ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ ಹವಾಮಾನ ಹೇಗಿದೆ?

Ahmedabad weather forecast: ಶನಿವಾರ ಅಹಮದಾಬಾದ್‌ನಲ್ಲಿ ವಿಪರೀತ ಬಿಸಿಲಿನ ವಾತಾವರಣ ಇದ್ದ ಕಾರಣ ರಾತ್ರಿಯಾಗುತ್ತಿದ್ದಂತೆ ಇಬ್ಬನಿಯು ಗಮನಾರ್ಹ ಅಂಶವಾಗುವ ಸಾಧ್ಯತೆ ಇದ್ದು, ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲರ್‌ಗಳಿಗೆ ಕಠಿಣ ಸವಾಲು ಎದುರಾಗಬಹುದು. ಹೀಗಾಗಿ ಟಾಸ್‌ ಕೂಡ ನಿರ್ಣಾಯಕ. ಟಾಸ್‌ ಗೆದ್ದ ತಂಡ ಮೊದಲು ಬ್ಯಾಟಿಂಗ್‌ ನಡೆಸಬಹುದು.

Suryakumar Yadav and Mitchell Santner

ಅಹಮದಾಬಾದ್‌, ಮಾ.8: ದೇಶದ ಕೆಲ ರಾಜ್ಯಗಳಲ್ಲಿ ಮೋಡ ಕವಿದ ವಾತಾವರಣವಿದೆ. ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲೆಂಡ್‌(IND vs NZ) ನಡುವೆ ಟಿ20 ವಿಶ್ವಕಪ್‌ ಫೈನಲ್‌(T20 World Cup final) ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೆ(Ahmedabad weather forecast) ಮಳೆ ಭೀತಿ ಇದೆಯೇ ಎಂಬ ಮಾಹಿತಿ ಇಲ್ಲಿದೆ.

ವಿಶ್ವದ ಅಗ್ರ ಶ್ರೇಯಾಂಕಿತ ಟಿ20 ತಂಡವಾಗಿರುವ ಭಾರತ, ಇತಿಹಾಸವನ್ನು ತನ್ನ ಕಣ್ಣ ಮುಂದೆ ಇಟ್ಟುಕೊಂಡು ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಮೊದಲ ತಂಡವಾಗುವ ಗುರಿಯನ್ನು ಹೊಂದಿದೆ. ಸೂರ್ಯಕುಮಾರ್ ಯಾದವ್ ಅವರ ತಂಡವನ್ನು ಬೆಂಬಲಿಸಲು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ 100,000 ಕ್ಕೂ ಹೆಚ್ಚು ಅಭಿಮಾನಿಗಳು ಆಗಮಿಸಲಿದ್ದಾರೆ.

ಮಳೆ ಭೀತಿ ಇಲ್ಲ

ಇಂದು ರಾತ್ರಿ ನಡೆಯಲಿರುವ ಫೈನಲ್ ಪಂದ್ಯಕ್ಕೆ ಯಾವುದೇ ಮಳೆ ಸಾಧ್ಯತೆ ಇಲ್ಲ ಎಂದು ಹವಾಮಾನ ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ. ಆದರೆ ಬಿಸಿ ತಾಪಮಾನ ಇರಲಿದೆ. ಅಕ್ಯುವೆದರ್ ಪ್ರಕಾರ, ಅಹಮದಾಬಾದ್‌ನಲ್ಲಿ ಸಂಜೆ 6 ಗಂಟೆಗೆ 39 ಡಿಗ್ರಿ ತಲುಪುವ ಮುನ್ಸೂಚನೆ ಇದೆ. ಮಧ್ಯರಾತ್ರಿಯ ನಂತರ ತಾಪಮಾನ ಕ್ರಮೇಣ ಗರಿಷ್ಠ 20 ಡಿಗ್ರಿಗಳಿಗೆ ತಣ್ಣಗಾಗುತ್ತದೆ. ಮೊದಲ ಇನಿಂಗ್ಸ್‌ನ ಪವರ್‌ಪ್ಲೇ ಸಮಯದಲ್ಲಿ ಗಂಟೆಗೆ 20 ಕಿ.ಮೀ. ವೇಗದ ಗಾಳಿ ಬೀಸುವುದು ಪರಿಸ್ಥಿತಿಯ ಮೇಲೆ ಪ್ರಭಾವ ಬೀರಬಹುದು.

