ಬೆಂಗಳೂರು: ಕರ್ನಾಟಕ ರಾಜ್ಯ ಟೇಕ್ವಾಂಡೋ ಸಂಸ್ಥೆಯಿಂದ ಚಿತ್ರದುರ್ಗದಲ್ಲಿ ನಡೆದ ಮೂರು ದಿನಗಳ 41ನೇ ರಾಜ್ಯ ಮಟ್ಟದ ಸಬ್ ಜೂನಿಯರ್, ಜೂನಿಯರ್, ಸೀನಿಯರ್, 10ನೇ ಕೆಡೆಟ್ ಕ್ಯೋರುಗಿ,14ನೇ ಪುಂಸೆ, 3ನೇ ಪ್ಯಾರಾ ಟೇಕ್ವಾಂಡೋ, 4ನೇ ಎಕ್ಸ್‌ಪೋ ಟೇಕ್ವಾಂಡೋ ಪಂದ್ಯಾವಳಿ ಯಲ್ಲಿ ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆ ಪ್ರಥಮ, ದ್ವಿತೀಯ ಸಮಗ್ರ ಪ್ರಶಸ್ತಿಗಳಿಗೆ ಭಾಜನವಾಗಿವೆ.
14 ಜಿಲ್ಲೆಗಳಿಂದ 450 ಕ್ಕೂ ಹೆಚ್ಚು ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.
ಕರ್ನಾಟಕ ರಾಜ್ಯ ಟೇಕ್ವಾಂಡೋ ಸಂಸ್ಥೆಯ ಅಧ್ಯಕ್ಷರಾದ ತಿರುಮಾಲ್.ಜೆ ಮತ್ತು ಚಿತ್ರದುರ್ಗ ಟೇಕ್ವಾಂಡೋ ಸಂಸ್ಥೆಯ ತರಬೇತದಾರರು, ರಾಜ್ಯಮಟ್ಟದ ಪಂದ್ಯಾವಳಿಯ ಆಯೋಜಕರಾದ ಎಂ.ಸುನೀತಾ ಪ್ರವೀಣ್ ಕುಮಾರ್ ಮತ್ತು ಎಂ.ಅನಿತಾ ಮಾಂತೇಶ್ ನೇತೃತ್ವದಲ್ಲಿ ಪಂದ್ಯಾವಳಿ ಜರುಗಿತು.
ಈ ಪಂದ್ಯಾವಳಿಯಲ್ಲಿ ಸಬ್ ಜೂನಿಯರ್ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ತುಮಕೂರು ಜಿಲ್ಲೆ, ದ್ವಿತೀಯ ಸ್ಥಾನ ಚಿತ್ರದುರ್ಗ ಜಿಲ್ಲೆ, ಸಬ್ ಜೂನಿಯರ್ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನ ಬೆಂಗಳೂರು, ದ್ವಿತೀಯ ಸ್ಥಾನ ತುಮಕೂರು, ಕೆಡೆಟ್ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನ ಬೆಂಗಳೂರು, ದ್ವಿತೀಯ ಸ್ಥಾನ ತುಮಕೂರು, ಕೆಡೆಟ್ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಚಿತ್ರದುರ್ಗ, ದ್ವಿತೀಯ ಸ್ಥಾನ ಬೆಂಗಳೂರು, ಜೂನಿಯರ್ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನ ಚಿತ್ರದುರ್ಗ, ದ್ವಿತೀಯ ಸ್ಥಾನ ಬೆಂಗಳೂರು, ಜೂನಿಯರ್ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಬೆಂಗಳೂರು, ದ್ವಿತೀಯ ಸ್ಥಾನ ತುಮಕೂರು.
ಸೀನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ ತುಮಕೂರು ದ್ವಿತೀಯ ಸ್ಥಾನ ಬೆಂಗಳೂರು ಪಡೆದು ಕೊಂಡಿತು.
ಸಮಗ್ರ ಪ್ರಶಸ್ತಿಯನ್ನು ಪ್ರಥಮ ಸ್ಥಾನ ಚಿತ್ರದುರ್ಗ ಪಡೆದರೆ, ದ್ವಿತೀಯ ಸ್ಥಾನ ತುಮಕೂರು ಜಿಲ್ಲೆಯ ಪಾಲಾಯಿತು.