Saina-Kashyap: ಮತ್ತೆ ಒಂದಾಗಲು ನಿರ್ಧರಿಸಿದ ಸೈನಾ-ಕಶ್ಯಪ್ ಜೋಡಿ
ಸೈನಾ ನೆಹ್ವಾಲ್ ಅವರು ಕರ್ಣಂ ಮಲ್ಲೇಶ್ವರಿ ನಂತರ ಒಲಿಂಪಿಕ್ ಪದಕ ಗೆದ್ದ ಎರಡನೇ ಭಾರತೀಯ ಮಹಿಳೆ ಎನಿಸಿದ್ದರು. 2015ರಲ್ಲಿ, ಸೈನಾ ಮಹಿಳಾ ಸಿಂಗಲ್ಸ್ ನಲ್ಲಿ ವಿಶ್ವದ ನಂ.1 ಶ್ರೇಯಾಂಕ ಗಳಿಸಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.


ನವದೆಹಲಿ: ಇತ್ತೀಚೆಗಷ್ಟೇ ತಮ್ಮ ವೈವಾಹಿಕ ಜೀವನಕ್ಕೆ ಅಂತ್ಯವಾಡಿದ್ದ ಭಾರತದ ತಾರಾ ಶಟ್ಲರ್‌ಗಳಾದ ಸೈನಾ ನೆಹ್ವಾಲ್(Saina Nehwal) ಹಾಗೂ ಪಾರುಪಳ್ಳಿ ಕಶ್ಯಪ್(Parupalli Kashyap) ಮತ್ತೆ ಒಂದಾಗಲು ನಿರ್ಧರಿಸಿದ್ದಾರೆ. ವೈಯಕ್ತಿಕ ಕಾರಣಗಳಿಂದಾಗಿ ಕಶ್ಯಪ್‌ರಿಂದ(Saina-Kashyap) ದೂರವಾಗುತ್ತಿರುವುದಾಗಿ ಸೈನಾ ಹೇಳಿಕೊಂಡಿದ್ದ ಸೈನಾ ಇದೀಗ ಮತ್ತೆ ಒಂದಾಗುವ ಮೂಲಕ ಏಳು ವರ್ಷಗಳ ದಾಂಪತ್ಯ ಜೀವನಕ್ಕೆ ಮರುಜೀವ ನೀಡಲು ಬಯಸಿದಾರೆ. ಕಶ್ಯಪ್ ಮತ್ತು ಸೈನಾ ಜತೆಯಾಗಿರುವ ಚಿತ್ರವೊಂದನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಜಂಟಿಯಾಗಿ ಹಂಚಿಕೊಂಡಿದ್ದಾರೆ.
2012 ಲಂಡನ್ ಒಲಿಂಪಿಕ್ಸ್ ಪದಕ ವಿಜೇತೆ ಸೈನಾ, ಮಾಜಿ ವಿಶ್ವ ನಂ.6 ಶಟ್ಲರ್ ಕಶ್ಯಪ್‌ರನ್ನು 2018ರಲ್ಲಿ ವಿವಾಹವಾಗಿದ್ದರು. ಹೈದರಾಬಾದ್ನ ಪಿ. ಗೋಪಿಚಂದ್ ಅಕಾಡೆಮಿಯಲ್ಲಿ ಜತೆಯಾಗಿ ತರಬೇತಿ ಮತ್ತು ಬ್ಯಾಡ್ಮಿಂಟನ್ ಟೂರ್ನಿಗಳಲ್ಲಿ ಆಡುವ ವೇಳೆ ಇಬರಿಬ್ಬರ ಮಧ್ಯೆ ಪ್ರೀತಿ ಶರುವಾಗಿತ್ತು. 2014ರ ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ಕಶ್ಯಪ್, ಕಳೆದ ವರ್ಷ ನಿವೃತ್ತಿ ಹೊಂದಿದ್ದರು. ಪ್ರಸಕ್ತ ಕೋಚಿಂಗ್ನತ್ತ ಗಮನಹರಿಸಿದ್ದಾರೆ. 2012ರಲ್ಲಿ ಅರ್ಜುನ ಪ್ರಶಸ್ತಿಯೂ ಅವರಿಗೆ ಒಲಿದಿತ್ತು.
ಸೈನಾ ನೆಹ್ವಾಲ್ ಅವರು ಕರ್ಣಂ ಮಲ್ಲೇಶ್ವರಿ ನಂತರ ಒಲಿಂಪಿಕ್ ಪದಕ ಗೆದ್ದ ಎರಡನೇ ಭಾರತೀಯ ಮಹಿಳೆ ಎನಿಸಿದ್ದರು. 2015ರಲ್ಲಿ, ಸೈನಾ ಮಹಿಳಾ ಸಿಂಗಲ್ಸ್ ನಲ್ಲಿ ವಿಶ್ವದ ನಂ.1 ಶ್ರೇಯಾಂಕ ಗಳಿಸಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಪಾರುಪಳ್ಳಿ ಕಶ್ಯಪ್ ಅವರಿಂದ ವಿಚ್ಛೇದನ ಪಡೆಯಲು ನಿರ್ಧರಿಸಿರುವ ವಿಷಯವನ್ನು ಸೈನಾ ನೆಹ್ವಾಲ್ ಕಳೆದ ಜುಲೈ 13ರಂದು ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ಪ್ರಕಟಿಸಿದ್ದರು. ಆದರೆ ಇದೀಗ "ಕೆಲವೊಮ್ಮೆಅಂತರವು ಕೆಲವೊಬ್ಬರ ಅನುಪಸ್ಥಿತಿಯ ಮೌಲ್ಯವನ್ನು ನಮಗೆ ತಿಳಿಸುತ್ತದೆ. ನಾವು ಮತ್ತೆ ಒಂದಾಗಲು ಪ್ರಯುತ್ನಿಸುತ್ತಿದ್ದೇವೆ" ಎಂದು ಸಾಮಾಜಿಕ ಜಾಲತಾಣಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ Saina Nehwal: ಬ್ಯಾಡ್ಮಿಂಟನ್ ತಾರೆ ಜೀವನದಲ್ಲಿ ಬಿರುಕು; ವಿಚ್ಛೇದನ ಘೋಷಿಸಿದ ಸೈನಾ ನೆಹ್ವಾಲ್-ಪರುಪಳ್ಳಿ ಕಶ್ಯಪ್