ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಆಸ್ಟ್ರೇಲಿಯಾ ಪ್ರವಾಸಕ್ಕೆ ವೈಷ್ಣವಿ ಶರ್ಮಾಗೆ ಚೊಚ್ಚಲ ಏಕದಿನ ಕರೆ; ಟಿ20ಯಿಂದ ಹರ್ಲೀನ್‌ಗೆ ಕೊಕ್‌

India women's Australia tour: ಇತ್ತೀಚೆಗೆ ಶ್ರೀಲಂಕಾ ವಿರುದ್ಧದ ತನ್ನ ಚೊಚ್ಚಲ ಸರಣಿಯಲ್ಲಿ ವೈಷ್ಣವಿ ಅದ್ಭುತ ಪ್ರದರ್ಶನ ನೀಡಿದ್ದರು. ಅಲ್ಲಿ ಅವರು ಹಲವು ಪಂದ್ಯಗಳಲ್ಲಿ ಐದು ವಿಕೆಟ್‌ಗಳನ್ನು ಕಬಳಿಸಿದ್ದರು. ಅವರ ಜತೆಗೆ, 17 ವರ್ಷದ ವಿಕೆಟ್ ಕೀಪರ್ ಜಿ ಕಮಲಿನಿ ಕೂಡ ತಮ್ಮ ಮೊದಲ ಏಕದಿನ ತಂಡಕ್ಕೆ ಕರೆ ಪಡೆದಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸದ ಟಿ20 ಸರಣಿಯಿಂದ ಹರ್ಲೀನ್‌ಗೆ ಕೊಕ್‌

Vaishnavi Sharma, Harleen Deol -

Abhilash BC
Abhilash BC Jan 18, 2026 9:13 AM

ನವದೆಹಲಿ, ಜ.18: ಮುಂಬರುವ ಆಸ್ಟ್ರೇಲಿಯಾ(India women's Australia tour) ಪ್ರವಾಸಕ್ಕಾಗಿ ಬಿಸಿಸಿ ಮಹಿಳಾ ತಂಡಗಳನ್ನು ಘೋಷಿಸಿದೆ. ಎಡಗೈ ಸ್ಪಿನ್ನರ್ ವೈಷ್ಣವಿ ಶರ್ಮಾ(Vaishnavi Sharma) ಅವರು ತಮ್ಮ ಮೊದಲ ಏಕದಿನ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇದೇ ವೇಳೆ ಭಾರತಿ ಫುಲ್ಮಾಲಿ 2019 ರ ನಂತರ ಮೊದಲ ಬಾರಿಗೆ T20I ತಂಡಕ್ಕೆ ಮರಳಿದ್ದಾರೆ. ಭಾರತ ಮಹಿಳಾ ಕ್ರಿಕೆಟ್ ತಂಡವು ಫೆಬ್ರವರಿ 15 ರಿಂದ ಪ್ರಾರಂಭವಾಗುವ ತಲಾ ಮೂರು ಏಕದಿನ ಮತ್ತು ಟಿ20 ಗಳಿಗಾಗಿ ಆಸ್ಟ್ರೇಲಿಯಾ ಪ್ರವಾಸ ಮಾಡಲಿದೆ.

ಏಕದಿನ ತಂಡದ ಭಾಗವಾಗಿರುವ ಸ್ಟಾರ್ ಬ್ಯಾಟ್ಸ್‌ಮನ್ ಹರ್ಲೀನ್ ಡಿಯೋಲ್ ಅವರನ್ನು ಟಿ20ಐ ತಂಡದಿಂದ ಹೊರಗಿಡಲಾಗಿದೆ. 27 ವರ್ಷದ ಅವರು ತಮ್ಮ ಟಿ20ಐ ವೃತ್ತಿಜೀವನದಲ್ಲಿ ಇದುವರೆಗೆ ಕಳಪೆ ಪ್ರದರ್ಶನ ನೀಡಿದ್ದಾರೆ. 20 ಇನ್ನಿಂಗ್ಸ್‌ಗಳಿಂದ 17.27 ಸರಾಸರಿ ಮತ್ತು 92.01 ಸ್ಟ್ರೈಕ್ ರೇಟ್‌ನಲ್ಲಿ 311 ರನ್ ಗಳಿಸಿದ್ದಾರೆ. ಅವರ ಹೆಸರಿನಲ್ಲಿ ಕೇವಲ ಒಂದು ಅರ್ಧಶತಕವಿದೆ. ಪ್ರಸ್ತುತ ನಡೆಯುತ್ತಿರುವ ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ಪ್ರಚಂಡ ಬ್ಯಾಟಿಂಗ್‌ ನಡೆಸುತ್ತಿದ್ದರೂ ಅವರಿಗೆ ಟಿ20ಯಲ್ಲಿ ಆಯ್ಕೆ ಸಮಿತಿ ಮಣೆ ಹಾಕಿಲ್ಲ.

