ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sha’Carri Richardson: ಬಾಯ್​ಫ್ರೆಂಡ್​ಗೆ ಹಲ್ಲೆ, ವಿಶ್ವ ಚಾಂಪಿಯನ್ ಓಟಗಾರ್ತಿ ಬಂಧನ-ಬಿಡುಗಡೆ

ಶಾಕಾರಿ-ಕೋಲ್​ಮನ್​ ನಡುವಿನ ಗಲಾಟೆ ಸೆಕ್ಯೂರಿಟಿ ಕ್ಯಾಮರಾದಲ್ಲಿ ಸೆರೆಯಾದ ಹಿನ್ನೆಲೆಯಲ್ಲಿ ಪೋರ್ಟ್​ ಆಫ್​ ಸೀಟಲ್​ ಪೊಲೀಸರು ಕ್ರಮ ತೆಗೆದುಕೊಂಡರು. ಆದರೆ ಈ ಪ್ರಕರಣದ ವಿಚಾರಣೆಯಲ್ಲಿ ಭಾಗವಹಿಸಲು ಕೋಲ್​ಮನ್​ ನಿರಾಕರಿಸಿದ ಕಾರಣ ಶಾಕಾರಿ ಅವರನ್ನು ಬಿಡುಗಡೆ ಮಾಡಲಾಯಿತು.

ಬಾಯ್​ಫ್ರೆಂಡ್​ಗೆ ಹಲ್ಲೆ, ವಿಶ್ವ ಚಾಂಪಿಯನ್ ಓಟಗಾರ್ತಿ ಬಂಧನ-ಬಿಡುಗಡೆ

Abhilash BC Abhilash BC Aug 4, 2025 3:00 PM

ನ್ಯೂಯಾರ್ಕ್: ಅಮೆರಿಕದ ಓಟದ ತಾರೆ, 25 ವರ್ಷದ ವಿಶ್ವ ಚಾಂಪಿಯನ್​ ಶಾಕಾರಿ ರಿಚರ್ಡ್​ಸನ್(Sha’Carri Richardson)​ ತನ್ನ ಬಾಯ್​ಫ್ರೆಂಡ್​ ಮತ್ತು ಸಹ-ಅಥ್ಲೀಟ್​ ಕ್ರಿಶ್ಚಿಯನ್​ ಕೋಲ್​ಮನ್(Christian Coleman)​ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಜುಲೈ 27ರ ಭಾನುವಾರ ರಾತ್ರಿ ಸಿಟಲ್​-ಟಕೋಮಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾಗಿದ್ದರು. ಕೋಲ್​ಮನ್​ ಪ್ಯಾರಿಸ್ ಒಲಿಂಪಿಕ್ಸ್‌ ಕ್ರೀಡಾಕೂಟದ 100 ಮೀ. ಓಟದಲ್ಲಿ ಬೆಳ್ಳಿ ಗೆದ್ದಿದ್ದರು.

ಯುಎಸ್​ ಟ್ರ್ಯಾಂಕ್​ ಆಂಡ್​ ಫೀಲ್ಡ್​ ಚಾಂಪಿಯನ್​ಷಿಪ್​ನಲ್ಲಿ ಭಾಗವಹಿಸಲು ಓರೆಗಾನ್​ಗೆ ತೆರಳುತ್ತಿದ್ದಾಗ ಶಾಕಾರಿ ಅವರನ್ನು ಕೌಟುಂಬಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಸೋಮವಾರ ಅವರನ್ನು ಬಿಡುಗಡೆಗೊಳಿಸಲಾಗಿದೆ. ಬಿಡುಗಡೆ ಬಳಿಕ ಪ್ರತಿಕ್ರಿಯೆ ನೀಡಿರುವ ಕೋಲ್​ಮನ್ "ವೈಯಕ್ತಿಕವಾಗಿ ನನಗೆ, ಸುತ್ತಲೂ ಒಂದು ಬೇಸರದ ಪರಿಸ್ಥಿತಿ ಇತ್ತು ಎಂದು ಅನಿಸುತ್ತದೆ. ಅವಳನ್ನು ಬಂಧಿಸಬಾರದಿತ್ತು ಎಂದು ನನಗೆ ಅನಿಸುತ್ತಿಲ್ಲ" ಎಂದು ಕೋಲ್​ಮನ್​ ಸುದ್ದಿಗಾರರಿಗೆ ತಿಳಿಸಿದರು.

"ಅವರು ಒಬ್ಬ ಮನುಷ್ಯ ಮತ್ತು ಒಬ್ಬ ಮಹಾನ್ ವ್ಯಕ್ತಿ. ನನಗೆ, ಅವರು ವಿಶ್ವದ ಅತ್ಯುತ್ತಮ ಮಹಿಳಾ ಕ್ರೀಡಾಪಟು. ನಾನು ಅದನ್ನು ಪ್ರತಿದಿನ ನೋಡುತ್ತೇನೆ. ಖಂಡಿತ, ಅವಳು ತನಗಾಗಿ ಕೆಲಸ ಮಾಡಬೇಕಾದ ವಿಷಯಗಳನ್ನು ಹೊಂದಿದ್ದಾಳೆ. ನನಗೂ ಹಾಗೆಯೇ, ನಿಮಗೂ ಸಹ, ಎಲ್ಲರಿಗೂ ಸಹ. ನಾನು ಕರುಣೆ ಮತ್ತು ಪ್ರೀತಿಯನ್ನು ವಿಸ್ತರಿಸುವ ವ್ಯವಹಾರದಲ್ಲಿರುವ ವ್ಯಕ್ತಿ" ಎಂದರು.

ಶಾಕಾರಿ-ಕೋಲ್​ಮನ್​ ನಡುವಿನ ಗಲಾಟೆ ಸೆಕ್ಯೂರಿಟಿ ಕ್ಯಾಮರಾದಲ್ಲಿ ಸೆರೆಯಾದ ಹಿನ್ನೆಲೆಯಲ್ಲಿ ಪೋರ್ಟ್​ ಆಫ್​ ಸೀಟಲ್​ ಪೊಲೀಸರು ಕ್ರಮ ತೆಗೆದುಕೊಂಡರು. ಆದರೆ ಈ ಪ್ರಕರಣದ ವಿಚಾರಣೆಯಲ್ಲಿ ಭಾಗವಹಿಸಲು ಕೋಲ್​ಮನ್​ ನಿರಾಕರಿಸಿದ ಕಾರಣ ಶಾಕಾರಿ ಅವರನ್ನು ಬಿಡುಗಡೆ ಮಾಡಲಾಯಿತು.

ಇದನ್ನೂ ಓದಿ IND vs ENG 5th Test: ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ಗೆ ಮಹತ್ವದ ಟ್ವಿಸ್ಟ್‌!