ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

RR vs LSG: ಕಳಪೆ ಬ್ಯಾಟಿಂಗ್‌ ಬಗ್ಗೆ ವಿಷಾದ ವ್ಯಕ್ತಪಡಿಸಿದ ರಿಷಭ್‌ ಪಂತ್‌

IPL 2026: ಲಖನೌ ಪರ ಆಯುಷ್‌ ಬದೋನಿ, ರಿಷಭ್‌ ಪಂತ್‌ ಮತತು ಐಡೆನ್‌ ಮಾರ್ಕ್ರಮ್‌ ಗೋಲ್ಡನ್‌ ಡಕ್‌ ಸಂಕಟಕ್ಕೆ ಸಿಲುಕಿದರು. ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಮಿಚೆಲ್‌ ಮಾರ್ಷ್‌(55) ಅರ್ಧಶತಕ ಬಾರಿಸಿದ ಪರಿಣಾಮ ತಂಡ ನೂರರ ಗಡಿ ದಾಟಿತು.

ಕಳಪೆ ಬ್ಯಾಟಿಂಗ್‌ ಬಗ್ಗೆ ವಿಷಾದ ವ್ಯಕ್ತಪಡಿಸಿದ ಪಂತ್‌

Rishabh Pant -

Abhilash BC
Abhilash BC Apr 23, 2026 9:45 AM

ಲಖನೌ, ಎ.23: ಬುಧವಾರ ರಾತ್ರಿ ನಡೆದ ಐಪಿಎಲ್ 2026(IPL 2026)ರ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್(RR vs LSG) ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ಶಿಸ್ತುಬದ್ಧ ಬೌಲಿಂಗ್ ಪ್ರದರ್ಶನ ನೀಡಿದರೂ ಬ್ಯಾಟಿಂಗ್‌ ವೈಫಲ್ಯದ ಕಾರಣ ಪಂದ್ಯದಲ್ಲಿ ಸೋಲು ಕಂಡಿತ್ತು. ಪಂದ್ಯದ ಬಳಿಕ ನಾಯಕ ರಿಷಭ್‌ ಪಂತ್‌(Rishabh Pant) ಬ್ಯಾಟಿಂಗ್‌ ವೈಫಲ್ಯವನ್ನು ಒಪ್ಪಿಕೊಂಡರು.

ತಂಡ ಎಲ್ಲಿ ತಪ್ಪು ಮಾಡಿತು ಎಂದು ಸೈಮನ್ ಡೌಲ್ ಕೇಳಿದಾಗ, ನಾಯಕ ರಿಷಭ್ ಪಂತ್, "ಇದನ್ನು ವಿವರಿಸುವುದು ಕಷ್ಟ ಎಂದು ನಾನು ಭಾವಿಸುತ್ತೇನೆ. ಖಂಡಿತವಾಗಿಯೂ ನಮ್ಮನ್ನು ನಿರಾಸೆಗೊಳಿಸುವುದು ಬ್ಯಾಟಿಂಗ್, ಆದರೆ ಅದೇ ಸಮಯದಲ್ಲಿ, ನಾವು ಒಂದು ತಂಡವಾಗಿ, ಒಂದು ಗುಂಪಾಗಿ ನಿರಾಶೆಗೊಂಡಿದ್ದೇವೆ" ಎಂದು ಹೇಳಿದರು.

“ಖಂಡಿತ, ನಾವು ಬ್ಯಾಟಿಂಗ್ ಮಾಡುವಾಗ ಸ್ವಲ್ಪ ಸಮಯ ತೆಗೆದುಕೊಳ್ಳಬಹುದಿತ್ತು. ಏಕೆಂದರೆ ಬೌಲರ್‌ಗಳು ಅದ್ಭುತ ಕೆಲಸ ಮಾಡಿದ್ದಾರೆಂದು ನಾನು ಭಾವಿಸುತ್ತೇನೆ. ವಿಶೇಷವಾಗಿ ಕೊನೆಯ ಪಂದ್ಯದ ನಂತರ. ಆದರೆ, ಬ್ಯಾಟಿಂಗ್ ಗುಂಪಾಗಿ, ನಾವು ಇನ್ನ ಸುಧಾರಣೆ ಕಾಣಬೇಕು. ಹೊಸ ಚೆಂಡಿನ ವಿರುದ್ಧ ತಮ್ಮ ತಂಡವು ಹೆಚ್ಚಿನ ತಯಾರಿ ನಡೆಸಬೇಕಿದೆ" ಎಂದು ಹೇಳಿದರು.

"ಸೋಲು ಒಂದು ತಂಡವಾಗಿ ನಮಗೆ ನಿರಾಶಾದಾಯಕವಾಗಿದೆ ಎಂದು ನಮಗೆಲ್ಲರಿಗೂ ತಿಳಿದಿದೆ, ಆದರೆ ನಾವು ನಮ್ಮ ತಲೆಯನ್ನು ಮೇಲಕ್ಕೆತ್ತಿ ಉತ್ತರಗಳನ್ನು ಹುಡುಕಬೇಕು" ಎಂದರು. ನಿರಾಶಾದಾಯಕ ಫಲಿತಾಂಶದ ಹೊರತಾಗಿಯೂ, ಸಂವಾದದ ಕೊನೆಯಲ್ಲಿ ಪಂತ್ ಹಗುರವಾದ ಕ್ಷಣವನ್ನು ನಿರ್ವಹಿಸಿದರು. "ಮೃದುವಾಗಿರುವುದಕ್ಕೆ ಧನ್ಯವಾದಗಳು!" ಎಂದು ಡೌಲ್‌ಗೆ ವ್ಯಂಗ್ಯವಾಡಿದರು.

RR vs LSG: ರಾಜಸ್ಥಾನ ರಾಯಲ್ಸ್ ಪರ ಹೊಸ ಐಪಿಎಲ್ ದಾಖಲೆ ನಿರ್ಮಿಸಿದ ಜೋಫ್ರಾ ಆರ್ಚರ್

ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ರಾಜಸ್ಥಾನ್‌ ರಾಯಲ್ಸ್‌ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 159 ರನ್‌ ಪೇರಿಸಿತು. ಸಾಧಾರಣ ಮೊತ್ತ ಬೆನ್ನಟ್ಟಿದ ಲಖನೌ ತಂಡವು ಬ್ಯಾಟಿಂಗ್‌ನಲ್ಲಿ ಮತ್ತೆ ವೈಫಲ್ಯ ಅನುಭವಿಸಿತು. ನಿರಂತರವಾಗಿ ವಿಕೆಟ್ ಕಳೆದುಕೊಂಡ ರಿಷಭ್ ಪಂತ್‌ ಪಡೆ 18 ಓವರ್‌ಗಳಲ್ಲಿ 119 ರನ್‌ಗಳಿಗೆ ಸರ್ವಪತನವಾಯಿತು.

ಲಖನೌ ಪರ ಆಯುಷ್‌ ಬದೋನಿ, ರಿಷಭ್‌ ಪಂತ್‌ ಮತತು ಐಡೆನ್‌ ಮಾರ್ಕ್ರಮ್‌ ಗೋಲ್ಡನ್‌ ಡಕ್‌ ಸಂಕಟಕ್ಕೆ ಸಿಲುಕಿದರು. ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಮಿಚೆಲ್‌ ಮಾರ್ಷ್‌(55) ಅರ್ಧಶತಕ ಬಾರಿಸಿದ ಪರಿಣಾಮ ತಂಡ ನೂರರ ಗಡಿ ದಾಟಿತು.