ಶಿವಂ ಮಾವಿ ಬದಲಿಗೆ ಸನ್‌ರೈಸರ್ಸ್ ಸೇರಿದ 19 ವರ್ಷದ ಯುವ ವೇಗಿ ಅಂಬ್ರೀಶ್
IPL 2026: ತಮಿಳುನಾಡಿನ ಪ್ರತಿಭಾನ್ವಿತ ಯುವ ಆಲ್‌ರೌಂಡರ್ ಆಗಿರುವ ಅಂಬ್ರೀಶ್, ಆಯುಷ್ ಮ್ಹಾತ್ರೆ ನಾಯಕತ್ವದ 2026 ರ ಐಸಿಸಿ ಪುರುಷರ 19 ವರ್ಷದೊಳಗಿನವರ ವಿಶ್ವಕಪ್ ವಿಜೇತ ಭಾರತ ತಂಡದ ಭಾಗವಾಗಿದ್ದರು. ಅವರು 11 ವಿಕೆಟ್‌ಗಳೊಂದಿಗೆ ಟೂರ್ನಮೆಂಟ್‌ನಲ್ಲಿ ಭಾರತದ 19 ವರ್ಷದೊಳಗಿನವರ ತಂಡದಲ್ಲಿ ಜಂಟಿಯಾಗಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು.
RS Ambrish -
ಹೈದರಾಬಾದ್, ಮೇ 1: ಇಂಡಿಯನ್ ಪ್ರೀಮಿಯರ್ ಲೀಗ್ (IPL 2026)ನಿಂದ ಶಿವಂ ಮಾವಿ(Shivam Mavi) ಹೊರಬಿದ್ದಿದ್ದು ಅವರ ಬದಲಿಗೆ ಆರ್ ಎಸ್ ಅಂಬ್ರೀಶ್(RS Ambrish) ಅವರನ್ನು ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ಆಯ್ಕೆ ಮಾಡಿದೆ. ಬಲಗೈ ಮಧ್ಯಮ ವೇಗಿ ಮಾವಿ, ತೊಡೆಸಂದು ಗಾಯದಿಂದಾಗಿ ಪ್ರಸಕ್ತ ಋತುವಿನಿಂದ ಹೊರಗುಳಿದಿದ್ದಾರೆ.
ತಮಿಳುನಾಡಿನ ಪ್ರತಿಭಾನ್ವಿತ ಯುವ ಆಲ್‌ರೌಂಡರ್ ಆಗಿರುವ ಅಂಬ್ರೀಶ್, ಆಯುಷ್ ಮ್ಹಾತ್ರೆ ನಾಯಕತ್ವದ 2026 ರ ಐಸಿಸಿ ಪುರುಷರ 19 ವರ್ಷದೊಳಗಿನವರ ವಿಶ್ವಕಪ್ ವಿಜೇತ ಭಾರತ ತಂಡದ ಭಾಗವಾಗಿದ್ದರು. ಅವರು 11 ವಿಕೆಟ್‌ಗಳೊಂದಿಗೆ ಟೂರ್ನಮೆಂಟ್‌ನಲ್ಲಿ ಭಾರತದ 19 ವರ್ಷದೊಳಗಿನವರ ತಂಡದಲ್ಲಿ ಜಂಟಿಯಾಗಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು. ಬಲಗೈ ಮಧ್ಯಮ ವೇಗಿ ಮತ್ತು ಎಡಗೈ ಬ್ಯಾಟ್ಸ್‌ಮನ್ ಆಗಿರುವ ಅಂಬರೀಶ್, 30 ಲಕ್ಷ ರೂಪಾಯಿಗಳಿಗೆ ಹೈದರಾಬಾದ್ ತಂಡವನ್ನು ಸೇರಲಿದ್ದಾರೆ.
ಬುಧವಾರ (ಏಪ್ರಿಲ್ 29) ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 6 ವಿಕೆಟ್ ಅಂತರದ ಗೆಲುವು ಸಾಧಿಸಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಒಂಬತ್ತು ಪಂದ್ಯಗಳಲ್ಲಿ ಆರನೇ ಗೆಲುವು ಸಾಧಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ 3 ನೇ ಸ್ಥಾನದಲ್ಲಿದೆ.
