ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸೋಲಿನ ಬಳಿಕ ಪಂತ್‌ ಮೂಗು ಸವರಿದ ಗೋಯೆಂಕಾ; ವಿಡಿಯೊ ವೈರಲ್‌

IPL 2026: ಲಖನೌ ತಂಡವು 7 ಪಂದ್ಯಗಳಲ್ಲಿ 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಅವರ ರನ್‌ರೇಟ್‌ ದರ ಪ್ರಸ್ತುತ -1.277 ಆಗಿದ್ದು, ಮುಂಬರುವ ದಿನಗಳಲ್ಲಿ ಅವರು ದೊಡ್ಡ ಗೆಲುವು ಸಾಧಿಸದಿದ್ದರೆ ಅದನ್ನು ಸರಿಪಡಿಸುವುದು ಕಷ್ಟಕರವಾಗಿರುತ್ತದೆ. ಪ್ರಸ್ತುತ ಕೊನೆಯ ಸ್ಥಾನದಲ್ಲಿರುವ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಅವರಿಗಿಂತ ಉತ್ತಮ ರನ್‌ರೇಟ್ ಹೊಂದಿದೆ.

Sanjiv Goenka Checks On Rishabh Pant's Nose

ಲಖನೌ, ಎ. 23: ಬುಧವಾರ ನಡೆದಿದ್ದ ರಾಜಸ್ಥಾನ ರಾಯಲ್ಸ್ (ಆರ್‌ಆರ್) ವಿರುದ್ಧದ ಐಪಿಎಲ್‌(IPL 2026) ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (RR vs LSG) ತಂಡವು 40 ರನ್‌ಗಳ ಸೋಲು ಕಂಡಿತ್ತು. ಪಂದ್ಯದ ಬಳಿಕ ಮೈದಾನದಲ್ಲಿ ತಂಡದ ಮಾಲೀಕ ಸಂಜೀವ್ ಗೋಯೆಂಕಾ(Sanjiv Goenka) ಅವರು ನಾಯಕ ರಿಷಭ್ ಪಂತ್(Rishabh Pant) ಮೂಗು ಸವರಿದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಏಕಾನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ನಂತರ, ಗೋಯೆಂಕಾ ಮೈದಾನದಲ್ಲಿ ಪಂತ್ ಬಳಿಗೆ ಬಂದು ಅವರನ್ನು ಪರಿಶೀಲಿಸುತ್ತಿರುವುದನ್ನು ದೃಶ್ಯದಲ್ಲಿ ಕಾಣಬಹುದು. ಪಂದ್ಯದ ವೇಳೆ ವಿಕೆಟ್ ಕೀಪಿಂಗ್ ಮಾಡುತ್ತಿದ್ದಾಗ, ಅನಿರೀಕ್ಷಿತವಾಗಿ ಪುಟಿದ ಚೆಂಡು ಪಂತ್ ಮೂಗಿಗೆ ಬಡಿದಿತ್ತು. ಈ ನೋವಿನ ನಡುವೆ ಪಂತ್ ಪಂದ್ಯದಲ್ಲಿ ಮುಂದುವರೆದಿದ್ದರು.

ಸಾಮಾನ್ಯವಾಗಿ ಪಂದ್ಯ ಸೋತ ಬಳಿಕ ತಮ್ಮ ತಂಡದ ಆಟಗಾರರ ಜತೆ ಮೈದಾನದಲ್ಲಿ ಗಂಭೀರವಾಗಿ ಕಾಣಿಸಿಕೊಳ್ಳುತ್ತಿದ್ದ ಗೋಯೆಂಕಾ, ಈ ಬಾರಿ ಗಾಯಗೊಂಡ ಪಂತ್ ಜತೆ ಅತ್ಯಂತ ಪ್ರೀತಿಯಿಂದ ಮಾತನಾಡಿಸಿದರು. ಮಾತ್ರವಲ್ಲದೆ ಪಂತ್ ಮೂಗಿನ ಗಾಯದ ಬಗ್ಗೆ ವಿಚಾರಿಸಿ, ಅವರನ್ನು ಅಪ್ಪಿಕೊಂಡು ಬೆನ್ನುತಟ್ಟುವ ಮೂಲಕ ಧೈರ್ಯ ತುಂಬಿದರು. ಗೋಯೆಂಕಾ ಅವರ ಸೌಮ್ಯ ಸ್ವಭಾವ ಮತ್ತು ಆಟಗಾರರ ಮೇಲಿನ ಕಾಳಜಿ ಕಂಡು ಈ ಬಾರಿ ನೆಟ್ಟಿಗರು ಅವರ ವರ್ತನೆಗೆ ಮೆಚ್ಚುಗೆ ಸೂಚಿಸಿದ್ದಾರೆ.



9ನೇ ಸ್ಥಾನಕ್ಕೆ ಕುಸಿದ ಲಖನೌ

ಲಖನೌ ತಂಡವು 7 ಪಂದ್ಯಗಳಲ್ಲಿ 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಅವರ ರನ್‌ರೇಟ್‌ ದರ ಪ್ರಸ್ತುತ -1.277 ಆಗಿದ್ದು, ಮುಂಬರುವ ದಿನಗಳಲ್ಲಿ ಅವರು ದೊಡ್ಡ ಗೆಲುವು ಸಾಧಿಸದಿದ್ದರೆ ಅದನ್ನು ಸರಿಪಡಿಸುವುದು ಕಷ್ಟಕರವಾಗಿರುತ್ತದೆ. ಪ್ರಸ್ತುತ ಕೊನೆಯ ಸ್ಥಾನದಲ್ಲಿರುವ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಅವರಿಗಿಂತ ಉತ್ತಮ ರನ್‌ರೇಟ್ ಹೊಂದಿದೆ.

RR vs LSG: ಕಳಪೆ ಬ್ಯಾಟಿಂಗ್‌ ಬಗ್ಗೆ ವಿಷಾದ ವ್ಯಕ್ತಪಡಿಸಿದ ರಿಷಭ್‌ ಪಂತ್‌

ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ರಾಜಸ್ಥಾನ್‌ ರಾಯಲ್ಸ್‌ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 159 ರನ್‌ ಪೇರಿಸಿತು. ಸಾಧಾರಣ ಮೊತ್ತ ಬೆನ್ನಟ್ಟಿದ ಲಖನೌ ತಂಡವು ಬ್ಯಾಟಿಂಗ್‌ನಲ್ಲಿ ಮತ್ತೆ ವೈಫಲ್ಯ ಅನುಭವಿಸಿತು. ನಿರಂತರವಾಗಿ ವಿಕೆಟ್ ಕಳೆದುಕೊಂಡ ರಿಷಭ್ ಪಂತ್‌ ಪಡೆ 18 ಓವರ್‌ಗಳಲ್ಲಿ 119 ರನ್‌ಗಳಿಗೆ ಸರ್ವಪತನವಾಯಿತು.

ಲಖನೌ ಪರ ಆಯುಷ್‌ ಬದೋನಿ, ರಿಷಭ್‌ ಪಂತ್‌ ಮತತು ಐಡೆನ್‌ ಮಾರ್ಕ್ರಮ್‌ ಗೋಲ್ಡನ್‌ ಡಕ್‌ ಸಂಕಟಕ್ಕೆ ಸಿಲುಕಿದರು. ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಮಿಚೆಲ್‌ ಮಾರ್ಷ್‌(55) ಅರ್ಧಶತಕ ಬಾರಿಸಿದ ಪರಿಣಾಮ ತಂಡ ನೂರರ ಗಡಿ ದಾಟಿತು.