ಕ್ಯಾನ್‌ಬೆರಾ: ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್(Suryakumar Yadav) ಅವರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 150 ಸಿಕ್ಸರ್‌ಗಳ ಎಲೈಟ್ ಪಟ್ಟಿ ಸೇರಿದ್ದಾರೆ. ಆಸ್ಟ್ರೇಲಿಯಾ(IND vs AUS) ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಎರಡು ಸಿಕ್ಸರ್ ಬಾರಿಸುತ್ತಿದ್ದಂತೆ ಅವರು 150 ಸಿಕ್ಸರ್‌ಗಳ ಮೈಲುಗಲ್ಲು ತಲುಪಿದರು. ಈ ಸಾಧನೆ ಮಾಡಿದ ವಿಶ್ವದ 5ನೇ ಹಾಗೂ ಎರಡನೇ ಭಾರತೀಯ ಎಂಬ ಹಿರಿಮೆಗೆ ಪಾತ್ರರಾದರು.
ಅತ್ಯಧಿಕ ಸಿಕ್ಸರ್ ದಾಖಲೆ ರೋಹಿತ್ ಶರ್ಮ ಹೆಸರಿನಲ್ಲಿದೆ. ರೋಹಿತ್ 205 ಸಿಕ್ಸರ್ ಬಾರಿಸಿದ್ದಾರೆ. ಈ ದಾಖಲೆ ಮುರಿಯಲು ಸೂರ್ಯಕುಮಾರ್‌ಗೆ ಇನ್ನೂ 56 ಸಿಕ್ಸರ್‌ಗಳ ಅಗತ್ಯವಿದೆ. ರೋಹಿತ್ ನಿವೃತ್ತಿ ಹೇಳಿರುವ ಕಾರಣ ಸೂರ್ಯ ಮುಂದೆ ಅವಕಾಶವಿದೆ.
ಮಳೆಯಿಂದ ಪಂದ್ಯ ಸ್ಥಗಿತ
ಮನುಕಾ ಓವಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ 9.4 ಓವರ್‌ಗೆ ಒಂದು ವಿಕೆಟ್ ಕಳೆದುಕೊಂಡು 97 ರನ್ ಗಳಿಸಿದೆ. ಸದ್ಯ ಪಂದ್ಯ ಮಳೆಯಿಂದ ಪಂದ್ಯ ಸ್ಥಗಿತಗೊಂಡಿದೆ. ಸೂರ್ಯಕುಮಾರ್ ಮತ್ತು ಗಿಲ್ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಸೂರ್ಯ 24 ಎಸೆತಗಳಲ್ಲಿ 39, ಶುಭಮನ್ ಗಿಲ್ 37 ರನ್ ಗಳಿಸಿದ್ದಾರೆ.
ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 150+ ಸಿಕ್ಸರ್‌ಗಳು
ರೋಹಿತ್ ಶರ್ಮಾ-205
ಮುಹಮ್ಮದ್ ವಸೀಮ್-187
ಮಾರ್ಟಿನ್ ಗುಪ್ಟಿಲ್-173
ಜೋಸ್ ಬಟ್ಲರ್-172
ಸೂರ್ಯಕುಮಾರ್ ಯಾದವ್-150 *
ಇದನ್ನೂ ಓದಿ ಈ ಆಟಗಾರನಿಂದ ಟಿ20ಐ ನಾಯಕತ್ವ ಕಳೆದುಕೊಳ್ಳುವ ಭಯ ಶುರುವಾಗಿದೆ-ಸೂರ್ಯಕುಮಾರ್!
ಭಾರತ ಆಡುವ ಬಳಗ
ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮ, ಸಂಜು ಸ್ಯಾಮ್ಸನ್ (ವಿ.ಕೀ.), ಶಿವಂ ದುಬೆ, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ.