ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಏಷ್ಯನ್​ ಗೇಮ್ಸ್​: ಎಂಎಂಎ ಸ್ಪರ್ಧೆಯಲ್ಲಿ ಐತಿಹಾಸಿಕ ಕಂಚು ಗೆದ್ದ ಸುಚಿಕಾ ತರಿಯಾಲ್

Suchika Tariyal: ಎಂಎಂಎ ಇದೇ ಮೊದಲ ಬಾರಿಗೆ ಏಷ್ಯನ್​ ಗೇಮ್ಸ್​ನಲ್ಲಿ ಪದಕ ಸ್ಪರ್ಧೆಯಾಗಿ ಸೇರ್ಪಡೆಗೊಂಡಿದೆ. ಈ ಸ್ಪರ್ಧೆಯಲ್ಲಿ ಸೆಮಿಫೈನಲ್​ನಲ್ಲಿ ಸೋತ ಇಬ್ಬರಿಗೂ ಕಂಚಿನ ಪದಕ ನೀಡಲಾಗುತ್ತದೆ. ಹೀಗಾಗಿ 36 ವರ್ಷದ ಸುಚಿಕಾಗೆ ಕಂಚಿನ ಪದಕ ಲಭಿಸಿತು. ಸುಚಿಕಾ ಭಾನುವಾರ ನಡೆದ ಕ್ವಾರ್ಟರ್​ಫೈನಲ್​ನಲ್ಲಿ ಮಂಗೋಲಿಯಾದ ಅಲ್ಟಾಂಚಿಮೆಗ್​ ಬೈಗಲ್ಮಾ ವಿರುದ್ಧ 2-0 ಅಂತರದಿಂದ ಗೆಲುವು ಸಾಧಿಸಿದ್ದರು.

Suchika Tariyal

ನಗೋಯಾ, ಸೆ.21: ಭಾರತದ ಸುಚಿಕಾ ತರಿಯಾಲ್ ಅವರು ಮಹಿಳೆಯರ ಮಿಶ್ರ ಮಾರ್ಷಿಯಲ್​ ಆರ್ಟ್ಸ್ (ಎಂಎಂಎ) 60 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ 2-0 ಅಂತರದಿಂದ ಸೋಲುವ ಮೂಲಕ ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಸೆಮಿಫೈನಲ್ ಹಣಾಹಣಿಯಲ್ಲಿ ಸಿಂಗಾಪುರದ ಟಿಯೊ ಹುಯಿ ಹೂನ್ ವಿರುದ್ಧ ಸೆಣಸಿದ ತರಿಯಾಲ್, ಫೈನಲ್ ತಲುಪುವಲ್ಲಿ ವಿಫಲರಾದರು. ಆದರೆ ಭಾರತಕ್ಕಾಗಿ ಐತಿಹಾಸಿಕ ಕಂಚಿನ ಪದಕವನ್ನು ಗೆದ್ದರು.

ತೀವ್ರ ಪೈಪೋಟಿಯಿಂದ ಕೂಡಿದ್ದ ಸೆಮಿಫೈನಲ್‌ ಪಂದ್ಯದಲ್ಲಿ ಉಭಯ ಕ್ರೀಡಾಪಟುಗಳು ದಣಿದಂತೆ ಕಂಡುಬಂದರು. ಯಾರೊಬ್ಬರೂ ತಮ್ಮ ಪಂಚ್‌ಗಳು ಮತ್ತು ಕಿಕ್‌ಗಳ ಮೂಲಕ ನಿರ್ಣಾಯಕ ಹೊಡೆತವನ್ನು ನೀಡಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಹೆಚ್ಚುವರಿ ಸುತ್ತಿನಲ್ಲಿ ತರಿಯಾಲ್ 0-2 ಅಂತರದಲ್ಲಿ ಸೋಲನ್ನಪ್ಪಿದರು. ಟಿಯೋ ಫೈನಲ್‌ಗೆ ಪ್ರವೇಶ ಪಡೆದ ಸಂಭ್ರಮ ಆಚರಿಸಿದರೆ, ತರಿಯಾಲ್ ಈ ಫಲಿತಾಂಶವನ್ನು ಅರಗಿಸಿಕೊಳ್ಳಲು ಸಾಧ್ಯವಾಗದೆ ಭಾವುಕರಾಗಿ ಕಣ್ಣೀರು ಹಾಕಿದರು.



