ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಿಶ್ವಕಪ್‌ ಗೆದ್ದ ಸ್ನೇಹ್‌ ರಾಣಾ, ಪ್ರತಿಕಾ, ರೇಣುಕಾಗೆ ರೈಲ್ವೆನಲ್ಲಿ ಬಡ್ತಿ

ODI World Cup triumph: ಪ್ರತೀಕಾ ಪಂದ್ಯಾವಳಿಯಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ್ತಿ ಎನಿಸಿದ್ರು. ಏಳು ಇನ್ನಿಂಗ್ಸ್‌ಗಳಲ್ಲಿ 51 ಸರಾಸರಿಯಲ್ಲಿ 308 ರನ್ ಗಳಿಸಿದ್ದರು. ವೇಗಿ ರೇಣುಕಾ ಆರು ಪಂದ್ಯಗಳಿಂದ ಕೇವಲ ಮೂರು ವಿಕೆಟ್‌ಗಳನ್ನು ಮಾತ್ರ ಪಡೆದಿದ್ದರು. ಆದರೆ ಭಾರತ ಪರ ಹೊಸ ಚೆಂಡಿನಲ್ಲಿ ಉತ್ತಮ ಬೌಲಿಂಗ್‌ ಸಂಘಟಿಸಿದ್ದರು.

ಸ್ನೇಹ್‌ ರಾಣಾ, ಪ್ರತಿಕಾ ಮತ್ತು ರೆಣುಕಾ

ನವದೆಹಲಿ, ಡಿ.2: ಏಕದಿನ ಮಹಿಳಾ ವಿಶ್ವಪ್‌ ವಿಜೇತ(ODI World Cup triumph) ಭಾರತ ಮಹಿಳಾ ತಂಡದ ಆಟಗಾರ್ತಿಯರಾದ ಸ್ನೇಹ್ ರಾಣಾ(Sneh Rana), ರೇಣುಕಾ ಸಿಂಗ್(Renuka Singh) ಮತ್ತು ಪ್ರತಿಕಾ ರಾವಲ್(Pratika Rawal) ಅವರಿಗೆ ರೈಲ್ವೆ ಸಚಿವಾಲಯವು 'ಆಫೀಸರ್ ಆನ್ ಸ್ಪೆಷಲ್ ಡ್ಯೂಟಿ (ಕ್ರೀಡೆ)' ಹುದ್ದೆಗೆ ಬಡ್ತಿ ನೀಡಿದೆ.

ಈ ಮೂವರು ಆಟಗಾರ್ತಿಯರು ‘ಔಟ್ ಆಫ್ ಟರ್ನ್’ ಬಡ್ತಿ ಮೂಲಕ ಗ್ರೂಪ್ ಬಿ ಅಧಿಕಾರಿ ಹುದ್ದೆಯನ್ನು ಪಡೆದಿದ್ದಾರೆ. ದಕ್ಕೂ ಮೊದಲು ರಾವಲ್ ಅವರು ರೈಲ್ವೆನಲ್ಲಿ ಹಿರಿಯ ಗುಮಾಸ್ತರಾಗಿ, ರೇಣುಕಾ ಮತ್ತು ರಾಣಾ ಅವರು ಕ್ರಮವಾಗಿ ಉತ್ತರ ರೈಲ್ವೆಯಲ್ಲಿ ಜೂನಿಯರ್ ಗುಮಾಸ್ತ ಮತ್ತು ಟಿಕೆಟ್ ಗುಮಾಸ್ತರಾಗಿದ್ದರು.

7ನೇ ಸಿಪಿಸಿ ಪ್ರಕಾರ ಪೇ ಮ್ಯಾಟ್ರಿಕ್ಸ್‌ನ ಲೆವೆಲ್‌–8 ಅಡಿಯಲ್ಲಿ ಗ್ರೂಪ್ ಬಿ ಗೆಜೆಟೆಡ್ ಅಧಿಕಾರಿಯ ವೇತನ ಮತ್ತು ಸವಲತ್ತು ಪಡೆಯಲು ಅರ್ಹರಾಗಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ರೈಲ್ವೆ ಕ್ರೀಡಾ ಪ್ರಚಾರ ಮಂಡಳಿಯ ಈ ಉಪಕ್ರಮವು ಮೂವರು ಮಹಿಳಾ ಕ್ರಿಕೆಟಿಗರಿಗೆ ಆರ್ಥಿಕ ಭದ್ರತೆ ಒದಗಿಸುವುದಲ್ಲದೆ, ಅವರಿಗೆ ಆಡಳಿತಾತ್ಮಕ ಜವಾಬ್ದಾರಿಗಳನ್ನು ವಹಿಸುತ್ತದೆ ಎಂದು ಹೇಳಿದೆ.

