ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ರಣಜಿ ಟ್ರೋಫಿ ಪಂದ್ಯಕ್ಕೆ ಸ್ಮರನ್ ಗೈರು; ನಿಕಿನ್ ಜೋಸ್ ತಂಡಕ್ಕೆ ಸೇರ್ಪಡೆ

Ranji Trophy: ಸ್ಮರನ್ ಬದಲಿಗೆ ಅಗ್ರಕ್ರಮಾಂಕದ ಬ್ಯಾಟರ್ ನಿಕಿನ್ ಜೋಸ್ ಸ್ಥಾನ ಪಡೆದಿದ್ದಾರೆ. ಸ್ಥಾನ ಪಡೆದಿದ್ದಾರೆ. ವೈಶಾಖ ವಿಜಯಕುಮಾರ್ ಅವರನ್ನೂ ಆಯ್ಕೆ ಮಾಡಿಲ್ಲ. ಗುರುವಾರ ವಿದರ್ಭ ಎದುರಿನ ಪಂದ್ಯದಲ್ಲಿ ವೈಶಾಖ ತಲೆಗೆ ಚೆಂಡು ಬಡಿದಿತ್ತು. ಕಂಕಷನ್ ನಿಯಮದನ್ವಯ ಬದಲೀ ಆಟಗಾರ ವೈಶಾಖ ಬದಲಿಗೆ ಆಡಿದ್ದರು.

R Smaran

ಬೆಂಗಳೂರು, ಜ.17: ಗಾಯಗೊಂಡಿರುವ ಆರ್. ಸ್ಮರನ್ ಜನವರಿ 22 ರಂದು ಬೆಂಗಳೂರಿನ ಆಲೂರು (1) ಮೈದಾನದಲ್ಲಿ ಪ್ರಾರಂಭವಾಗುವ ಮಧ್ಯಪ್ರದೇಶ ವಿರುದ್ಧದ ಕರ್ನಾಟಕದ ರಣಜಿ ಟ್ರೋಫಿ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಭುಜದ ನೋವಿನಿಂದಾಗಿ ಗುರುವಾರ ನಡೆದ ಕರ್ನಾಟಕದ ವಿಜಯ್ ಹಜಾರೆ ಟ್ರೋಫಿಯ ಸೆಮಿಫೈನಲ್ ಪಂದ್ಯವನ್ನು ಸ್ಮರನ್ ತಪ್ಪಿಸಿಕೊಂಡಿದ್ದರು.

ಸ್ಮರನ್ ಉತ್ತಮ ಫಾರ್ಮ್‌ನಲ್ಲಿರುವುದರಿಂದ ಅವರ ಅನುಪಸ್ಥಿತಿಯು ತಂಡಕ್ಕೆ ಒಂದು ಹೊಡೆತವಾಗಿದೆ. ಟೂರ್ನಿಯ ಪ್ರಥಮ ಹಂತದ ಐದು ಪಂದ್ಯಗಳಲ್ಲಿ ಯುವ ಬ್ಯಾಟರ್ ಸ್ಮರಣ್ ಅವರು 595 ರನ್‌ ಗಳಿಸಿದ್ದರು. ಅದರಲ್ಲಿ ಎರಡು ಶತಕ ಮತ್ತು ಎರಡು ಅರ್ಧಶತಕಗಳಿದ್ದವು. ಏಕದಿನ ಟೂರ್ನಿಯಲ್ಲಿ 725 ರನ್ ಗಳಿಸಿದ್ದ ದೇವದತ್ತ ಪಡಿಕ್ಕಲ್, ಅನುಭವಿ ಕರುಣ್ ನಾಯರ್ ಅವರ ಮೇಲೆ ತಂಡದ ಬ್ಯಾಟಿಂಗ್ ವಿಭಾಗದ ಅವಲಂಬಿತವಾಗಿದೆ.

ಸ್ಮರನ್ ಬದಲಿಗೆ ಅಗ್ರಕ್ರಮಾಂಕದ ಬ್ಯಾಟರ್ ನಿಕಿನ್ ಜೋಸ್ ಸ್ಥಾನ ಪಡೆದಿದ್ದಾರೆ. ಸ್ಥಾನ ಪಡೆದಿದ್ದಾರೆ. ವೈಶಾಖ ವಿಜಯಕುಮಾರ್ ಅವರನ್ನೂ ಆಯ್ಕೆ ಮಾಡಿಲ್ಲ. ಗುರುವಾರ ವಿದರ್ಭ ಎದುರಿನ ಪಂದ್ಯದಲ್ಲಿ ವೈಶಾಖ ತಲೆಗೆ ಚೆಂಡು ಬಡಿದಿತ್ತು. ಕಂಕಷನ್ ನಿಯಮದನ್ವಯ ಬದಲೀ ಆಟಗಾರ ವೈಶಾಖ ಬದಲಿಗೆ ಆಡಿದ್ದರು.

IND vs NZ: ವಾಷಿಂಗ್ಟನ್‌ ಸುಂದರ್‌ ಔಟ್‌, ಭಾರತ ಟಿ20ಐ ತಂಡಕ್ಕೆ ಮರಳಿದ ಶ್ರೇಯಸ್‌ ಅಯ್ಯರ್‌, ರವಿ ಬಿಷ್ಣೋಯ್!

ಕರ್ನಾಟಕ ತಂಡ 21 ಅಂಕಗಳೊಂದಿಗೆ ಎಲೈಟ್ ಗ್ರೂಪ್ ಬಿ ನಲ್ಲಿ ಅಗ್ರಸ್ಥಾನದಲ್ಲಿದೆ. ಜನವರಿ 18 ರಂದು ನ್ಯೂಜಿಲೆಂಡ್ ವಿರುದ್ಧದ ಭಾರತದ ಏಕದಿನ ಪಂದ್ಯ ಮುಗಿದಿದ್ದರೂ, ಬ್ಯಾಟಿಂಗ್ ದಿಗ್ಗಜ ಕೆಎಲ್ ರಾಹುಲ್ ತಂಡದಲ್ಲಿಲ್ಲ. ಏಕದಿನ ಪಂದ್ಯದ ನಂತರ ಕಿವೀಸ್ ವಿರುದ್ಧ ನಡೆಯಲಿರುವ ಟಿ20ಐ ತಂಡದಲ್ಲಿ ರಾಹುಲ್ ಸ್ಥಾನ ಪಡೆದಿಲ್ಲ.

ಕರ್ನಾಟಕ ತಂಡ

ಮಯಂಕ್ ಅಗರ್ವಾಲ್‌ (ನಾಯಕ), ನಿಕಿನ್ ಜೋಸ್, ದೇವದತ್ತ ಪಡಿಕ್ಕಲ್, ಕರುಣ್ ನಾಯರ್, ಕೆ.ಎಲ್. ಶ್ರೀಜಿತ್, ಅಭಿನವ್ ಮನೋಹರ್, ಶ್ರೇಯಸ್ ಗೋಪಾಲ್, ವಿದ್ಯಾಧರ್ ಪಾಟೀಲ, ವಿದ್ವತ್ ಕಾವೇರಪ್ಪ, ಅಭಿಲಾಷ್ ಶೆಟ್ಟಿ, ಮೊಹಸಿನ್ ಖಾನ್, ಶಿಖರ್ ಶೆಟ್ಟಿ, ಕೃತಿಕ್ ಕೃಷ್ಣ, ಕೆ.ವಿ. ಅನೀಶ್, ಎಂ. ವೆಂಕಟೇಶ್.