ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಖಾಸಗಿ ಸಮಾರಂಭದಲ್ಲಿ ಗೆಳತಿ ಸೋಫಿ ಶೈನ್‌ ಜತೆ ಹಸೆಮಣೆ ಏರಿದ ಶಿಖರ್ ಧವನ್

Shikhar Dhawan: ಸೋಫಿ ಶೈನ್ ಜತೆ ಧವನ್‌ ಕಳೆದೊಂದು ವರ್ಷದಿಂದ ಡೇಟಿಂಗ್‌ ನಡೆಸುತ್ತಿದ್ದರು. ಅಲ್ಲದೆ ಹಲವು ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಶಿಖರ್ ಮತ್ತು ಸೋಫಿ ಕೆಲವು ವರ್ಷಗಳ ಹಿಂದೆ ದುಬೈನಲ್ಲಿ ಭೇಟಿಯಾಗಿದ್ದರು. ಅಲ್ಲಿ ಅವರ ಸ್ನೇಹ ಕ್ರಮೇಣ ಸಂಬಂಧವಾಗಿ ಬದಲಾಯಿತು.

Dhawan marries girlfriend Sophie Shine

ನವದೆಹಲಿ, ಫೆ.21: ಟೀಮ್‌ ಇಂಡಿಯಾದ ಮಾಜಿ ಕ್ರಿಕೆಟಿಗ ಶಿಖರ್‌ ಧವನ್‌(Shikhar Dhawan) ಅವರು ತಮ್ಮ ಬಹುಕಾಲದ ಐರ್ಲೆಂಡ್‌ನ ಗೆಳತಿ ಸೋಫಿ ಶೈನ್(Sophie Shine) ಜತೆ ಶನಿವಾರ ನಡೆದ ಖಾಸಗಿ ಸಮಾರಂಭದಲ್ಲಿ ಹಸೆಮಣೆ ಏರಿದರು. ಈ ಜೋಡಿ ಒಂದು ವರ್ಷಕ್ಕೂ ಹೆಚ್ಚು ಕಾಲ ಡೇಟಿಂಗ್ ಮಾಡುತ್ತಿದ್ದರು. ಧವನ್ ಮೇ 2025 ರಲ್ಲಿ ತಮ್ಮ ಸಂಬಂಧದ ಬಗ್ಗೆ ಸಾರ್ವಜನಿಕವಾಗಿ ಘೋಷಿಸಿದ್ದರು. ಇದೇ ವರ್ಷದ ಜನವರಿ 12 ರಂದು ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ನಿಶ್ಚಿತಾರ್ಥವನ್ನು ಘೋಷಿಸಿದ ಈ ಜೋಡಿ ಇದೀಗ ಮದೆವೆಯಾಗಿದ್ದಾರೆ.

ಧವನ್‌ ಅವರ ವಿವಾಹದ ಛಾಯಾಚಿತ್ರಗಳನ್ನು ಯುಜ್ವೇಂದ್ರ ಚಾಹಲ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸಾರ್ವಜನಿಕಗೊಳಿಸುವ ಮೂಲಕ ವಿವಾಹದ ಸುದ್ದಿಯನ್ನು ಎಲ್ಲಡೆ ಪಸರಿಸಿದರು. "ಮೇರೆ ಯಾರ್ ಕಿ ಶಾದಿ ಹೈ" ಎಂಬ ಶೀರ್ಷಿಕೆಯೊಂದಿಗೆ ಸಮಾರಂಭದ ಕೆಲವು ಚಿತ್ರಗಳನ್ನು ಚಹಲ್ ಹಂಚಿಕೊಂಡರು.‌ ಶಿಖರ್ ಧವನ್ ಕ್ರೀಮ್ ಬಣ್ಣದ ಹೋವಿನ ಶೇರ್ವಾನಿಯಲ್ಲಿ ರಾಜಮನೆತನದಂತೆ ಕಾಣಿಸಿಕೊಂಡರೆ, ಅವರ ಸಂಗಾತಿ ಸೋಫಿ ಅದೇ ಹೂವಿನ ಥೀಮ್ ಹೊಂದಿರುವ ಲೆಹೆಂಗಾವನ್ನು ಧರಿಸಿದ್ದರು.



ಸೋಫಿ ಶೈನ್ ಜತೆ ಧವನ್‌ ಕಳೆದೊಂದು ವರ್ಷದಿಂದ ಡೇಟಿಂಗ್‌ ನಡೆಸುತ್ತಿದ್ದರು. ಅಲ್ಲದೆ ಹಲವು ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಶಿಖರ್ ಮತ್ತು ಸೋಫಿ ಕೆಲವು ವರ್ಷಗಳ ಹಿಂದೆ ದುಬೈನಲ್ಲಿ ಭೇಟಿಯಾಗಿದ್ದರು. ಅಲ್ಲಿ ಅವರ ಸ್ನೇಹ ಕ್ರಮೇಣ ಸಂಬಂಧವಾಗಿ ಬದಲಾಯಿತು.

ಸೋಫಿ ಶೈನ್ ಯಾರು?

1990 ರಲ್ಲಿ ಜನಿಸಿದ ಐರಿಶ್ ಪ್ರಜೆ ಸೋಫಿ ಶೈನ್, ಪ್ರಸ್ತುತ ಶಿಖರ್ ಧವನ್ ಫೌಂಡೇಶನ್‌ನ ಮುಖ್ಯಸ್ಥರಾಗಿದ್ದಾರೆ. ಇದು ಅವರ ಸಂಘಟನೆಯಾದ ಡಾ ಒನ್ ಸ್ಪೋರ್ಟ್ಸ್‌ನ ಲೋಕೋಪಕಾರಿ ಅಂಗವಾಗಿದೆ. ಜುಲೈ 2025 ರಲ್ಲಿ, ಅವರು ಸಂಘಟನೆಯ ಮುಖ್ಯ ಕಾರ್ಯಾಚರಣಾ ಅಧಿಕಾರಿ (COO) ಆಗಿ ಅಧಿಕಾರ ವಹಿಸಿಕೊಂಡರು. ಪ್ರಭಾವಶಾಲಿ ವೃತ್ತಿಪರ ಹಿನ್ನೆಲೆಯನ್ನು ಹೊಂದಿರುವ ಸೋಫಿ, ಈ ಹಿಂದೆ ಬಹುರಾಷ್ಟ್ರೀಯ ಸಂಸ್ಥೆಯೊಂದಕ್ಕೆ ಉತ್ಪನ್ನ ಸಲಹೆಗಾರರಾಗಿ ಕೆಲಸ ಮಾಡಿದ್ದರು. ಅವರು ಲಿಮೆರಿಕ್ ಇನಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯಿಂದ ಮಾರ್ಕೆಟಿಂಗ್ ಮತ್ತು ಮ್ಯಾನೆಜ್‌ಮೆಂಟ್‌ ಪದವಿ ಪಡೆದಿದ್ದಾರೆ.



ಧವನ್‌ ಈ ಹಿಂದೆ ಆಸ್ಟ್ರೇಲಿಯಾ ಮೂಲದ ಆಯೇಶಾ ಮುಖರ್ಜಿ ಜತೆ ಮದುವೆಯಾಗಿ ವಿಚ್ಛೇದನ ಪಡೆದಿದ್ದರು. ಪತ್ನಿಯ ಅತಿಯಾದ ಕಿರುಕುಳದಿಂದ ಬೇಸತ್ತು ಧವನ್‌ ಕೊನೆಗೆ ಕೋರ್ಟ್‌ ಮೊರೆ ಹೋಗಿ ವಿಚ್ಛೇದನ ಪಡೆದಿದ್ದರು. 2024 ಅಕ್ಟೋಬರ್ 4 ರಂದು ದೆಹಲಿಯ ಕೌಟುಂಬಿಕ ನ್ಯಾಯಾಲಯವು ಧವನ್‌ಗೆ ಆಯೇಷಾ ಮುಖರ್ಜಿಯಿಂದ ಅಧಿಕೃತವಾಗಿ ವಿಚ್ಛೇದನವನ್ನು ನೀಡಿತ್ತು.