ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪಂಜಾಬ್‌ ವಿರುದ್ಧ ಗೆದ್ದು ತೊಡೆ ತಟ್ಟಿದ ಶುಭಮನ್‌ ಗಿಲ್;‌ ಫೋಟೊ ವೈರಲ್

IPL 2026: ದೊಡ್ಡ ಗೆಲುವುಗಳ ನಂತರ ಗಿಲ್ ಸಾಮಾಜಿಕ ಮಾಧ್ಯಮದಲ್ಲಿ ಏನನ್ನಾದರೂ ಬಿತ್ತರಿಸುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದಾರೆ. ಅಹಮದಾಬಾದ್ ಗೆಲುವಿನ ಸ್ವಲ್ಪ ಸಮಯದ ನಂತರ, ಅವರು ವಾಷಿಂಗ್ಟನ್ ಸುಂದರ್ ಮತ್ತು ಸಾಯಿ ಸುದರ್ಶನ್ ಅವರೊಂದಿಗೆ ಫೋಟೋ ಹಂಚಿಕೊಂಡರು, ಪಂಜಾಬ್‌ ತಂಡ ಸಿಗ್ನೇರ್‌ ಸ್ಟೈಲ್‌ ಆದ ತೊಡೆ ತಟ್ಟುವ ಭಂಗಿಯನ್ನು ಮರುಸೃಷ್ಟಿಸಿದರು.

Shubman Gill

ಅಹಮದಾಬಾದ್‌, ಮೇ 4: ಪಂಜಾಬ್ ಕಿಂಗ್ಸ್(Punjab Kings) ವಿರುದ್ಧ ಗುಜರಾತ್ ಟೈಟಾನ್ಸ್(Gujarat Titans) ಜಯಗಳಿಸಿದ ನಂತರ ಶುಭಮನ್ ಗಿಲ್ ಮತ್ತೊಮ್ಮೆ ಮೈದಾನದ ಹೊರಗೆ ಗಮನ ಸೆಳೆದರು. ಜಿಟಿ ನಾಯಕ ಈ ಬಾರಿ ಐಪಿಎಲ್ 2026(IPL 2026) ರ ಟೇಬಲ್-ಟಾಪರ್‌ಗಳನ್ನು ಗುರಿಯಾಗಿಸಿಕೊಂಡು ಪಂದ್ಯದ ನಂತರದ ತಮ್ಮ ಪರಿಚಿತ ಹಾಸ್ಯವನ್ನು ಮುಂದುವರೆಸಿದರು.

ದೊಡ್ಡ ಗೆಲುವುಗಳ ನಂತರ ಗಿಲ್ ಸಾಮಾಜಿಕ ಮಾಧ್ಯಮದಲ್ಲಿ ಏನನ್ನಾದರೂ ಬಿತ್ತರಿಸುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದಾರೆ. ಅಹಮದಾಬಾದ್ ಗೆಲುವಿನ ಸ್ವಲ್ಪ ಸಮಯದ ನಂತರ, ಅವರು ವಾಷಿಂಗ್ಟನ್ ಸುಂದರ್ ಮತ್ತು ಸಾಯಿ ಸುದರ್ಶನ್ ಅವರೊಂದಿಗೆ ಫೋಟೋ ಹಂಚಿಕೊಂಡರು, ಪಂಜಾಬ್‌ ತಂಡ ಸಿಗ್ನೇರ್‌ ಸ್ಟೈಲ್‌ ಆದ ತೊಡೆ ತಟ್ಟುವ ಭಂಗಿಯನ್ನು ಮರುಸೃಷ್ಟಿಸಿದರು. ಜತೆಗೆ ಫೋಟೊಗೆ "ಬಾಸ್ ಜೀತ್ನಾ ಹೈ. ಆವಾ ದೇ" ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. ಗಿಲ್‌ ಋತುವಿನ ಆರಂಭದಲ್ಲಿ ಇದೇ ರೀತಿಯ ಪೋಸ್ಟ್‌ಗಳು ಈಗಾಗಲೇ ಗಮನ ಸೆಳೆದಿದ್ದವು. ಕಳೆದ ಪಂದ್ಯದಲ್ಲಿ ಆರ್‌ಸಿಬಿಗೆ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಅವರದ್ದೇ ಆದ ಶೈಲಿಯಲ್ಲಿ ತಿರುಗೇಟು ನೀಡಿದ್ದರು.



ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್‌ ಗೆದ್ದ ಗುಜರಾತ್‌ ತಂಡವು ಫೀಲ್ಡಿಂಗ್‌ ಆಯ್ದುಕೊಂಡಿತು. ವೇಗದ ಬೌಲರ್‌ಗಳಾದ ಜೇಸನ್ ಹೋಲ್ಡರ್ (24ಕ್ಕೆ 4), ಮೊಹಮ್ಮದ್ ಸಿರಾಜ್ (28ಕ್ಕೆ 2) ಮತ್ತು ಕಗಿಸೊ ರಬಾಡ (22ಕ್ಕೆ 2) ಸಂಘಟಿತ ದಾಳಿಯ ಮುಂದೆ ಪಂಜಾಬ್ ತಂಡ 9 ವಿಕೆಟ್‌ಗೆ 163 ರನ್‌ಗಳ ಸಾಧಾರಣ ಮೊತ್ತ ಗಳಿಸಲಷ್ಟೇ ಶಕ್ತವಾಯಿತು.

ಗುಜರಾತ್‌ ವಿರುದ್ಧದ ಸೋಲಿಗೆ ಪ್ರಾಮಾಣಿಕ ಕಾರಣ ತಿಳಿಸಿದ ಶ್ರೇಯಸ್‌ ಅಯ್ಯರ್

ಚೇಸಿಂಗ್‌ ವೇಳೆ ಗುಜರಾತ್‌ ತಂಡವು ಆರಂಭಿಕ ಆಟಗಾರ ಸಾಯಿ ಸುದರ್ಶನ್‌ (57) ಮತ್ತು ವಾಷಿಂಗ್ಟನ್‌ ಸುಂದರ್ (ಔಟಾಗದೇ 40) ಅವರ ಬ್ಯಾಟಿಂಗ್‌ ನೆರವಿನಿಂದ ಒಂದು ಎಸೆತ ಬಾಕಿ ಇರುವಂತೆ 6 ವಿಕೆಟ್‌ಗೆ 167 ರನ್‌ ಗಳಿಸಿ ಸಂಭ್ರಮಿಸಿತು. ಒಂದು ಹಂತದಲ್ಲಿ ಪಂಜಾಬ್‌ ಬೌಲರ್‌ಗಳು ಪಂದ್ಯದ ಮೇಲೆ ಹಿಡಿತ ಸಾಧಿಸುವ ಪ್ರಯತ್ನ ನಡೆಸಿದರು. ಆದರೆ, ವಾಷಿಂಗ್ಟನ್‌ ಜವಾಬ್ದಾರಿಯುತ ಆಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಸಂಕ್ಷಿಪ್ತ ಸ್ಕೋರ್‌

ಪಂಜಾಬ್‌ ಕಿಂಗ್ಸ್-‌ 9ಕ್ಕೆ 163( ಸೂರ್ಯಾಂಶ್ ಶೆಡ್ಗೆ 57, ಮಾರ್ಕಸ್‌ ಸ್ಟೋಯಿನಿಸ್‌ 40, ಜೇಸನ್‌ ಹೋಲ್ಡರ್‌ 24 ಕ್ಕೆ 4, ಮೊಹಮ್ಮದ್‌ ಸಿರಾಜ್‌ 28 ಕ್ಕೆ 2, ಕಗಿಸೊ ರಬಾಡ 22ಕ್ಕೆ 2. ಗುಜರಾತ್‌ ಟೈಟಾನ್ಸ್-6ಕ್ಕೆ 167(ಸಾಯಿ ಸುದರ್ಶನ್‌ 57, ವಾಷಿಂಗ್ಟನ್‌ ಸುಂದರ್‌ ಔಟಾಗದೆ 40, ಅರ್ಶ್‌ದೀಪ್‌ ಸಿಂಗ್‌ 24ಕ್ಕೆ 2, ವೈಶಾಕ್ ವಿಜಯ್ 31ಕ್ಕೆ 2).