂಗ್‌ ಆಯ್ದುಕೊಂಡಿದ್ದರು.

ಇದಾದ ಬಳಿಕ ಪಾಕಿಸ್ತಾನ ಬ್ಯಾಟಿಂಗ್‌ ಇನಿಂಗ್ಸ್‌ ವೇಳೆ ಸಂಭವಿಸಿದ ರನೌಟ್‌(Muneeba Ali Run-out) ವಿವಾದಕ್ಕೆ ಗುರಿಯಾಗಿದೆ. ಹೌದು, ಕ್ರಾಂತಿ ಗೌಡ್ ಎಸೆದ ನಾಲ್ಕನೇ ಓವರ್‌ನ ಕೊನೆಯ ಎಸೆತ ಮುನಿಬಾ ಅಲಿ ಅವರ ಪ್ಯಾಡ್‌ಗೆ ಬಡಿಯಿತು. ಈ ವೇಳೆ ಭಾರತೀಯ ಆಟಗಾರ್ತಿಯರು ಎಲ್‌ಬಿಡಬ್ಲ್ಯುವಿಗೆ ಮನವಿ ಮಾಡಿದರು. ಫೀಲ್ಡ್‌ ಅಂಪೈರ್‌ ಇದನ್ನು ನಿರಾಕರಿಸಿದರು. ಇದೇ ವೇಳೆ ದೀಪ್ತಿ ಶರ್ಮ ಚೆಂಡನ್ನು ಸ್ಟ್ರೈಕ್‌ನತ್ತ ಎಸೆದರು. ಚೆಂಡು ನೇರವಾಗಿ ಸ್ಟಂಪ್‌ಗೆ ಬಡಿಯಿತು. ಭಾರತೀಯ ಆಟಗಾರ್ತಿಯರು ಯಾವುದೇ ರನೌಟ್‌ ಮನವಿ ಮಾಡಿಲಿಲ್ಲ.

ಇದನ್ನೂ ಓದಿ INDW vs PAKW: ಭಾರತ-ಪಾಕ್‌ ಮಹಿಳಾ ಹೈವೋಲ್ಟೇಜ್‌ ಪಂದ್ಯಕ್ಕೆ ಕೀಟ ಬಾಧೆ; 15 ನಿಮಿಷ ಪಂದ್ಯ ಸ್ಥಗಿತ

ಆದರೆ ಮೂರನೇ ಅಂಪೈರ್‌ ಇದನ್ನು ಪರೀಕ್ಷಿಸಲು ಮುಂದಾದರು. ಈ ವೇಳೆ ಪಾಕಿಸ್ತಾನದ ಆರಂಭಿಕ ಆಟಗಾರ್ತಿ ಕ್ರೀಸ್‌ನಿಂದ ಹೊರಗಿದ್ದರು. ಆದರೆ ಬ್ಯಾಟ್‌ ಕ್ರೀಸ್‌ನ ಒಳಗಿರುವಂತೆ ಕಾಣಿಸಿತು. ಹೀಗಾಗಿ ಮೂರನೇ ಅಂಪೈರ್ ನಾಟ್ ಔಟ್ ನಿರ್ಧಾರಕ್ಕೆ ಹೋಗಲು ನಿರ್ಧರಿಸಿದ್ದರು. ಆದಾಗ್ಯೂ, ಕೆರ್ರಿನ್ ಕ್ಲಾಸ್ಟೆ ಮತ್ತೊಮ್ಮೆ ದೃಶ್ಯಗಳನ್ನು ನೋಡಿದಾಗ ಚೆಂಡು ಸ್ಟಂಪ್‌ಗಳನ್ನು ಹೊಡೆಯುವಾಗ ಅಲಿಯ ಬ್ಯಾಟ್ ಮೇಲಕ್ಕೆತ್ತಿರುವಂತೆ ಕಾಣಿಸಿತು. ಅಂತಿಮವಾಗಿ ದೊಡ್ಡ ಪರದೆಯಲ್ಲಿ ಔಟ್‌ ಎಂದು ತೀರ್ಪು ಬಂತು.

ಈ ನಿರ್ಧಾರದಿಂದ ಸಿಟ್ಟಿಗೆದ್ದ ಪಾಕಿಸ್ತಾನ ನಾಯಕಿ ಫಾತಿಮಾ ಸನಾ ಡ್ರೆಸ್ಸಿಂಗ್ ಕೊಠಡಿಯಿಂದ ಹೊರಬಂದು, ನಾಲ್ಕನೇ ಅಂಪೈರ್ ಜತೆ ಮೈದಾನದ ಬೌಂಡರಿ ಲೈನ್‌ ಬಳಿ ಈ ನಿರ್ಧಾರವನ್ನು ವಿರೋಧಿಸಿದರು. ಸದ್ಯ ಈ ವಿಡಿಯೊ ವೈರಲ್‌ ಆಗಿದೆ.