ಇದನ್ನೂ ಓದಿ Harmanpreet Kaur: ವಿಶ್ವಕಪ್ ಟ್ಯಾಟೂ ಹಾಕಿಸಿಕೊಂಡ ಹರ್ಮನ್‌ಪ್ರೀತ್‌ ಕೌರ್‌

"ನನಗೆ 'ಆಫೀಸರ್ ಆನ್ ಸ್ಪೆಷಲ್ ಡ್ಯೂಟಿ' (ಕ್ರೀಡೆ) ಹುದ್ದೆಗೆ ಬಡ್ತಿ ನೀಡಿ, ನನ್ನ ಪ್ರಯತ್ನಗಳನ್ನು ಗುರುತಿಸಿದ್ದಕ್ಕಾಗಿ ರೈಲ್ವೆ ಸಚಿವಾಲಯಕ್ಕೆ ಹೃತ್ಪೂರ್ವಕ ಧನ್ಯವಾದಗಳು. ಒಬ್ಬ ಕ್ರೀಡಾ ವ್ಯಕ್ತಿಯಾಗಿ, ಉದ್ಯೋಗ ಪಡೆಯಲು ರೈಲ್ವೆ ಅತ್ಯುತ್ತಮ ಸಂಸ್ಥೆಯಾಗಿದೆ. ಇದು ನಮ್ಮನ್ನು ಯಾವಾಗಲೂ ಅತ್ಯುತ್ತಮವಾಗಿಡಲು ಪ್ರೇರೇಪಿಸುತ್ತದೆ. ಕೃತಜ್ಞತೆಗಳು!" ಎಂದು ಸ್ನೇಹ್ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಭಾರತದ ವಿಶ್ವಕಪ್ ವಿಜೇತ ಅಭಿಯಾನದ ಸಮಯದಲ್ಲಿ ಸ್ನೇಹ್ ರಾಣಾ ಆರು ಪಂದ್ಯಗಳನ್ನು ಆಡಿದ್ದರು. ಅವರು 45 ರ ಸರಾಸರಿಯಲ್ಲಿ ಏಳು ವಿಕೆಟ್‌ಗಳನ್ನು ಪಡೆದರು ಮತ್ತು ಐದು ಇನ್ನಿಂಗ್ಸ್‌ಗಳಲ್ಲಿ 113 ರ ಸ್ಟ್ರೈಕ್ ರೇಟ್‌ನಲ್ಲಿ 99 ರನ್‌ಗಳ ಸೂಕ್ತ ಕೊಡುಗೆಗಳನ್ನು ನೀಡಿದ್ದರು.

ಪ್ರತೀಕಾ ಪಂದ್ಯಾವಳಿಯಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ್ತಿ ಎನಿಸಿದ್ರು. ಏಳು ಇನ್ನಿಂಗ್ಸ್‌ಗಳಲ್ಲಿ 51 ಸರಾಸರಿಯಲ್ಲಿ 308 ರನ್ ಗಳಿಸಿದ್ದರು. ವೇಗಿ ರೇಣುಕಾ ಆರು ಪಂದ್ಯಗಳಿಂದ ಕೇವಲ ಮೂರು ವಿಕೆಟ್‌ಗಳನ್ನು ಮಾತ್ರ ಪಡೆದಿದ್ದರು. ಆದರೆ ಭಾರತ ಪರ ಹೊಸ ಚೆಂಡಿನಲ್ಲಿ ಉತ್ತಮ ಬೌಲಿಂಗ್‌ ಸಂಘಟಿಸಿದ್ದರು.