ಶನಿವಾರ ಅಹಮದಾಬಾದ್‌ನಲ್ಲಿ ವಿಪರೀತ ಬಿಸಿಲಿನ ವಾತಾವರಣ ಇದ್ದ ಕಾರಣ ರಾತ್ರಿಯಾಗುತ್ತಿದ್ದಂತೆ ಇಬ್ಬನಿಯು ಗಮನಾರ್ಹ ಅಂಶವಾಗುವ ಸಾಧ್ಯತೆ ಇದ್ದು, ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲರ್‌ಗಳಿಗೆ ಕಠಿಣ ಸವಾಲು ಎದುರಾಗಬಹುದು. ಹೀಗಾಗಿ ಟಾಸ್‌ ಕೂಡ ನಿರ್ಣಾಯಕ. ಟಾಸ್‌ ಗೆದ್ದ ತಂಡ ಮೊದಲು ಬ್ಯಾಟಿಂಗ್‌ ನಡೆಸಬಹುದು.

T20 world cup final 2026: ಫೈನಲ್‌ ಪಂದ್ಯಕ್ಕೆ ಮಳೆ ಬಂದರೆ, ಟೈಗೊಂಡರೆ ಏನು ಗತಿ? ನಿಯಮ ಏನು ಹೆಳುತ್ತದೆ?

ಒಂದೊಮ್ಮೆ ಅನಿರೀಕ್ಷಿತವಾಗಿ ಮಳೆ ಅಥವಾ ಇನ್ನಿತರ ಕಾರಣದಿಂದ ಪಂದ್ಯಕ್ಕೆ ಅಡ್ಡಿಯಾದರೆ ಫೈನಲ್‌ ಪಂದ್ಯಕ್ಕೆ ಮೀಸಲು ದಿನವೂ ಇದೆ. ಅಲ್ಲೂ ಮಳೆ ಸುರಿದು ಪಂದ್ಯ ರದ್ದಾದರೆ ಜಂಟಿ ವಿಜೇತರನ್ನು ನಿರ್ಧರಿಸಲಾಗುತ್ತದೆ.

ಪ್ರಸಾರ ಮಾಹಿತಿ

ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಫೈನಲ್‌ನಲ್ಲಿ ಭಾರತ ತಂಡವು ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಈ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ ಮತ್ತು ಭಾರತದಲ್ಲಿ ಜಿಯೋಹಾಟ್‌ಸ್ಟಾರ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.

ಸಂಭಾವ್ಯ ತಂಡಗಳು

ಭಾರತ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಶಿವಂ ದುಬೆ, ವರುಣ್ ಚಕ್ರವರ್ತಿ / ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಅರ್ಶ್ದೀಪ್ ಸಿಂಗ್.

ನ್ಯೂಜಿಲೆಂಡ್‌: ಟಿಮ್ ಸೀಫರ್ಟ್ (ವಿ.ಕೀ), ಫಿನ್ ಅಲೆನ್, ರಾಚಿನ್ ರವೀಂದ್ರ, ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಡ್ಯಾರಿಲ್ ಮಿಚೆಲ್, ಜಾಕೋಬ್ ಡಫಿ, ಮಿಚೆಲ್ ಸ್ಯಾಂಟ್ನರ್ (ನಾಯಕ), ಕೋಲ್ ಮೆಕ್‌ಕಾಂಚಿ, ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್.