ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅರ್ಧಶತಕ ಬಾರಿಸಿ ಧೋನಿಗೆ ಕೃತಜ್ಞತೆ ಸಲ್ಲಿಸಿದ ಶಿವಂ ದುಬೆ

T20 World Cup 2026: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬುಧವಾರ ನಡೆದಿದ್ದ ಪಂದ್ಯದಲ್ಲಿ ಶಿವಂ ದುಬೆ ಅವರ ಬ್ಯಾಟಿಂಗ್‌ ಬಲದಿಂದ ಭಾರತ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 193 ರನ್ ಗಳಿಸಿತು. ಗುರಿ ಬೆನ್ನಟ್ಟಿದ ನೆದರ್ಲೆಂಡ್ಸ್ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ ಗಳಿಗೆ 176 ರನ್‌ ಗಳಿಸಲಷ್ಟೇ ಶಕ್ತವಾಯಿತು. ಸೂರ್ಯಕುಮಾರ್ ಯಾದವ್ ಪಡೆ 17 ರನ್‌ಗಳ ಅಂತರದಿಂದ ಪಂದ್ಯ ಗೆದ್ದಿತು.

Shivam Dube

ಅಹಮದಾಬಾದ್‌, ಫೆ.19: ಬುಧವಾರ ನೆಡೆದಿದ್ದ ನೆದರ್ಲ್ಯಾಂಡ್ಸ್ ವಿರುದ್ಧದ ಟಿ20 ವಿಶ್ವಕಪ್ 2026(T20 World Cup 2026) ರ ಪಂದ್ಯದಲ್ಲಿ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶಿವಂ ದುಬೆ(Shivam Dube) ಉತ್ತಮ ಪ್ರದರ್ಶನ ನೀಡಿದರು. ಕೇವಲ 31 ಎಸೆತಗಳಲ್ಲಿ 66 ರನ್ ಗಳಿಸುವ ಮೂಲಕ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಪಂದ್ಯದ ಬಳಿಕ ಅವರು ಮಾಜಿ ಸಿಎಸ್‌ಕೆ ನಾಯಕ ಎಂಎಸ್ ಧೋನಿ(MS Dhoni)ಗೆ ಕೃತಜ್ಞತೆ ಸಲ್ಲಿಸಿದರು.

ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ನಂತರ ಮಾತನಾಡಿದ ದುಬೆ, ಐಪಿಎಲ್‌ನಲ್ಲಿ ಶಾರ್ಟ್ ಬಾಲ್ ವಿರುದ್ಧದ ತನ್ನ ಹಿಂದಿನ ಹೋರಾಟಗಳನ್ನು ನೆನಪಿಸಿಕೊಂಡರು. ಒಂದು ಕಾಲದಲ್ಲಿ ತನಗೆ ಬೌನ್ಸರ್‌ಗಳ ವಿರುದ್ಧ ಸರಿಯಾಗಿ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ಒಪ್ಪಿಕೊಂಡರು. ಆದರೆ ಇಂದು ನಾನು ಶಾರ್ಟ್ ಬಾಲ್ ವಿರುದ್ಧ ಉತ್ತಮವಾಗಿ ಆಡುತ್ತಿದ್ದೇನೆ ಎಂದರೆ ಅದು ಧೋನಿ ನೀಡಿದ ಸಲಹೆ ಎಂದರು.

"ನಾನು ಐಪಿಎಲ್‌ಗೆ ಬಂದಾಗ ಶಾರ್ಟ್ ಬಾಲ್‌ಗಳ ವಿರುದ್ಧ ಸ್ವಲ್ಪ ಕಷ್ಟಪಡುತ್ತಿದ್ದೆ. ಆ ಸಮಯದಲ್ಲಿ ನಾನು ಅವುಗಳನ್ನು ಅಷ್ಟು ಸ್ಪಷ್ಟವಾಗಿ ಹೊಡೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ ನಂತರ ನಾನು ಈ ಮಟ್ಟದಲ್ಲಿ ಪ್ರಾಬಲ್ಯ ಸಾಧಿಸಬೇಕಾದರೆ ಮತ್ತು ನನಗೆ ಆ ಶಕ್ತಿ ಇದೆ ಎಂದು ತಿಳಿದದ್ದು ಧೋನಿ ನೀಡಿದ ಸಲಹೆ. ಶಾರ್ಟ್‌ ಬೌಲ್‌ಗಳಲ್ಲಿ ಸಿಕ್ಸ್ ಹೊಡೆಯಬೇಕಾಗಿಲ್ಲ, ಬೌಂಡರಿ ಹೊಡೆಯಬಹುದು ಅಥವಾ ಸಿಂಗಲ್ ತೆಗೆದುಕೊಳ್ಳಬಹುದು ಎಂದು ಮಹಿ ಭಾಯ್ ನನಗೆ ಹೇಳಿದ್ದರು. ಇದು ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ" ಎಂದು ದುಬೆ ಹೇಳಿದರು. 'ಕ್ಯಾಪ್ಟನ್ ಕೂಲ್' ಅವರ ಕೆಲವು ಸಲಹೆಗಳು ಇಂದು ದುಬೆ ಸಮೃದ್ಧ ಆಲ್‌ರೌಂಡರ್ ಆಗಲು ಸಂಪೂರ್ಣ ತಿರುವು ನೀಡಿತು ಎನ್ನಬಹುದು.

ಟಿ20 ವಿಶ್ವಕಪ್ ಸೂಪರ್-8 ಪಂದ್ಯಗಳ ವೇಳಾಪಟ್ಟಿ, ದಿನಾಂಕ, ತಾಣಗಳ ಮಾಹಿತಿ

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬುಧವಾರ ನಡೆದಿದ್ದ ಪಂದ್ಯದಲ್ಲಿ ಶಿವಂ ದುಬೆ ಅವರ ಬ್ಯಾಟಿಂಗ್‌ ಬಲದಿಂದ ಭಾರತ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 193 ರನ್ ಗಳಿಸಿತು. ಗುರಿ ಬೆನ್ನಟ್ಟಿದ ನೆದರ್ಲೆಂಡ್ಸ್ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ ಗಳಿಗೆ 176 ರನ್‌ ಗಳಿಸಲಷ್ಟೇ ಶಕ್ತವಾಯಿತು. ಸೂರ್ಯಕುಮಾರ್ ಯಾದವ್ ಪಡೆ 17 ರನ್‌ಗಳ ಅಂತರದಿಂದ ಪಂದ್ಯ ಗೆದ್ದಿತು.



ಭಾರತ ಇನ್ನು ಸೂಪರ್‌ 8 ಪಂದ್ಯಕ್ಕೆ ಸಜ್ಜಾಗುತ್ತಿದ್ದು, ತನ್ನ ಮೊದಲನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಸವಾಲನ್ನು ಎದುರಿಸಲಿದೆ. ಈ ಪಂದ್ಯ ಫೆ. 22ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ನಂತರ ಫೆ. 26ರಂದು ಚೆನ್ನೈಯಲ್ಲಿ ಜಿಂಬಾಬ್ವೆ ವಿರುದ್ಧ ಸೆಣಸಲಿದೆ. ತನ್ನ ಕೊನೆಯ ಪಂದ್ಯದಲ್ಲಿ ಮಾ.1ರಂದು ಕೋಲ್ಕತ್ತದ ಈಡನ್ ಗಾರ್ಡನ್ ಮೈದಾನದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಡಲಿದೆ.