1658 ದಿನಗಳ ನಂತರ ಗ್ರ್ಯಾಂಡ್ ಸ್ಲ್ಯಾಮ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಒಸಾಕಾ
ವಿಶ್ವದ 3ನೇ ಹಾಗೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ್ತಿ ಗಾಫ್‌ಗೆ ಬಲವಾದ ಸೋಲಿನ ಪೆಟ್ಟು ನೀಡಿರುವ ಕಾರಣ ಒಸಾಕಾ ಕೂಡ ಪ್ರಶಸ್ತಿ ರೇಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 23ನೇ ಶ್ರೇಯಾಂಕದ ಒಸಾಕ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 11ನೇ ಶ್ರೇಯಾಂಕದ ಜೆಕ್ ಗಣರಾಜ್ಯದ ಕರೋಲಿನಾ ಮುಚೋವಾ ಸವಾಲು ಎದುರಿಸಲಿದ್ದಾರೆ.

-

ನ್ಯೂಯಾರ್ಕ್: ಇಲ್ಲಿ ಮಂಗಳವಾರ(ಸೆ.2) ನಡೆದ ಯುಎಸ್ ಓಪನ್(US Open) ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗ ನಾಲ್ಕನೇ ಸುತ್ತಿನ ಪಂದ್ಯದಲ್ಲಿ, ಜಪಾನಿನ ನವೋಮಿ ಒಸಾಕಾ(Naomi Osaka) ಅವರು ಟೂರ್ನಿಯ ಅತ್ಯಂತ ಬಲಿಷ್ಠ ಹಾಗೂ ವಿಶ್ವ ಮೂರನೇ ಶ್ರೇಯಾಂಕಿತೆ ಅಮೆರಿಕದ ಕೊಕೊ ಗಾಫ್(Coco Gauff) ಅವರನ್ನು ನೇರ ಸೆಟ್‌ಗಳಿಂದ ಸೋಲಿಸುವ ಮೂಲಕ ತನ್ನ ಹಳೆಯ ಲಯ ಕಳೆದುಕೊಂಡರು.
ಗಾಫ್ ವಿರುದ್ಧ ಒಸಾಕ 6-3, 6-2 ನೇರ ಸೆಟ್‌ಗಳ ಗೆಲುವು ಸಾಧಿಸಿ ಬರೋಬ್ಬರಿ 1658 ದಿನಗಳ ಬಳಿಕ ಗ್ರ್ಯಾನ್‌ಸ್ಲಾಮ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದರು. ಒಟ್ಟು 4 ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆದ್ದಿರುವ ಒಸಾಕ ಕೊನೆಯ ಬಾರಿಗೆ 2021ರ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದಿದ್ದರು. ಇದಾ ಬಳಿಕ ಗಾಯ ಮತ್ತು ಫಿಟ್ನೆಸ್ ಸಮಸ್ಯೆಯಿಂದ ಅವರು ಕಳಪೆ ಪ್ರದರ್ಶನ ತೋರುವ ಮೂಲಕ ನಿರಾಸೆ ಕಾಣುತ್ತಿದ್ದರು.
ಆರಂಭದಿಂದಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಒಸಾಕಾ ತನ್ನ ಹಳೇಯ ಲಯವನ್ನು ಮತ್ತೆ ಪ್ರದರ್ಶಿಸಿದರು. 2023 ರ ಚಾಂಪಿಯನ್ ಗೌಫ್ ತನ್ನ ಸರ್ವ್ ಮತ್ತು ಫೋರ್‌ಹ್ಯಾಂಡ್ ಎರಡರಲ್ಲೂ ಹೆಣಗಾಡಿದರು.
ವಿಶ್ವದ 3ನೇ ಹಾಗೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ್ತಿ ಗಾಫ್‌ಗೆ ಬಲವಾದ ಸೋಲಿನ ಪೆಟ್ಟು ನೀಡಿರುವ ಕಾರಣ ಒಸಾಕಾ ಕೂಡ ಪ್ರಶಸ್ತಿ ರೇಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 23ನೇ ಶ್ರೇಯಾಂಕದ ಒಸಾಕ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 11ನೇ ಶ್ರೇಯಾಂಕದ ಜೆಕ್ ಗಣರಾಜ್ಯದ ಕರೋಲಿನಾ ಮುಚೋವಾ ಸವಾಲು ಎದುರಿಸಲಿದ್ದಾರೆ.
ಐಗ ಸ್ವಿಯಾಟೆಕ್, ಲೊರೆಂಜೊ ಮುಸೆಟ್ಟಿ, ಜಾನಿಕ್ ಸಿನ್ನರ್ ಕೂಡ ನಾಲ್ಕನೇ ಸುತ್ತಿನ ಪಂದ್ಯ ಗೆದ್ದು ಕ್ವಾರ್ಟರ್ ಫೈನಲ್ ಪ್ರವೇಶಿಸುವಲ್ಲ ಯಶಸ್ಸು ಕಂಡಿದ್ದಾರೆ.
ಇದನ್ನೂ ಓದಿ US Open 2025: ಭರ್ಜರಿ ಗೆಲುವಿನೊಂದಿಗೆ ಗ್ರ್ಯಾಂಡ್ ಸ್ಲ್ಯಾಮ್‌ನಲ್ಲಿ ಇತಿಹಾಸ ಬರೆದ ಜೊಕೊವಿಕ್