ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಗುಜರಾತ್‌ ವಿರುದ್ಧದ ಸೋಲಿಗೆ ಪ್ರಾಮಾಣಿಕ ಕಾರಣ ತಿಳಿಸಿದ ಶ್ರೇಯಸ್‌ ಅಯ್ಯರ್

IPL 2026: ಸೋಲಿನ ಬಳಿಕ ಮಾತನಾಡಿದ ಅಯ್ಯರ್‌, "ಇದು ಉತ್ತಮ ಸ್ಕೋರ್ ಎಂದು ನಾನು ವೈಯಕ್ತಿಕವಾಗಿ ಭಾವಿಸುತ್ತೇನೆ. ಏಕೆಂದರೆ ಆರಂಭದಲ್ಲಿ ಅದರಲ್ಲೂ ಹೊಸ ಚೆಂಡಿನಲ್ಲಿ ಇಲ್ಲಿ ಆಡುವುದು ಅಷ್ಟು ಸುಲಭವಾಗಿರಲಿಲ್ಲ. ಆದರೆ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಕ್ಕಾಗಿ ಗುಜರಾತ್‌ನ ಬ್ಯಾಟರ್‌ಗಳನ್ನು ಶ್ಲಾಘಿಸಬೇಕು. ನಮ್ಮ ಕಾರ್ಯಯೋಜನೆ ವಿಫಲಗೊಂಡಿತು" ಎಂದರು.

ಗುಜರಾತ್‌ ವಿರುದ್ಧದ ಸೋಲಿಗೆ ಪ್ರಾಮಾಣಿಕ ಕಾರಣ ತಿಳಿಸಿದ ಅಯ್ಯರ್

Shreyas Iyer -

Abhilash BC
Abhilash BC May 4, 2026 8:08 AM

ಅಹಮದಾಬಾದ್‌, ಮೇ 4: ಪಂಜಾಬ್ ಕಿಂಗ್ಸ್(Punjab Kings) ನಾಯಕ ಶ್ರೇಯಸ್ ಅಯ್ಯರ್(Shreyas Iyer), ಉತ್ಸಾಹಭರಿತ ಹೋರಾಟದ ಹೊರತಾಗಿಯೂ ತಮ್ಮ ತಂಡವು ಯೋಜನೆಗಳನ್ನು ಕಾರ್ಯಗತಗೊಳಿಸುವಾಗ 'ತಪ್ಪು ಮಾಡಿದೆ' ಎಂದು ಒಪ್ಪಿಕೊಂಡರು. ಭಾನುವಾರ ನಡೆದಿದ್ದ ಐಪಿಎಲ್‌(IPL 2026) ಪಂದ್ಯದಲ್ಲಿ ಅಯ್ಯರ್‌ ಪಡೆ ಗುಜರಾತ್‌ ಟೈಟಾನ್ಸ್‌ ವಿರುದ್ಧ 4 ವಿಕೆಟ್‌ ಅಂತರದ ಸೋಲು ಕಂಡಿತ್ತು.

ಸೋಲಿನ ಬಳಿಕ ಮಾತನಾಡಿದ ಅಯ್ಯರ್‌, "ಇದು ಉತ್ತಮ ಸ್ಕೋರ್ ಎಂದು ನಾನು ವೈಯಕ್ತಿಕವಾಗಿ ಭಾವಿಸುತ್ತೇನೆ. ಏಕೆಂದರೆ ಆರಂಭದಲ್ಲಿ ಅದರಲ್ಲೂ ಹೊಸ ಚೆಂಡಿನಲ್ಲಿ ಇಲ್ಲಿ ಆಡುವುದು ಅಷ್ಟು ಸುಲಭವಾಗಿರಲಿಲ್ಲ. ಆದರೆ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಕ್ಕಾಗಿ ಗುಜರಾತ್‌ನ ಬ್ಯಾಟರ್‌ಗಳನ್ನು ಶ್ಲಾಘಿಸಬೇಕು. ನಮ್ಮ ಕಾರ್ಯಯೋಜನೆ ವಿಫಲಗೊಂಡಿತು" ಎಂದರು.

"ಪವರ್‌ಪ್ಲೇನಲ್ಲಿ ನಾವು ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡೆವು ಇದು ನಮಗೆ ದೊಡ್ಡ ಹಿನ್ನಡೆಯಾಯಿತು ಎಂದು ನಾನು ಭಾವಿಸುತ್ತೇನೆ. ಹೊಸ ಚೆಂಡಿನೊಂದಿಗೆ ನಾವು ನಮ್ಮ ಲೈನ್ ಮತ್ತು ಲೆಂಗ್ತ್ ಅನ್ನು ಹೊಡೆಯಲು ಮತ್ತು ಆರಂಭಿಕ ವಿಕೆಟ್‌ಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸಿದೆ. ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ" ಎಂದು ಅವರು ಹೇಳಿದರು. ಸೋಲಿನ ಹೊರತಾಗಿಯೂ, ಕೊನೆಯವರೆಗೂ ಹೋರಾಡಿದ ತಂಡದ ಪರಿಶ್ರಮಕ್ಕೆ ಅಯ್ಯರ್ ಮೆಚ್ಚುಗೆ ಸೂಚಿಸಿದರು.

ಪಂದ್ಯದಲ್ಲಿ ಮೊದಲು ಬೌಲಿಂಗ್‌ ನೆಡೆಸಿದ ಗುಜರಾತ್‌ ಟೈಟಾನ್ಸ್‌, ಪಂಜಾಬ್‌ ಕಿಂಗ್ಸ್‌ ತಂಡವನ್ನು 163ರನ್‌ಗಳಿಗೆ ನಿಯಂತ್ರಿಸಿದರು. ಬಳಿಕ ಸ್ಪರ್ಧಾತ್ಮಕ ಮೊತ್ತವನ್ನು 19.5 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 167 ರನ್‌ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.

PBKS vs GT: ಕ್ರಿಸ್ ಗೇಲ್ ಸಾರ್ವಕಾಲಿಕ ದಾಖಲೆ ಮುರಿದ ಸಾಯಿ ಸುದರ್ಶನ್

ಚೇಸಿಂಗ್‌ ವೇಳೆ ಗುಜರಾತ್‌ಗೆ ಆರಂಭಿಕ ಎಡಗೈ ಬ್ಯಾಟರ್‌ ಸಾಯಿ ಸುದರ್ಶನ್‌ ಅರ್ಧಶತಕ ಬಾರಿಸಿ ನೆರವಾದರು. ಆದರೆ ಇವರ ಜತೆಗಾರ ಶುಭಮನ್‌ ಗಿಲ್‌(5) ಬೇಗನೆ ವಿಕೆಟ್‌ ಕಳೆದುಕೊಂಡರು. ಜಾಸ್‌ ಬಟ್ಲರ್‌ 26 ರನ್‌ ಬಾರಿಸಿದರು. ಸಾಯಿ ಸುದರ್ಶನ್‌ ವಿಕೆಟ್‌ ಬಿದ್ದ ಬೆನ್ನಲ್ಲೇ ಇಂಪ್ಯಾಕ್ಟ್‌ ಆಟಗಾರ ರಾಹುಲ್‌ ತೆವಾಟಿಯ(2), ಜೇಸನ್‌ ಹೋಲ್ಡರ್‌(5) ವಿಕೆಟ್‌ ಕೂಡ ಪತನಗೊಂಡಿತು. ಈ ವೇಳೆ ತಂಡ ಸಂಕಷ್ಟಕ್ಕೆ ಸಿಲುಕಿತು. ಆದರೆ ವಾಷಿಂಗ್ಟನ್‌ ಸುಂದರ್‌ ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಗುಜರಾತ್‌ ಪರ ಘಾತಕ ಬೌಲಿಂಗ್‌ ದಾಳಿ ನಡೆಸಿದ ಜೇಸನ್‌ ಹೋಲ್ಡರ್‌ ಕೇವಲ 24 ರನ್‌ಗೆ 4 ಪ್ರಮುಖ ವಿಕೆಟ್‌ ಕಡೆವಿದರು. ಮೊಹಮ್ಮದ್‌ ಸಿರಾಜ್‌ ಮತ್ತು ಕಗಿಸೊ ರಬಾಡ ತಲಾ ಎರಡು ವಿಕೆಟ್‌ ಕಿತ್ತರು. ಕನ್ನಡಿಗ ಪ್ರಸಿದ್ಧ್‌ ಕೃಷ್ಣ ಈ ಪಂದ್ಯದಲ್ಲಿ ಅವಕಾಶ ವಂಚಿತರಾದರು.

ಸಂಕ್ಷಿಪ್ತ ಸ್ಕೋರ್‌

ಪಂಜಾಬ್‌ ಕಿಂಗ್ಸ್-‌ 9ಕ್ಕೆ 163( ಸೂರ್ಯಾಂಶ್ ಶೆಡ್ಗೆ 57, ಮಾರ್ಕಸ್‌ ಸ್ಟೋಯಿನಿಸ್‌ 40, ಜೇಸನ್‌ ಹೋಲ್ಡರ್‌ 24 ಕ್ಕೆ 4, ಮೊಹಮ್ಮದ್‌ ಸಿರಾಜ್‌ 28 ಕ್ಕೆ 2, ಕಗಿಸೊ ರಬಾಡ 22ಕ್ಕೆ 2. ಗುಜರಾತ್‌ ಟೈಟಾನ್ಸ್-6ಕ್ಕೆ 167(ಸಾಯಿ ಸುದರ್ಶನ್‌ 57, ವಾಷಿಂಗ್ಟನ್‌ ಸುಂದರ್‌ ಔಟಾಗದೆ 40, ಅರ್ಶ್‌ದೀಪ್‌ ಸಿಂಗ್‌ 24ಕ್ಕೆ 2, ವೈಶಾಕ್ ವಿಜಯ್ 31ಕ್ಕೆ 2).