ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಪಂದ್ಯದ ವೇಳೆ ದಿಢೀರ್‌ ಅಭಿಷೇಕ್‌ ಶರ್ಮಾ ಜೇಬು ಪರೀಕ್ಷಿಸಿದ ಸೂರ್ಯಕುಮಾರ್‌

ಅಭಿಷೇಕ್ ಶರ್ಮಾ ಮುಂಬೈ ವಿರುದ್ಧ ಕೇವಲ 28 ಬಾಲ್‌ಗಳಲ್ಲಿ 40 ರನ್ ಗಳಿಸಿ ಆಟವಾಡುತ್ತಿದ್ದರು. ಈ ವೇಳೆ ಸೂರ್ಯಕುಮಾರ್ ಯಾದವ್ ಬಂದು ಅಭಿಷೇಕ್‌ ಜೇಬು ಪರೀಕ್ಷಿಸಿದ್ದಾರೆ. ಅಚ್ಚರಿ ಎಂದರೆ ಅದೇ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ಎಸೆದ ಬಾಲ್‌ಗೆ ಅಭಿಷೇಕ್ ಶರ್ಮಾ ಕ್ಲೀನ್ ಬೌಲ್ಡ್ ಆದರು.

ಪಂದ್ಯದ ವೇಳೆ ದಿಢೀರ್‌ ಅಭಿಷೇಕ್‌ ಶರ್ಮಾ ಜೇಬು ಪರೀಕ್ಷಿಸಿದ ಸೂರ್ಯ

Profile Abhilash BC Apr 19, 2025 1:38 PM

ಮುಂಬಯಿ: ಕಳೆದ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ(IPL 2025) ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಆಟಗಾರ ಸೂರ್ಯಕುಮಾರ್‌ ಯಾದವ್‌(suryakumar yadav) ಅವರು ಬ್ಯಾಟಿಂಗ್‌ ನಡೆಸಲು ಬಂದ ಹೈದರಾಬಾದ್‌ ತಂಡದ ಬ್ಯಾಟರ್ ಅಭಿಷೇಕ್ ಶರ್ಮಾ(abhishek sharma) ಅವರ ಜೇಬು ಪರೀಕ್ಷಿಸಿದ ವಿಡಿಯೊವೊಂದು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅಷ್ಟಕ್ಕೂ ಸೂರ್ಯಕುಮಾರ್‌ ಅವರು ಅಭಿಷೇಕ್‌ ಜೇಬು ಪರೀಕ್ಷಿಸಲು ಕಾರಣ ಏನೆಂದರೆ, ಪಂಜಾಬ್ ಕಿಂಗ್ಸ್ ತಂಡದ ಎದುರಿನ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಕೇವಲ 55 ಬಾಲ್‌ಗಳಲ್ಲಿ ಅಮೋಘ 141 ರನ್ ಸಿಡಿಸಿದ್ದರು.

ಶತಕದ ಬಳಿಕ ಜೇಬಿನಿಂದ ಚೀಟಿಯೊಂದನ್ನು ತೆಗೆದು ಪ್ರದರ್ಶಿಸಿದ್ದರು. ಹೀಗಾಗಿ ಅಭಿಷೇಕ್‌ ತಮ್ಮ ತಂಡದ ವಿರುದ್ಧವೂ ಶತಕ ಬಾರಿಸುವ ಯೋಜನೆ ಹಾಕಿರಬಹುದೆಂದು ಸೂರ್ಯಕುಮಾರ್ ಯಾದವ್ ಅದೇ ಚೀಟಿಗಾಗಿ ಅಭಿಷೇಕ್ ಜೇಬು ತಡಕಾಡಿದ್ದಾರೆ ಎಂದು ನೆಟ್ಟಿಗರು ಹಾಸ್ಯಮಯ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಕೆಲವರು ಚಾಕಲೇಟ್ ಇದೆಯಾ ಎಂದು ಹುಡುಕಾಡಿರಬಹುದೆಂದು ಕಮೆಂಟ್‌ ಮಾಡಿದ್ದಾರೆ.



ಅಭಿಷೇಕ್ ಶರ್ಮಾ ಮುಂಬೈ ವಿರುದ್ಧ ಕೇವಲ 28 ಬಾಲ್‌ಗಳಲ್ಲಿ 40 ರನ್ ಗಳಿಸಿ ಆಟವಾಡುತ್ತಿದ್ದರು. ಈ ವೇಳೆ ಸೂರ್ಯಕುಮಾರ್ ಯಾದವ್ ಬಂದು ಅಭಿಷೇಕ್‌ ಜೇಬು ಪರೀಕ್ಷಿಸಿದ್ದಾರೆ. ಅಚ್ಚರಿ ಎಂದರೆ ಅದೇ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ಎಸೆದ ಬಾಲ್‌ಗೆ ಅಭಿಷೇಕ್ ಶರ್ಮಾ ಕ್ಲೀನ್ ಬೌಲ್ಡ್ ಆದರು.



ಪಂಜಾಬ್‌ ವಿರುದ್ಧದ ಅಮೋಘ ಪ್ರದರ್ಶನ ಬಳಿಕ ಮಾತನಾಡಿದ್ದ ಅಭಿಷೇಕ್‌, ಸೂರ್ಯಕುಮಾರ್ ಯಾದವ್‌ ಅವರ ಪ್ರೋತ್ಸಾಹದಿಂದ ನಾನು ಈ ಹಂತಕ್ಕೆ ಬೆಳೆಯುವಂತಾಗಿದೆ ಎಂದು ಸೂರ್ಯಗೆ ಕೃತಜ್ಞತೆ ಸಲ್ಲಿಸಿದ್ದರು.

ಇದನ್ನೂ ಓದಿ IPL 2025: ಕನ್ನಡಿಗ ಮನೀಶ್‌ ಪಾಂಡೆಗೆ ಅನ್ಯಾಯ ಮಾಡಿತೇ ಬಿಸಿಸಿಐ?