ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

SMAT 2025-26: ಸಯ್ಯದ್​ ಮುಷ್ತಾಕ್​ ಅಲಿ ಟ್ರೋಫಿಗೆ ಕರ್ನಾಟಕ ತಂಡ ಪ್ರಕಟ; ಪಡಿಕ್ಕಲ್‌, ನಾಯರ್ ಕಮ್‌ಬ್ಯಾಕ್‌

ನವೆಂಬರ್​ 26ರಿಂದ ಅಹಮದಾಬಾದ್​ನಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಕರ್ನಾಟಕವು ತನ್ನ ಮೊದಲ ಪಂದ್ಯದಲ್ಲಿ ಉತ್ತರಾಖಂಡ ಎದುರು ಆಡಲಿದೆ. ಕರ್ನಾಟಕ ತಂಡ 'ಡಿ' ಗುಂಪಿನಲ್ಲಿ ಸ್ಥಾನ ಪಡೆದಿದೆ. ಉತ್ತರಾಖಂಡ, ರಾಜಸ್ಥಾನ, ತಮಿಳುನಾಡು, ದೆಹಲಿ, ಸೌರಾಷ್ಟ್ರ ಮತ್ತು ತ್ರಿಪುರ ತಂಡಗಳು ಈ ಗುಂಪಿನಲ್ಲಿವೆ.

ಮುಷ್ತಾಕ್​ ಅಲಿ ಟ್ರೋಫಿಗೆ ಕರ್ನಾಟಕ ತಂಡ ಪ್ರಕಟ; ಅಗರ್ವಾಲ್‌ ನಾಯಕ

karnataka team -

Abhilash BC
Abhilash BC Nov 21, 2025 10:09 AM

ಬೆಂಗಳೂರು: ಮುಂಬರುವ ಸಯ್ಯದ್​ ಮುಷ್ತಾಕ್​ ಅಲಿ ಟ್ರೋಫಿ(SMAT 2025-26) ದೇಶೀಯ ಟಿ20 ಟೂರ್ನಿಗೆ 16 ಆಟಗಾರರ ಕರ್ನಾಟಕ ತಂಡ ಪ್ರಕಟಗೊಂಡಿದೆ. ತಂಡವನ್ನು ಮಯಾಂಕ್​ ಅಗರ್ವಾಲ್ ಮುನ್ನಡೆಸಲಿದ್ದು ವೇಗಿ ಶ್ರೀವತ್ಸ ಆರ್​. ಆಚಾರ್(Shreevathsa R. Acharya), ಯುವ ಎಡಗೈ ಸ್ಪಿನ್ನರ್​ ಶಿಖರ್​ ಶೆಟ್ಟಿ(Shikhar Shetty) ತಂಡದಲ್ಲಿ ಸ್ಥಾನ ಪಡೆದಿರುವ ಹೊಸಮುಖವಾಗಿದ್ದಾರೆ.

ಕರುಣ್​ ನಾಯರ್​ 3 ವರ್ಷಗಳ ಬಳಿಕ ರಾಜ್ಯ ಟಿ20 ತಂಡಕ್ಕೂ ಮರಳಿದ್ದಾರೆ. ಎಡಗೈ ಬ್ಯಾಟರ್​ ದೇವದತ್​ ಪಡಿಕ್ಕಲ್​, ಟಿ20 ತಂಡದಲ್ಲೂ ಸ್ಥಾನ ಪಡೆದಿದ್ದಾರೆ. ಆದರೆ ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್​ ಪಂದ್ಯ ನವೆಂಬರ್​ 26ರವರೆಗೂ ನಿಗದಿಯಾಗಿರುವುದರಿಂದ ಅವರು ಆರಂಭಿಕ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ ಇದೆ. ಕರುಣ್ ಅವರು ರಣಜಿ ಟ್ರೋಫಿ ಟೂರ್ನಿಯ ಮೊದಲ ಹಂತದ ಐದು ಪಂದ್ಯಗಳಲ್ಲಿ ಒಟ್ಟು 602 ರನ್‌ ಪೇರಿಸಿದ್ದರು.

ನವೆಂಬರ್​ 26ರಿಂದ ಅಹಮದಾಬಾದ್​ನಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಕರ್ನಾಟಕವು ತನ್ನ ಮೊದಲ ಪಂದ್ಯದಲ್ಲಿ ಉತ್ತರಾಖಂಡ ಎದುರು ಆಡಲಿದೆ. ಕರ್ನಾಟಕ ತಂಡ 'ಡಿ' ಗುಂಪಿನಲ್ಲಿ ಸ್ಥಾನ ಪಡೆದಿದೆ. ಉತ್ತರಾಖಂಡ, ರಾಜಸ್ಥಾನ, ತಮಿಳುನಾಡು, ದೆಹಲಿ, ಸೌರಾಷ್ಟ್ರ ಮತ್ತು ತ್ರಿಪುರ ತಂಡಗಳು ಈ ಗುಂಪಿನಲ್ಲಿವೆ.

ಕೆಎಲ್​ ಶ್ರೀಜಿತ್​ ತಂಡದ ಮೊದಲ ಆಯ್ಕೆಯ ವಿಕೆಟ್​ ಕೀಪರ್​ ಆಗಿ ಮುಂದುವರಿದಿದ್ದರೆ, ಅನುಭವಿ ಬಿಆರ್​ ಶರತ್​ 2ನೇ ಕೀಪರ್​ ಆಗಿ ಸ್ಥಾನ ಸಂಪಾದಿಸಿದ್ದಾರೆ. ವೈಶಾಕ್​ ವಿಜಯಕುಮಾರ್​, ವಿದ್ವತ್​ ಕಾವೇರಪ್ಪ, ವಿದ್ಯಾಧರ್​ ಪಾಟೀಲ್​ ಜತೆಗೆ 23 ವರ್ಷದ ಶ್ರೀವತ್ಸ ಗೋಸ್ವಾಮಿ ತಂಡದಲ್ಲಿರುವ 4ನೇ ವೇಗಿಯಾಗಿದ್ದಾರೆ. ಸ್ಪಿನ್​ ಬೌಲಿಂಗ್​ ವಿಭಾಗದಲ್ಲಿ ಶ್ರೇಯಸ್​ ಗೋಪಾಲ್​, ಶಿಖರ್​ ಶೆಟ್ಟಿಗೆ ಶುಭಾಂಗ್​ ಹೆಗ್ಡೆ ಮತ್ತು ಪ್ರವಿಣ್​ ದುಬೆ ಸಾಥ್​ ನೀಡಲಿದ್ದಾರೆ.

ಕರ್ನಾಟಕ ಟಿ20 ತಂಡ

ಮಯಾಂಕ್​ ಅಗರ್ವಾಲ್​ (ನಾಯಕ), ದೇವದತ್​ ಪಡಿಕ್ಕಲ್​, ಮ್ಯಾಕ್ನೀಲ್​ ನೋರೋನ್ಹಾ, ಕೆಎಲ್​ ಶ್ರೀಜಿತ್​ (ವಿ.ಕೀ), ಕರುಣ್​ ನಾಯರ್​, ಆರ್​. ಸ್ಮರಣ್​, ಅಭಿನವ್​ ಮನೋಹರ್​, ಶ್ರೇಯಸ್​ ಗೋಪಾಲ್​, ಶಿಖರ್​ ಶೆಟ್ಟಿ, ವೈಶಾಕ್​ ವಿಜಯಕುಮಾರ್​, ವಿದ್ವತ್​ ಕಾವೇರಪ್ಪ, ವಿದ್ಯಾಧರ್​ ಪಾಟೀಲ್​, ಶ್ರೀವತ್ಸ ಆರ್​. ಆಚಾರ್​, ಶುಭಾಂಗ್​ ಹೆಗ್ಡೆ, ಪ್ರವಿಣ್​ ದುಬೆ, ಬಿಆರ್​ ಶರತ್​ (ವಿ.ಕೀ).

ಇದನ್ನೂ ಓದಿ IND vs SA: ಊಟದ ಹೊತ್ತಿಗೆ ಚಹಾ!; ಗುವಾಹಟಿ ಟೆಸ್ಟ್‌ ಸಮಯದಲ್ಲಿ ಬದಲಾವಣೆ

ಕರ್ನಾಟಕದ ಪಂದ್ಯಗಳು

ನ.26, ಎದುರಾಳಿ ಉತ್ತರಾಖಂಡ, ಪಂದ್ಯ ಆರಂಭ: ಬೆಳಗ್ಗೆ 9.00

ನ.28, ಎದುರಾಳಿ ಜಾರ್ಖಂಡ್, ಪಂದ್ಯ ಆರಂಭ;​ ಮಧ್ಯಾಹ್ನ 3.30

ನ. 30, ಎದುರಾಳಿ ರಾಜಸ್ಥಾನ, ಪಂದ್ಯ ಆರಂಭ; ಬೆಳಗ್ಗೆ 11.00

ಡಿ. 2, ಎದುರಾಳಿ ತಮಿಳುನಾಡು; ಪಂದ್ಯ ಆರಂಭ; ಬೆಳಗ್ಗೆ 9.00

ಡಿ. 4, ಎದುರಾಳಿ ದೆಹಲಿ; ಪಂದ್ಯ ಆರಂಭ; ಮಧ್ಯಾಹ್ನ 1.30

ಡಿ. 6, ಎದುರಾಳಿ ಸೌರಾಷ್ಟ್ರ, ಪಂದ್ಯ ಆರಂಭ; ಬೆಳಗ್ಗೆ 11.00

ಡಿ.8, ಎದುರಾಳಿ ತ್ರಿಪುರ, ಪಂದ್ಯ ಆರಂಭ; ಮಧ್ಯಾಹ್ನ 1.30

ಪಂದ್ಯದ ತಾಣ; ಮೋದಿ ಸ್ಟೇಡಿಯಂ, ಅಹಮದಾಬಾದ್​