ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಿಥಾಲಿ ರಾಜ್‌ ವಿಶ್ವಕಪ್‌ ದಾಖಲೆ ಹಿಂದಿಕ್ಕಿದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌

Harmanpreet Kaur: ಒಟ್ಟಾರೆಯಾಗಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಗಳ ಪಟ್ಟಿಯಲ್ಲಿ ಸೂಜಿ ಬೇಟ್ಸ್ ಅಗ್ರಸ್ಥಾನದಲ್ಲಿದ್ದಾರೆ. ಅವರು 42 ಪಂದ್ಯಗಳಲ್ಲಿ 1216 ರನ್ ಗಳಿಸಿದ್ದಾರೆ. ಅವರ ನಂತರ 1014 ರನ್‌ಗಳೊಂದಿಗೆ ಸ್ಟೆಫನಿ ಟೇಲರ್ ಎರಡನೇ ಸ್ಥಾನದಲ್ಲಿದ್ದಾರೆ. ಅಲಿಸಾ ಹೀಲಿ ಮೂರನೇ ಸ್ಥಾನದಲ್ಲಿದ್ದಾರೆ. ಹೀಲಿ 42 ಪಂದ್ಯಗಳಲ್ಲಿ 1008 ರನ್ ಗಳಿಸಿದ್ದಾರೆ.

ಮಿಥಾಲಿ ರಾಜ್‌ ದಾಖಲೆ ಮುರಿದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌

Harmanpreet Kaur -

Abhilash BC
Abhilash BC Jun 15, 2026 10:12 AM

ಬರ್ಮಿಂಗ್‌ಹ್ಯಾಮ್, ಜೂ.15: ಟೀಮ್‌ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್‌ ಕೌರ್‌(Harmanpreet Kaur) ಅವರು ಟಿ20 ವಿಶ್ವಕಪ್‌(T20 World Cup)ನಲ್ಲಿ ಭಾರತದ ಮಹಿಳಾ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎನಿಸಿಕೊಂಡರು. ಈ ವೇಳೆ ಅವರು ಮಿಥಾಲಿ ರಾಜ್ ದಾಖಲೆ ಹಿಂದಿಕ್ಕಿದರು.

ಪಂದ್ಯಕ್ಕೂ ಮುನ್ನ ಕೌರ್‌ ಅವರು ಮಿಥಾಲಿ ಜತೆ 726 ರನ್‌ಗಳೊಂದಿಗೆ ಜಂಟಿ ದಾಖಲೆ ಹೊಂದಿದ್ದರು. ಪಾಕ್‌ ಪಂದ್ಯದಲಿ ಮೊದಲ ರನ್‌ ಗಳಿಸುತ್ತಿದ್ದಂತೆ ಅವರು ದಾಖಲೆಯನ್ನು ತಮ್ಮ ಹೆಸರಿಗೆ ಬರೆದರು. 2019 ರಲ್ಲಿ ಟಿ20ಐ ಕ್ರಿಕೆಟ್‌ನಿಂದ ನಿವೃತ್ತರಾದ ಮಿಥಾಲಿ, 2009 ರಿಂದ 2018 ರವರೆಗಿನ 23 ಇನ್ನಿಂಗ್ಸ್‌ಗಳಲ್ಲಿ 726 ರನ್ ಗಳಿಸಿದರು. ಪಾಕಿಸ್ತಾನದ ವಿರುದ್ಧ 36 ರನ್ ಗಳಿಸಿದ ಹರ್ಮನ್‌ಪ್ರೀತ್ ಈಗ ಭಾರತಕ್ಕಾಗಿ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಅವರು 34 ಇನ್ನಿಂಗ್ಸ್‌ಗಳಲ್ಲಿ 762 ರನ್ ಗಳಿಸಿದ್ದಾರೆ. ಈ ವೇಳೆ 1 ಶತಕ ಮತ್ತು 4 ಅರ್ಧ ಶತಕಗಳು ಸೇರಿವೆ.

ಗೋಲುಗಳ ಸುರಿಮಳೆಗೈದು ಭರ್ಜರಿ ಗೆಲುವು ಸಾಧಿಸಿದ ಜರ್ಮನಿ

ಭಾನುವಾರ ನಡೆದಿದ್ದ ಐಸಿಸಿ ಮಹಿಳೆಯರ ಟಿ20 ವಿಶ್ವಕಪ್‌ನ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರು 64 ರನ್‌ಗಳ ಭರ್ಜರಿ ಗೆಲುವು ದಾಖಲಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿತ್ತು.

ಒಟ್ಟಾರೆಯಾಗಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಗಳ ಪಟ್ಟಿಯಲ್ಲಿ ಸೂಜಿ ಬೇಟ್ಸ್ ಅಗ್ರಸ್ಥಾನದಲ್ಲಿದ್ದಾರೆ. ಅವರು 42 ಪಂದ್ಯಗಳಲ್ಲಿ 1216 ರನ್ ಗಳಿಸಿದ್ದಾರೆ. ಅವರ ನಂತರ 1014 ರನ್‌ಗಳೊಂದಿಗೆ ಸ್ಟೆಫನಿ ಟೇಲರ್ ಎರಡನೇ ಸ್ಥಾನದಲ್ಲಿದ್ದಾರೆ. ಅಲಿಸಾ ಹೀಲಿ ಮೂರನೇ ಸ್ಥಾನದಲ್ಲಿದ್ದಾರೆ. ಹೀಲಿ 42 ಪಂದ್ಯಗಳಲ್ಲಿ 1008 ರನ್ ಗಳಿಸಿದ್ದಾರೆ.

ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಭಾರತೀಯ ಆಟಗಾರ್ತಿಯರು

ಹರ್ಮನ್‌ಪ್ರೀತ್ ಕೌರ್ - 762* ರನ್

ಮಿಥಾಲಿ ರಾಜ್ - 726 ರನ್

ಸ್ಮೃತಿ ಮಂಧಾನ - 592* ರನ್

ಜೆಮಿಮಾ ರಾಡ್ರಿಗಸ್ - 408* ರನ್

ಪುನಮ್ ರಾವುತ್ - 375 ರನ್

ಪಂದ್ಯದ ಬಗ್ಗೆ ಹೇಳುವುದಾದರೆ, ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು ಸ್ಮೃತಿ ಮಂಧಾನ ಅವರ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 170 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡವು 17 ಓವರ್‌ಗಳಲ್ಲಿ 106 ರನ್‌ಗಳಿಗೆ ಆಲೌಟ್‌ ಆಯಿತು. ಮಂಧನಾ 9 ಬೌಂಡರಿ ಮತ್ತು 2 ಸಿಕ್ಸರ್‌ ಸಿಡಿಸಿ 68 ರನ್‌ ಗಳಿಸಿದರು.