🚨 𝐎𝐅𝐅𝐈𝐂𝐈𝐀𝐋 𝐀𝐍𝐍𝐎𝐔𝐍𝐂𝐄𝐌𝐄𝐍𝐓
— SunRisers Hyderabad (@SunRisers) May 1, 2026
RS Ambrish, the ICC Under-19 Cricket World Cup 2026 winner, joins our squad as Shivam Mavi’s replacement.
Go well, Ambrish 🧡 pic.twitter.com/nherHX6l3N
ವಾಂಖೆಡೆ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆತಿಥೇಯ ತಂಡದ ನಾಯಕ ಹಾರ್ದಿಕ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅವರ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಆಡಿದ ರಿಕೆಲ್ಟನ್ (ಔಟಾಗದೇ 123) ಅಜೇಯ ಶತಕ ದಾಖಲಿಸಿದರು. ಅವರ ಅಮೋಘ ಆಟದ ಬಲದಿಂದ ಮುಂಬೈ 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 243 ರನ್ ಗಳಿಸಿತ್ತು.
IPL 2026: ಆರು ಸೋಲು ಕಂಡ ಮುಂಬೈ ಇಂಡಿಯನ್ಸ್ ತಂಡದ ಪ್ಲೇ-ಆಫ್ ಲೆಕ್ಕಾಚಾರ ಹೇಗಿದೆ?
ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ಸನ್‌ರೈಸರ್ಸ್‌ಗೆ ಆರಂಭಿಕರಾದ ಅಭಿಷೇಕ್ ಶರ್ಮಾ (45) ಹಾಗೂ ಟ್ರಾವಿಸ್ ಹೆಡ್ (76) ಬಿರುಸಿನ ಬ್ಯಾಟಿಂಗ್ ಮೂಲಕ ಮೊದಲ ವಿಕೆಟ್‌ಗೆ ಕೇವಲ 8.4 ಓವರ್‌ಗಳಲ್ಲಿ 129 ರನ್ ಸೇರಿಸಿದರು. ಅವರಿಬ್ಬರ ನಿರ್ಗಮನದ ಬಳಿಕ, ಹೆನ್ರಿಚ್ ಕ್ಲಾಸೆನ್ (ಔಟಾಗದೇ 65) ಕೂಡ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿ ತಂಡವನ್ನು ಗೆಲುವಿನ ದಡ ಸೇರಿಸಿರು. ಅಂತಿಮವಾಗಿ ತಂಡ 18.4 ಓವರ್‌ಗಳಲ್ಲಿ 249 ರನ್ ಬಾರಿಸಿ 6 ವಿಕೆಟ್ ಅಂತರದ ಗೆಲುವು ಸಾಧಿಸಿತ್ತು.
ಸನ್‌ರೈಸರ್ಸ್ ಪರಿಷ್ಕೃತ ತಂಡ
ಅಭಿಷೇಕ್ ಶರ್ಮಾ, ಅನಿಕೇತ್ ವರ್ಮಾ, ಜೆರಾಲ್ಡ್ ಕೊಯೆಟ್ಜಿ, ಇಶಾನ್ ಮಾಲಿಂಗ, ಹರ್ಷ್ ದುಬೆ, ಹರ್ಷಲ್ ಪಟೇಲ್, ಹೆನ್ರಿಚ್ ಕ್ಲಾಸೆನ್, ಇಶಾನ್ ಕಿಶನ್, ಜಯದೇವ್ ಉನದ್ಕತ್, ಕಾಮಿಂದು ಮೆಂಡಿಸ್, ನಿತೀಶ್ ಕುಮಾರ್ ರೆಡ್ಡಿ, ಪ್ಯಾಟ್ ಕಮ್ಮಿನ್ಸ್, ಆರ್ ಸ್ಮರನ್, ಟ್ರಾವಿಸ್ ಹೆಡ್, ಜೀಶನ್ ಅನ್ಸಾರಿ, ಶಿವಂಗ್ ಕುಮಾರ್, ಸಾಕಿಬ್ ಹುಸೇನ್, ಸಲಿಲ್ ಅರೋರಾ, ಓಂಕಾರ್ ತರ್ಮಲೆ, ಅಮಿತ್ ಕುಮಾರ್, ಲಿಯಾಮ್ ಲಿವಿಂಗ್‌ಸ್ಟೋನ್, ಆರ್ ಎಸ್ ಅಂಬ್ರಿಶ್.