ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rohit Sharma: 14 ರನ್‌ ಬಾರಿಸಿದರೂ ದ್ರಾವಿಡ್‌ ದಾಖಲೆ ಮುರಿದ ರೋಹಿತ್‌

38 ವರ್ಷದ ರಾಹುಲ್‌ ಭಾರತದಲ್ಲಿ ಈ ಮೈಲಿಗಲ್ಲು ಸಾಧಿಸಿದ ನಾಲ್ಕನೇ ಬ್ಯಾಟ್ಸ್‌ಮನ್ ಎನಿಸಿದರು. ಈ ಮೂಲಕ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಅವರ ಜತೆ ಎಲೈಟ್‌ ಪಟ್ಟಿ ಸೇರಿದರು. ಭಾರತದಲ್ಲಿ ಮೂರು ಸ್ವರೂಪಗಳಲ್ಲಿ ರೋಹಿತ್‌ 9005* ರನ್ ಗಳಿಸಿದ್ದಾರೆ.

14 ರನ್‌ ಬಾರಿಸಿದರೂ ದ್ರಾವಿಡ್‌ ದಾಖಲೆ ಮುರಿದ ರೋಹಿತ್‌

Rohit Sharma -

Abhilash BC
Abhilash BC Dec 3, 2025 3:49 PM

ರಾಯ್ಪುರ ಡಿ.3: ಬುಧವಾರ ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ(IND vs SA 2nd ODI) ಪಂದ್ಯದಲ್ಲಿ ಭಾರತದ ಮಾಜಿ ರೋಹಿತ್ ಶರ್ಮಾ(Rohit Sharma) ಪ್ರಮುಖ ಮೈಲಿಗಲ್ಲೊಂದು ತಪುಪಿದರು. ಪಂದ್ಯದಲ್ಲಿ 14 ರನ್ ಗಳಿಸುವ ಮೂಲಕ ಭಾರತದಲ್ಲಿ 9000 ಅಂತರರಾಷ್ಟ್ರೀಯ ರನ್‌ಗಳನ್ನು ಪೂರ್ಣಗೊಳಿಸಿದರು. ಹಾದಿಯಲ್ಲಿ ದಿಗ್ಗಜ ರಾಹುಲ್‌ ದ್ರಾವಿಡ್‌ ಅವರನ್ನು ಹಿಂದಿಕ್ಕಿದರು.

38 ವರ್ಷದ ರಾಹುಲ್‌ ಭಾರತದಲ್ಲಿ ಈ ಮೈಲಿಗಲ್ಲು ಸಾಧಿಸಿದ ನಾಲ್ಕನೇ ಬ್ಯಾಟ್ಸ್‌ಮನ್ ಎನಿಸಿದರು. ಈ ಮೂಲಕ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಅವರ ಜತೆ ಎಲೈಟ್‌ ಪಟ್ಟಿ ಸೇರಿದರು. ಭಾರತದಲ್ಲಿ ಮೂರು ಸ್ವರೂಪಗಳಲ್ಲಿ ರೋಹಿತ್‌ 9005* ರನ್ ಗಳಿಸಿದ್ದಾರೆ. ದಂತಕಥೆಯ ತೆಂಡೂಲ್ಕರ್ (14192) ಮತ್ತು ಕೊಹ್ಲಿ (12373) ಮೊದಲ ಎರಡು ಸ್ಥಾನದಲ್ಲಿದ್ದಾರೆ.

ಭಾರತದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳು

ಸಚಿನ್ ತೆಂಡೂಲ್ಕರ್: 313 ಇನ್ನಿಂಗ್ಸ್‌ಗಳಲ್ಲಿ 14192 ರನ್‌ಗಳು

ವಿರಾಟ್ ಕೊಹ್ಲಿ: 254 ರನ್‌ಗಳಲ್ಲಿ 12373 ರನ್‌ಗಳು (ಈ ಪಂದ್ಯದ ಆರಂಭಕ್ಕೂ ಮೊದಲು)

ರೋಹಿತ್ ಶರ್ಮಾ: 208 ಇನ್ನಿಂಗ್ಸ್‌ಗಳಲ್ಲಿ 9005 ರನ್‌ಗಳು

ರಾಹುಲ್ ದ್ರಾವಿಡ್: 211 ಇನ್ನಿಂಗ್ಸ್‌ಗಳಲ್ಲಿ 9004 ರನ್‌ಗಳು

ವೀರೇಂದ್ರ ಸೆಹ್ವಾಗ್: 179 ಇನ್ನಿಂಗ್ಸ್‌ಗಳಲ್ಲಿ 7796 ರನ್‌ಗಳು

ಪಂದ್ಯದಲ್ಲಿ ಟಾಸ್‌ ಸೋತ ಭಾರತ ಬ್ಯಾಟಿಂಗ್‌ ಆಹ್ವಾನ ಪಡೆದು ಉತ್ತಮ ರನ್‌ ಕಲೆಹಾಕುತ್ತಿದೆ. ಭಾರತ ಸೋತ ಸತತ 20 ನೇ ಟಾಸ್ ಆಗಿದ್ದು, 2023 ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆರಂಭವಾದ ಸೋಲಿನ ಸರಣಿಯಾಗಿದೆ.

ಇದನ್ನೂ ಓದಿ Harshit Rana: ನೀತಿ ಸಂಹಿತೆ ಉಲ್ಲಂಘನೆ; ಹರ್ಷಿತ್ ರಾಣಾಗೆ ವಾಗ್ದಂಡನೆ

ಉಭಯ ಆಡುವ ಬಳಗ

ಭಾರತ: ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರುತುರಾಜ್ ಗಾಯಕ್ವಾಡ್, ವಾಷಿಂಗ್ಟನ್ ಸುಂದರ್, ಕೆಎಲ್ ರಾಹುಲ್(ನಾಯಕ ಮತ್ತು ವಿ.ಕೀ.), ರವೀಂದ್ರ ಜಡೇಜಾ, ಹರ್ಷಿತ್ ರಾಣಾ, ಕುಲದೀಪ್ ಯಾದವ್, ಅರ್ಶದೀಪ್‌ ಸಿಂಗ್, ಪ್ರಸಿದ್ಧ್ ಕೃಷ್ಣ.

ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್(ವಿ.ಕೀ.), ಐಡೆನ್ ಮಾರ್ಕ್ರಾಮ್, ಟೆಂಬಾ ಬವುಮಾ(ನಾಯಕ), ಮ್ಯಾಥ್ಯೂ ಬ್ರೀಟ್ಜ್ಕೆ, ಟೋನಿ ಡಿ ಜೋರ್ಜಿ, ಡೆವಾಲ್ಡ್ ಬ್ರೆವಿಸ್, ಮಾರ್ಕೊ ಜಾನ್ಸೆನ್, ಕಾರ್ಬಿನ್ ಬಾಷ್, ಕೇಶವ್ ಮಹಾರಾಜ್, ನಾಂದ್ರೆ ಬರ್ಗರ್, ಲುಂಗಿ ಎನ್‌ಗಿಡಿ.