ಎಂಎಂಎ ಇದೇ ಮೊದಲ ಬಾರಿಗೆ ಏಷ್ಯನ್​ ಗೇಮ್ಸ್​ನಲ್ಲಿ ಪದಕ ಸ್ಪರ್ಧೆಯಾಗಿ ಸೇರ್ಪಡೆಗೊಂಡಿದೆ. ಈ ಸ್ಪರ್ಧೆಯಲ್ಲಿ ಸೆಮಿಫೈನಲ್​ನಲ್ಲಿ ಸೋತ ಇಬ್ಬರಿಗೂ ಕಂಚಿನ ಪದಕ ನೀಡಲಾಗುತ್ತದೆ. ಹೀಗಾಗಿ 36 ವರ್ಷದ ಸುಚಿಕಾಗೆ ಕಂಚಿನ ಪದಕ ಲಭಿಸಿತು. ಸುಚಿಕಾ ಭಾನುವಾರ ನಡೆದ ಕ್ವಾರ್ಟರ್​ಫೈನಲ್​ನಲ್ಲಿ ಮಂಗೋಲಿಯಾದ ಅಲ್ಟಾಂಚಿಮೆಗ್​ ಬೈಗಲ್ಮಾ ವಿರುದ್ಧ 2-0 ಅಂತರದಿಂದ ಗೆಲುವು ಸಾಧಿಸಿದ್ದರು. ಆದರೆ ಸೆಮಿ ಪಂದ್ಯದಲ್ಲಿ ಇದೇ ಲಯ ಮುಂದುವರಿಸಲು ಸಾಧ್ಯವಾಗಲಿಲ್ಲ.

ಏಷ್ಯನ್‌ ಗೇಮ್ಸ್‌: ಮಹಿಳಾ ಟಿಟಿ ಪಂದ್ಯದಲ್ಲಿ ಭಾರತ-ಪಾಕ್‌ ಹ್ಯಾಂಡ್‌ಶೇಕ್‌!

ಸುಚಿಕಾ ಈ ಮುನ್ನ 2022ರ ಕಾಮನ್ವೆಲ್ತ್​ ಗೇಮ್ಸ್​ನಲ್ಲಿ ಜುಡೋ ಮತ್ತು 2023ರ ಏಷ್ಯನ್​ ಗೇಮ್ಸ್​ನಲ್ಲಿ ಕುರಾಶ್​ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಅವರು 2024ರಲ್ಲಿ ಜಿಯು-ಜಿತ್ಸು ವಿಶ್ವ ಚಾಂಪಿಯನ್​ ಕೂಡ ಆಗಿದ್ದರು. 12ನೇ ವಯಸ್ಸಿನಲ್ಲಿ ಎದುರಿಸಿದ ಕಿರುಕುಳದ ಬಳಿಕ ಸುಚಿಕಾ ತಾನು ಕೂಡ ಹೋರಾಡಲು ಕಲಿಯಬೇಕೆಂದು ನಿರ್ಧರಿಸಿ ಆತ್ಮರಕ್ಷಣೆಗಾಗಿ ಜುಡೋ ಕಲಿಯಲಾರಂಭಿಸಿದ್ದರು. 24 ವರ್ಷಗಳ ಬಳಿಕ ಏಷ್ಯನ್​ ಗೇಮ್ಸ್​ ಪೋಡಿಯಂ ಏರಿ ಇತಿಹಾಸ ನಿರ್ಮಿಸಿದರು.