ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮೊದಲ ಎಸೆತದಲ್ಲೇ ಸಿಕ್ಸರ್‌ ಬಾರಿಸಿ ವಿಶ್ವ ದಾಖಲೆ ನಿರ್ಮಿಸಿದ ಶಫಾಲಿ ವರ್ಮಾ

Shafali Verma Creates History: ಚೇಸಿಂಗ್‌ ವೇಳೆ ಪಾಕ್‌ಗೆ ಮುನೀಬಾ ಅಲಿ ಮತ್ತು ಗುಲ್ ಫಿರೋಜಾ ಅವರು ಮೊದಲ ವಿಕೆಟ್‌ಗೆ 38 ರನ್ ಗಳಿಸಿ ಉತ್ತಮ ಆರಂಭ ಒದಗಿಸಿದರು. ಆದರೆ ಆ ಬಳಿಕ ದೀಪ್ತಿ (4–0–10–5) ಅವರ ಸ್ಪಿನ್‌ ಮೋಡಿಯ ಮುಂದೆ ಪಾಕ್ ತಂಡವು ದಿಢೀರ್‌ ಕುಸಿಯಿತು.

Shafali Verma

ಬರ್ಮಿಂಗ್‌ಹ್ಯಾಮ್‌, ಜೂ.15: ಪಾಕಿಸ್ತಾನ ವಿರುದ್ಧ ಭಾನುವಾರ ನಡೆದಿದ್ದ ಮಹಿಳಾ ಟಿ20 ವಿಶ್ವಕಪ್‌ ಲೀಗ್‌ ಪಂದ್ಯದಲ್ಲಿ ಭಾರತ ತಂಡದ ಯುವ ಆಟಗಾರ್ತಿ ಶಫಾಲಿ ವರ್ಮಾ ಅವರು ಇನಿಂಗ್ಸ್‌ನ ಮೊದಲ ಎಸೆತವನ್ನೇ ಸಿಕ್ಸರ್‌ ಬಾರಿಸುವ ಮೂಲಕ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ಸಾದಿಯಾ ಇಕ್ಬಾಲ್ ಎಸೆದ ಮೊದಲ ಓವರ್‌ನ ಮೊದಲ ಎಸೆತವನ್ನೇ ಸಿಕ್ಸರ್‌ ಬಾರಿಸಿದ ಶಫಾಲಿ ವರ್ಮಾ, ಮಹಿಳಾ ಟಿ20 ವಿಶ್ವಕಪ್ ಪಂದ್ಯದ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಪುರುಷರ ಟಿ20 ವಿಶ್ವಕಪ್‌ನಲ್ಲಿ 2016 ರಲ್ಲಿ ನಾಗ್ಪುರದಲ್ಲಿ ನಡೆದ ನ್ಯೂಜಿಲೆಂಡ್ ಮತ್ತು ಭಾರತ ನಡುವಿನ ಪಂದ್ಯದಲ್ಲಿ ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್ ಮೊದಲ ಎಸೆತದಲ್ಲೇ ರವಿಚಂದ್ರನ್ ಅಶ್ವಿನ್‌ಗೆ ಸಿಕ್ಸರ್‌ ಬಾರಿಸಿದ್ದರು.



ಪಂದ್ಯದ ಬಗ್ಗೆ ಹೇಳುವುದಾದರೆ, ಭಾರತ ತಂಡ ಕಳಪೆ ಆರಂಭದ ಹೊರತಾಗಿಯೂ ಒಟ್ಟು 170 ರನ್ ಗಳಿಸಿತು. ಸ್ಮೃತಿ ಮಂಧಾನ 44 ಎಸೆತಗಳಲ್ಲಿ 68 ರನ್ ಗಳಿಸುವ ಮೂಲಕ ಉತ್ತಮ ಪ್ರದರ್ಶನ ತೋರಿದರು. ನಾಯಕಿ ಹರ್ಮನ್‌ಪ್ರೀತ್‌ ಕೌರ್ 34 ಎಸೆತಗಳಲ್ಲಿ 35 ರನ್‌ ಗಳಿಸಿದರು. ಮಂಧಾನ ಮತ್ತು ಸ್ಮೃತಿ ಮೂರನೇ ವಿಕೆಟ್‌ಗೆ 91 ರನ್ ಜತೆಯಾಟ ನಡೆಸಿದ್ದು ತಂಡಕ್ಕೆ ಮಹತ್ವದ ತಿರುವು ತಂದುಕೊಟ್ಟಿತು.

ಮಿಥಾಲಿ ರಾಜ್‌ ವಿಶ್ವಕಪ್‌ ದಾಖಲೆ ಹಿಂದಿಕ್ಕಿದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌

ಸ್ಲಾಗ್ ಓವರ್‌ಗಳಲ್ಲಿ ರಿಚಾ ಘೋಷ್ 17 ಎಸೆತಗಳಲ್ಲಿ 34 ರನ್ ಗಳಿಸುವ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಮೊದಲಾರ್ಧದಲ್ಲಿ ಕೇವಲ 65 ರನ್ ಗಳಿಸಿದ್ದ ಭಾರತ ಕೊನೆಯ 10 ಓವರ್‌ಗಳಲ್ಲಿ 105 ರನ್ ಗಳಿಸಿತು.

ಚೇಸಿಂಗ್‌ ವೇಳೆ ಪಾಕ್‌ಗೆ ಮುನೀಬಾ ಅಲಿ ಮತ್ತು ಗುಲ್ ಫಿರೋಜಾ ಅವರು ಮೊದಲ ವಿಕೆಟ್‌ಗೆ 38 ರನ್ ಗಳಿಸಿ ಉತ್ತಮ ಆರಂಭ ಒದಗಿಸಿದರು. ಆದರೆ ಆ ಬಳಿಕ ದೀಪ್ತಿ (4–0–10–5) ಅವರ ಸ್ಪಿನ್‌ ಮೋಡಿಯ ಮುಂದೆ ಪಾಕ್ ತಂಡವು ದಿಢೀರ್‌ ಕುಸಿಯಿತು. ಇನ್ನೊಂದು ಬದಿಯಿಂದ ಶ್ರೀಚರಣಿ (21ಕ್ಕೆ3) ಕೂಡ ಮಿಂಚಿದರು. ಅಂತಿಮವಾಗಿ ಪಾಕ್‌ 106 ರನ್‌ಗಳಿಗೆ ಸರ್ವಪತನ ಕಂಡಿತು.