ಕೋಲ್ಕತಾ, ಫೆ.5: ಶುಕ್ರವಾರ ಆರಂಭವಾಗಲಿರುವ ಆಂಧ್ರಪ್ರದೇಶ(Bengal vs Andhra) ವಿರುದ್ಧದ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್(Ranji Trophy quarterfinal) ಪಂದ್ಯಕ್ಕೆ 18 ಸದಸ್ಯರ ಬಂಗಾಳ ತಂಡದಲ್ಲಿ ಅಂತರರಾಷ್ಟ್ರೀಯ ವೇಗಿಗಳಾದ ಮೊಹಮ್ಮದ್ ಶಮಿ, ಆಕಾಶ್ ದೀಪ್ ಮತ್ತು ಮುಖೇಶ್ ಕುಮಾರ್ ಸ್ಥಾನ ಪಡೆದಿದ್ದಾರೆ. ಅಭಿಮನ್ಯು ಈಶ್ವರನ್ ತಂಡವನ್ನು ಮುನ್ನಡೆಸಲಿದ್ದಾರೆ.
ಬಂಗಾಳ ತಂಡವು ಲೀಗ್ ಹಂತದಲ್ಲಿ 36 ಅಂಕಗಳೊಂದಿಗೆ ಗ್ರೂಪ್ ಸಿ ನಲ್ಲಿ ಅಗ್ರಸ್ಥಾನದಲ್ಲಿದೆ, ತನ್ನ ಏಳು ಪಂದ್ಯಗಳಲ್ಲಿ ಐದನ್ನು ಗೆದ್ದು, ಉಳಿದ ಎರಡನ್ನು ಡ್ರಾ ಮಾಡಿಕೊಂಡಿದೆ. ಉತ್ತರಾಖಂಡ ತಂಡವು ಗುಂಪಿನಿಂದ ನಾಕೌಟ್ ಗೆ ಅರ್ಹತೆ ಪಡೆದ ಇನ್ನೊಂದು ತಂಡವಾಗಿದೆ.
ಬಂಗಾಳ ತಂಡ
ಅಭಿಮನ್ಯು ಈಶ್ವರನ್ (ನಾಯಕ), ಸುದೀಪ್ ಚಟರ್ಜಿ, ಸುದೀಪ್ ಘರಾಮಿ, ಅನುಸ್ತುಪ್ ಮಜುಂದಾರ್, ಸುಮಂತ ಗುಪ್ತಾ, ಸುಭಮ್ ಚಟರ್ಜಿ, ಶಕೀರ್ ಹಬೀಬ್ ಗಾಂಧಿ (ವಿ.ಕೀ.), ಸಯಾನ್ ಬಿಸ್ವಾಸ್ (ವಿ.ಕೀ.), ಶಹಬಾಜ್ ಅಹ್ಮದ್, ರಾಹುಲ್ ಪ್ರಸಾದ್, ಮೊಹಮ್ಮದ್ ಶಮಿ, ಆಕಾಶ್ ದೀಪ್, ಮುಖೇಶ್ ಕುಮಾರ್, ಸೂರಜ್ ಸಿಂಧು ಜೈಸ್ವಾಲ್, ವಿಕಾಸ್ ಸಿಂಗ್, ಸುಭಮ್ ಸರ್ಕಾರ್, ಸೌಮ್ಯದೀಪ್ ಮಂಡಲ್ ಮತ್ತು ಸುಮಿತ್ ಮೊಹಂತ.
ಕ್ವಾರ್ಟರ್ ಫೈನಲ್‌ಗೆ ಕರ್ನಾಟಕ ತಂಡ ಪ್ರಕಟ; ನಾಯರ್ ವಾಪಸ್
ಮುಂಬೈ ತಂಡ ಸೇರಿದ ಜೈಸ್ವಾಲ್, ಶಾರ್ದೂಲ್
ಟೀಮ್ ಇಂಡಿಯಾದ ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಮುಂಬೈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯಕ್ಕಾಗಿ ಮುಂಬೈ ತಂಡವನ್ನು ಶಾರ್ದೂಲ್ ಠಾಕೂರ್ ಮತ್ತೆ ಸೇರಿಕೊಳ್ಳಲಿದ್ದಾರೆ. ಸೀಮ್ ಬೌಲಿಂಗ್ ಆಲ್‌ರೌಂಡರ್ ಗಾಯದಿಂದ ಮರಳುತ್ತಿದ್ದು, ಹಂಗಾಮಿ ನಾಯಕ ಸಿದ್ಧೇಶ್ ಲಾಡ್ ಅವರ ಸ್ಥಾನವನ್ನು ವಹಿಸಿಕೊಳ್ಳಲಿದ್ದಾರೆ.
ಮುಂಬೈ ತಂಡ
ಶಾರ್ದೂಲ್ ಠಾಕೂರ್ (ನಾಯಕ), ಯಶಸ್ವಿ ಜೈಸ್ವಾಲ್, ಮುಶೀರ್ ಖಾನ್, ಅಖಿಲ್ ಹೆರ್ವಾಡ್ಕರ್, ಸಿದ್ದೇಶ್ ಲಾಡ್, ಸರ್ಫರಾಜ್ ಖಾನ್, ಆಕಾಶ್ ಆನಂದ್ (ವಿಕೀ.), ಹಾರ್ದಿಕ್ ತಮೋರ್ (ವಿ.ಕೀ.), ಸಾಯಿರಾಜ್ ಪಾಟೀಲ್, ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್, ತುಷಾರ್ ದೇಶಪಾಂಡೆ, ಮೋಹಿತ್ ಅವಸ್ತಿ, ಓಂಕಾರ್ ತರ್ಮಲೆ, ದಿವ್ಯೇಶ್ ಸಕ್ಸೇನಾ ಮತ್ತು ಸೂರ್ಯಾಂಶ್ ಶೆಡ್ಗೆ.