ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಗೆಲುವಿನ ಇನಿಂಗ್ಸ್‌ ಆಡಿ ವಿರಾಟ್‌ ಕೊಹ್ಲಿಯ ದಾಖಲೆ ಮುರಿದ ಸೂರ್ಯಕುಮಾರ್‌ ಯಾದವ್‌

Suryakumar Yadav: ಪಂದ್ಯದಲ್ಲಿ ಟಾಸ್‌ ಸೋತು ಬ್ಯಾಟಿಂಗ್‌ಗಿಳಿದ ಭಾರತ 20 ಓವರಲ್ಲಿ 9 ವಿಕೆಟ್‌ಗೆ 161 ರನ್‌ ಕಲೆಹಾಕಿತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಅಮೆರಿಕ 20 ಓವರಲ್ಲಿ ತಂಡ 8 ವಿಕೆಟ್‌ ನಷ್ಟಕ್ಕೆ 132 ರನ್‌ ಗಳಿಸಿ ಸೋಲಿಗೆ ಶರಣಾಯಿತು. ಭಾರತ ಪರ ಅರ್ಶ್‌ದೀಪ್‌, ಸಿರಾಜ್‌, ಅಕ್ಷರ್‌ ತಲಾ 2 ವಿಕೆಟ್‌ ಕಿತ್ತರು.

Suryakumar Yadav shatters Virat Kohli's record

ಮುಂಬಯಿ, ಫೆ.8: 2026ರ ಐಸಿಸಿ ಟಿ20 ವಿಶ್ವಕಪ್‌(T20 World Cup 2026)ನ ಮೊದಲ ಪಂದ್ಯದಲ್ಲೇ ಅತ್ಯಮೂಲ್ಯ ಅರ್ಧಶತಕ ಸಿಡಿಸಿ ಅಮೆರಿಕ ವಿರುದ್ಧ ಭಾರತಕ್ಕೆ ಗೆಲುವು ತಂದುಕೊಟ್ಟು ನಾಯಕ ಸೂರ್ಯಕುಮಾರ್‌ ಯಾದವ್‌(Suryakumar Yadav) ಅವರು ವಿರಾಟ್‌ ಕೊಹ್ಲಿ(Virat Kohli)ಯ ಮಹತ್ವದ ದಾಖಲೆಯೊಂದನ್ನು ಮುರಿದಿದ್ದಾರೆ.

49 ಎಸೆತದಲ್ಲಿ 10 ಬೌಂಡರಿ, 4 ಸಿಕ್ಸರ್‌ನೊಂದಿಗೆ ಔಟಾಗದೆ 84 ರನ್‌ ಸಿಡಿಸಿ ತಂಡವನ್ನು ಸುರಕ್ಷಿತ ಮೊತ್ತ ತಲುಪಿಸಿದ ಸೂರ್ಯ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇದೇ ವೇಳೆ ಭಾರತ ಪರ ಟಿ20ಐಗಳಲ್ಲಿ ಅತಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದ ವಿರಾಟ್‌ ಕೊಹ್ಲಿಯ ದಾಖಲೆ ಮುರಿರು. ಕೊಹ್ಲಿ 124 ಪಂದ್ಯಗಳನ್ನಾಡಿ 16 ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಇದೀಗ ಸೂರ್ಯಕುಮಾರ್‌ ಕೇವಲ 105* ಪಂದ್ಯಗಳಿಂದ 17* ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

ಒಟ್ಟಾರೆಯಾಗಿ ವಿಶ್ವ ಕ್ರಿಕೆಟ್‌ನಲ್ಲಿ ಸೂರ್ಯಕುಮಾರ್‌ ಮೂರನೇ ಸ್ಥಾನದಲ್ಲಿದ್ದಾರೆ. ಸಾರ್ವಕಾಲಿಕ ಪಟ್ಟಿಯಲ್ಲಿ ಮಲೇಷ್ಯಾದ ವೀರಂದೀಪ್ ಸಿಂಗ್(22) ಮತ್ತು ಜಿಂಬಾಬ್ವೆಯ ಸಿಕಂದರ್ ರಾಜಾ(19) ಮೊದಲೆಡರು ಸ್ಥಾನದಲ್ಲಿದ್ದಾರೆ.

ಯು-ಟರ್ನ್‌ ಹೊಡೆದ ಪಾಕ್‌; ಭಾರತ ವಿರುದ್ಧ ಆಡಲು ನಿರ್ಧಾರ?

ಪಂದ್ಯದಲ್ಲಿ ಟಾಸ್‌ ಸೋತು ಬ್ಯಾಟಿಂಗ್‌ಗಿಳಿದ ಭಾರತ 20 ಓವರಲ್ಲಿ 9 ವಿಕೆಟ್‌ಗೆ 161 ರನ್‌ ಕಲೆಹಾಕಿತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಅಮೆರಿಕ 20 ಓವರಲ್ಲಿ ತಂಡ 8 ವಿಕೆಟ್‌ ನಷ್ಟಕ್ಕೆ 132 ರನ್‌ ಗಳಿಸಿ ಸೋಲಿಗೆ ಶರಣಾಯಿತು. ಭಾರತ ಪರ ಅರ್ಶ್‌ದೀಪ್‌, ಸಿರಾಜ್‌, ಅಕ್ಷರ್‌ ತಲಾ 2 ವಿಕೆಟ್‌ ಕಿತ್ತರು.

ಭಾರತ ಪರ ಟಿ20ಐಗಳಲ್ಲಿ ಅತಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿಗಳು

ಸೂರ್ಯಕುಮಾರ್ ಯಾದವ್-17

ವಿರಾಟ್ ಕೊಹ್ಲಿ-16

ರೋಹಿತ್ ಶರ್ಮಾ-14

ಅಕ್ಷರ್ ಪಟೇಲ್-8

ಟಿ20ಐಗಳಲ್ಲಿ ಅತಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿಗಳು

ವೀರಂದೀಪ್ ಸಿಂಗ್- 22

ಸಿಕಂದರ್ ರಜಾ- 19

ಸೂರ್ಯಕುಮಾರ್ ಯಾದವ್-17

ವಿರಾಟ್ ಕೊಹ್ಲಿ-16

ಸಾಮಿ ಸೊಹೈಲ್- 16