ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಟಾಸ್‌ ಗೆದ್ದ ರಾಜಸ್ಥಾನ್‌; ಡೆಲ್ಲಿ ಪರ ಮೂರು ಬದಲಾವಣೆ

RR vs DC Live Score: ಭುಜದ ಗಾಯದಿಂದ ಚೇತರಿಸಿಕೊಂಡಿರುವ ಮಿಚೆಲ್‌ ಸ್ಟಾರ್ಕ್‌ ಹಾಲಿ ಆವೃತ್ತಿಯಲ್ಲಿ ಆಡುತ್ತಿರುವ ಮೊದಲ ಪಂದ್ಯ ಇದಾಗಿದೆ. ಸ್ಟಾರ್ಕ್‌ ಅವರು ರಾಜಸ್ಥಾನ್‌ ವಿರುದ್ಧ ಆಡುವ ಬಗ್ಗೆ ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್‌ ಎಕ್ಸ್‌ನಲ್ಲಿ ಒಂದು ದಿನ ಮೊದಲೇ ವಿಡಿಯೊ ಹಂಚಿಕೊಳ್ಳುವ ಮೂಲಕ ಸುಳಿವು ನೀಡಿತ್ತು. ಡೆಲ್ಲಿ ಈ ಪಂದ್ಯಕ್ಕೆ ಡೇವಿಡ್‌ ಮಿಲ್ಲರ್‌ ಅವರನ್ನು ಕೈಬಿಟ್ಟಿತು.

Starc

ಜೈಪುರ, ಮೇ 1: ಶುಕ್ರವಾರದ ಐಪಿಎಲ್‌(IPL 2026) ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌(RR vs DC) ತಂಡದ ವಿರುದ್ಧ ಟಾಸ್‌ ಗೆದ್ದ ಆತಿಥೇಯ ರಾಜಸ್ಥಾನ್‌ ರಾಯಲ್ಸ್‌ ತಂಡದ ನಾಯಕ ರಿಯಾನ್‌ ಪರಾಗ್‌ ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡರು. ಡೆಲ್ಲಿ ಮೂರು ಬದಲಾವಣೆಯೊಂದಿಗೆ ಕಣಕ್ಕಿಳಿಯಿತು. ಮಿಚೆಲ್‌ ಸ್ಟಾರ್ಕ್‌, ಶ್ರೀಲಂಕಾದ ಆಟಗಾರರಾದ ಪಾತುಮ್ ನಿಶಾಂಕ, ದುಶ್ಮಂತ ಚಮೀರ ಆಡುವ ಬಳಗದಲ್ಲಿ ಕಾಣಿಸಿಕೊಂಡರು.

ಭುಜದ ಗಾಯದಿಂದ ಚೇತರಿಸಿಕೊಂಡಿರುವ ಮಿಚೆಲ್‌ ಸ್ಟಾರ್ಕ್‌ ಹಾಲಿ ಆವೃತ್ತಿಯಲ್ಲಿ ಆಡುತ್ತಿರುವ ಮೊದಲ ಪಂದ್ಯ ಇದಾಗಿದೆ. ಸ್ಟಾರ್ಕ್‌ ಅವರು ರಾಜಸ್ಥಾನ್‌ ವಿರುದ್ಧ ಆಡುವ ಬಗ್ಗೆ ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್‌ ಎಕ್ಸ್‌ನಲ್ಲಿ ಒಂದು ದಿನ ಮೊದಲೇ ವಿಡಿಯೊ ಹಂಚಿಕೊಳ್ಳುವ ಮೂಲಕ ಸುಳಿವು ನೀಡಿತ್ತು. ಡೆಲ್ಲಿ ಈ ಪಂದ್ಯಕ್ಕೆ ಡೇವಿಡ್‌ ಮಿಲ್ಲರ್‌ ಅವರನ್ನು ಕೈಬಿಟ್ಟಿತು.

ಜೈಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದ ಪಿಚ್‌ ಸಂಪೂರ್ಣ ಬ್ಯಾಟಿಂಗ್‌ ಸ್ನೇಹಿ ಪಿಚ್‌ ಆಗಿದೆ. ಇತ್ತೀಚೆಗೆ ಇಲ್ಲಿ ನಡೆದಿದ್ದ ಪಂದ್ಯದಲ್ಲಿ ಆರ್‌ಆರ್ ತಂಡವು ಒಟ್ಟು 228 ರನ್ ಗಳಿಸಿತ್ತು. ಆದರೆ ಈ ಮೊತ್ತವನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡವು 18.3 ಓವರ್‌ಗಳಲ್ಲಿ ಬೆನ್ನಟ್ಟಿತ್ತು. ಹೀಗಾಗಿ ಅಭಿಮಾನಿಗಳು ಮತ್ತೊಂದು ಅತ್ಯಧಿಕ ಸ್ಕೋರಿಂಗ್ ಪಂದ್ಯವನ್ನು ನಿರೀಕ್ಷಿಸಬಹುದು.

ಶಿವಂ ಮಾವಿ ಬದಲಿಗೆ ಸನ್‌ರೈಸರ್ಸ್‌ ಸೇರಿದ 19 ವರ್ಷದ ಯುವ ವೇಗಿ ಅಂಬ್ರೀಶ್

ಉಭಯ ಆಡುವ ಬಳಗ

ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ XI): ಕೆಎಲ್ ರಾಹುಲ್(ವಿಕೆಟ್ ಕೀಪರ್), ಪಾತುಮ್ ನಿಸ್ಸಂಕಾ, ನಿತೀಶ್ ರಾಣಾ, ಸಮೀರ್ ರಿಜ್ವಿ, ಟ್ರಿಸ್ಟಾನ್ ಸ್ಟಬ್ಸ್, ಅಕ್ಷರ್ ಪಟೇಲ್(ನಾಯಕ), ಅಶುತೋಷ್ ಶರ್ಮಾ, ಕೈಲ್ ಜೇಮಿಸನ್, ಮಿಚೆಲ್ ಸ್ಟಾರ್ಕ್, ಕುಲ್ದೀಪ್ ಯಾದವ್, ಟಿ ನಟರಾಜನ್.

ಡೆಲ್ಲಿ ಕ್ಯಾಪಿಟಲ್ಸ್ ಇಂಪ್ಯಾಕ್ಟ್ ಪ್ಲೇಯರ್ಸ್‌: ಡೇವಿಡ್ ಮಿಲ್ಲರ್, ವಿಪ್ರಜ್ ನಿಗಮ್, ಕರುಣ್ ನಾಯರ್, ಅಭಿಷೇಕ್ ಪೊರೆಲ್, ಔಕಿಬ್ ನಬಿ ದಾರ್.

ರಾಜಸ್ಥಾನ್ ರಾಯಲ್ಸ್ (ಪ್ಲೇಯಿಂಗ್ XI): ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್(ವಿ.ಕೀ.), ರಿಯಾನ್ ಪರಾಗ್(ನಾಯಕ), ಡೊನೊವನ್ ಫೆರೇರಾ, ರವೀಂದ್ರ ಜಡೇಜಾ, ಶುಭಂ ದುಬೆ, ಜೋಫ್ರಾ ಆರ್ಚರ್, ರವಿ ಬಿಷ್ಣೋಯ್, ನಾಂದ್ರೆ ಬರ್ಗರ್, ಬ್ರಿಜೇಶ್ ಶರ್ಮಾ.

ರಾಜಸ್ಥಾನ್ ರಾಯಲ್ಸ್ ಇಂಪ್ಯಾಕ್ಟ್ ಪ್ಲೇಯರ್ಸ್‌: ಆಡಮ್ ಮಿಲ್ನೆ, ದಸುನ್ ಶನಕ, ರವಿ ಸಿಂಗ್, ಯಶ್ ರಾಜ್ ಪುಂಜಾ, ತುಷಾರ್ ದೇಶಪಾಂಡೆ.