ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸೈಯದ್ ಮುಷ್ತಾಕ್ ಅಲಿ ಟ್ರೋಫಿ; ಮುಂಬೈ ತಂಡದಲ್ಲಿ ಸ್ಥಾನ ಪಡೆದ ಸೂರ್ಯಕುಮಾರ್ ಯಾದವ್

Syed Mushtaq Ali Trophy: ಸೂರ್ಯಕುಮಾರ್‌ ಉಪಸ್ಥಿತಿಯು 2024–25ರ ಆವೃತ್ತಿಯನ್ನು ಗೆದ್ದಿರುವ ಹಾಲಿ ಚಾಂಪಿಯನ್ ಮುಂಬೈ ತಂಡವನ್ನು ಮತ್ತಷ್ಟು ಬಲಪಡಿಸುತ್ತದೆ. ಸೂರ್ಯಕುಮಾರ್ ಜೊತೆಗೆ, ತಂಡವು ಶಿವಂ ದುಬೆ, ಅಜಿಂಕ್ಯ ರಹಾನೆ, ಸರ್ಫರಾಜ್ ಖಾನ್ ಮತ್ತು ಆಯುಷ್ ಮ್ಹಾತ್ರೆ ಅವರಂತಹ ಅನುಭವಿ ಆಟಗಾರರನ್ನು ಒಳಗೊಂಡಿದ್ದು, ತಂಡಕ್ಕೆ ಹೆಚ್ಚಿನ ಬಲ ನೀಡಿದೆ.

ಸೂರ್ಯಕುಮಾರ್‌ ಯಾದವ್‌

ಮುಂಬಯಿ, ನ.22: ಮುಂಬರುವ ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ(Syed Mushtaq Ali Trophy)ಗಾಗಿ ಮುಂಬೈ ತಂಡದಲ್ಲಿ ಸೂರ್ಯಕುಮಾರ್ ಯಾದವ್(Suryakumar Yadav) ಅವರನ್ನು ಸೇರಿಸಿಕೊಳ್ಳಲಾಗಿದೆ. 17 ಸದಸ್ಯರ ಬಲಿಷ್ಠ ತಂಡವನ್ನು ಬೌಲಿಂಗ್‌ ಆಲ್‌ರೌಂಡರ್‌ ಶಾರ್ದೂಲ್‌ ಠಾಕೂರ್‌(Shardul Thakur) ಮುನ್ನಡೆಸಲಿದ್ದಾರೆ. ಹಿರಿಯ ಆಟಗಾರ ಅಜಿಂಕ್ಯ ರಹಾನೆ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

2025–26ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಆವೃತ್ತಿಯು ನವೆಂಬರ್ 26 ರಂದು ಪ್ರಾರಂಭವಾಗಲಿದ್ದು, ಮುಂಬೈ ತಂಡವು ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಲೀಗ್ ಹಂತದ ಪಂದ್ಯಗಳನ್ನು ಆಡಲಿದೆ.

ಅಂತರರಾಷ್ಟ್ರೀಯ ಟಿ20ಗಳಲ್ಲಿ ಫಾರ್ಮ್ ಕಳೆದುಕೊಂಡಿರುವ ಸೂರ್ಯಕುಮಾರ್‌ಗೆ ದೇಶೀಯ ಟಿ20 ಕ್ರಿಕೆಟ್‌ ನಿರ್ಣಾಯಕ ಪಾತ್ರವಹಿಸಲಿದೆ. 2025 ರಲ್ಲಿ, 15 ಟಿ20 ಇನ್ನಿಂಗ್ಸ್‌ಗಳಲ್ಲಿ ಅವರು ಕೇವಲ 184 ರನ್‌ಗಳನ್ನು ಗಳಿಸಿದ್ದಾರೆ. ಡಿಸೆಂಬರ್ 9 ರಿಂದ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ ಐದು ಪಂದ್ಯಗಳ T20I ಸರಣಿಯನ್ನು ಆಯೋಜಿಸಲಿದೆ. ಈ ಸರಣಿಗೂ ಮುನ್ನ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಡುವ ಮೂಲಕ, ಸೂರ್ಯಕುಮಾರ್ ತನ್ನ ಹಳೆಯ ಲಯವನ್ನು ಮರಳಿ ಪಡೆಯಬಹುದು. ಜತೆಗೆ ಆತ್ಮವಿಶ್ವಾಸವನ್ನು ಹೆಚ್ಚಿಸಬಹುದು.

ಇದನ್ನೂ ಓದಿ SMAT 2025-26: ಸಯ್ಯದ್​ ಮುಷ್ತಾಕ್​ ಅಲಿ ಟ್ರೋಫಿಗೆ ಕರ್ನಾಟಕ ತಂಡ ಪ್ರಕಟ; ಪಡಿಕ್ಕಲ್‌, ನಾಯರ್ ಕಮ್‌ಬ್ಯಾಕ್‌

ಸೂರ್ಯಕುಮಾರ್‌ ಉಪಸ್ಥಿತಿಯು 2024–25ರ ಆವೃತ್ತಿಯನ್ನು ಗೆದ್ದಿರುವ ಹಾಲಿ ಚಾಂಪಿಯನ್ ಮುಂಬೈ ತಂಡವನ್ನು ಮತ್ತಷ್ಟು ಬಲಪಡಿಸುತ್ತದೆ. ಸೂರ್ಯಕುಮಾರ್ ಜೊತೆಗೆ, ತಂಡವು ಶಿವಂ ದುಬೆ, ಅಜಿಂಕ್ಯ ರಹಾನೆ, ಸರ್ಫರಾಜ್ ಖಾನ್ ಮತ್ತು ಆಯುಷ್ ಮ್ಹಾತ್ರೆ ಅವರಂತಹ ಅನುಭವಿ ಆಟಗಾರರನ್ನು ಒಳಗೊಂಡಿದ್ದು, ತಂಡಕ್ಕೆ ಹೆಚ್ಚಿನ ಬಲ ನೀಡಿದೆ.

ಮುಂಬೈ ತಂಡ

ಶಾರ್ದೂಲ್ ಠಾಕೂರ್ (ನಾಯಕ), ಅಜಿಂಕ್ಯ ರಹಾನೆ, ಆಯುಷ್ ಮ್ಹಾತ್ರೆ, ಅಂಗ್‌ಕ್ರಿಶ್ ರಘುವಂಶಿ (ವಿ.ಕೀ.), ಸೂರ್ಯಕುಮಾರ್ ಯಾದವ್, ಸಿದ್ಧೇಶ್ ಲಾಡ್, ಸರ್ಫರಾಜ್ ಖಾನ್, ಶಿವಂ ದುಬೆ, ಸಾಯಿರಾಜ್ ಪಾಟೀಲ್, ಮುಶೀರ್ ಖಾನ್, ಸೂರ್ಯಾಂಶ್ ಶೆಡ್ಗೆ, ಅಥರ್ವ ಅಂಕೋಲೇಕರ್, ತನುಷ್ ಕೋಟ್ಯಾನ್, ಶಮ್ಸ್ ಇ ಹರ್ಫಾ ಮುಲಾನಿ, ಶಮ್ಸ್ ಇ ಹರ್ಫಾನ್ ಮತ್ತು ಶಮ್ಸ್ ಮುಲಾನಿ ತಮೋರ್ (ವಿ.ಕೀ.).