ಫುಲ್ಮಾಲಿ ಅವರು ನಡೆಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್ 2026 (WPL 2026) ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ವೇದಿಕೆಗೆ ಮರಳಿದ್ದಾರೆ. ಅವರು ಗುಜರಾತ್ ಜೈಂಟ್ಸ್ ಪರ ನಾಲ್ಕು ಇನ್ನಿಂಗ್ಸ್‌ಗಳಲ್ಲಿ 191.66 ರ ಬಿರುಸಿನ ಸ್ಟ್ರೈಕ್ ರೇಟ್‌ನಲ್ಲಿ 92 ರನ್ ಗಳಿಸಿದ್ದಾರೆ. ಹಿಂದಿನ ಋತುವಿನಲ್ಲಿ ಅವರು ಪ್ರಭಾವಶಾಲಿ ಪ್ರದರ್ಶನ ನೀಡಿದರು. 172.72 ರ ಸ್ಟ್ರೈಕ್ ರೇಟ್‌ನಲ್ಲಿ ನಾಲ್ಕು ಇನ್ನಿಂಗ್ಸ್‌ಗಳಲ್ಲಿ 133 ರನ್ ಗಳಿಸಿದ್ದರು. ಫುಲ್ಮಾಲಿ ಏಳು ವರ್ಷಗಳ ಹಿಂದೆ ಗುವಾಹಟಿಯಲ್ಲಿ ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಪದಾರ್ಪಣೆ ಮಾಡಿದ್ದರು. ಮತ್ತು ಇದುವರೆಗೆ ಕೇವಲ ಎರಡು T20I ಗಳಲ್ಲಿ ಮಾತ್ರ ಆಡಿದ್ದಾರೆ.

ಮತ್ತೊಂದೆಡೆ, ಇತ್ತೀಚೆಗೆ ಶ್ರೀಲಂಕಾ ವಿರುದ್ಧದ ತನ್ನ ಚೊಚ್ಚಲ ಸರಣಿಯಲ್ಲಿ ವೈಷ್ಣವಿ ಅದ್ಭುತ ಪ್ರದರ್ಶನ ನೀಡಿದ್ದರು. ಅಲ್ಲಿ ಅವರು ಹಲವು ಪಂದ್ಯಗಳಲ್ಲಿ ಐದು ವಿಕೆಟ್‌ಗಳನ್ನು ಕಬಳಿಸಿದ್ದರು. ಅವರ ಜತೆಗೆ, 17 ವರ್ಷದ ವಿಕೆಟ್ ಕೀಪರ್ ಜಿ ಕಮಲಿನಿ ಕೂಡ ತಮ್ಮ ಮೊದಲ ಏಕದಿನ ತಂಡಕ್ಕೆ ಕರೆ ಪಡೆದಿದ್ದಾರೆ. 2024 ರ ಟಿ 20 ವಿಶ್ವಕಪ್‌ನಲ್ಲಿ ಕೊನೆಯ ಬಾರಿಗೆ ದೇಶವನ್ನು ಪ್ರತಿನಿಧಿಸಿದ್ದ ಆಫ್-ಸ್ಪಿನ್ನರ್ ಶ್ರೇಯಾಂಕ ಪಾಟೀಲ್ ಅವರನ್ನು ಗಾಯಗಳಿಂದ ಚೇತರಿಸಿಕೊಂಡ ನಂತರ ಟಿ 20 ಐ ತಂಡಕ್ಕೆ ಕರೆಸಲಾಗಿದೆ.

RCBW vs DCW: ಸ್ಮೃತಿ ಮಂಧಾನಾ ಅಬ್ಬರ, ಡೆಲ್ಲಿ ಕ್ಯಾಪಿಟಲ್ಸ್‌ಗೆ ಶಾಕ್‌ ನೀಡಿದ ಆರ್‌ಸಿಬಿ ವನಿತೆಯರು!

2025 ರ ಮಹಿಳಾ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಐತಿಹಾಸಿಕ ಗೆಲುವಿನ ನಂತರ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಂಬರುವ ಪ್ರವಾಸದಲ್ಲಿ ಮೊದಲ ಬಾರಿಗೆ ಸೆಣಸಲಿವೆ. ಈ ಏಕದಿನ ಸರಣಿಯು ಮುಂಬರುವ ಸರಣಿಯ ನಂತರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಅಲಿಸಾ ಹೀಲಿ ಅವರ ವಿದಾಯವೂ ಆಗಲಿದೆ.

ಭಾರತದ T20I ತಂಡ

ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ರೇಣುಕಾ ಠಾಕೂರ್, ಶ್ರೀ ಚರಣಿ, ವೈಷ್ಣವಿ ಶರ್ಮಾ, ಕ್ರಾಂತಿ ಗೌಡ್, ಸ್ನೇಹ್ ರಾಣಾ, ದೀಪ್ತಿ ಶರ್ಮಾ, ರಿಚಾ ಘೋಷ್ (ವಿ.ಕೀ.), ಜಿ ಕಮಲಿನಿ (ವಿ.ಕೀ.), ಅರುಂಧತಿ ರೆಡ್ಡಿ, ಅಮಾನ್‌ಜೋಮಾ ಕದ್ರಿ, ಅಮಾನ್‌ಜೋತಿ ರೆಡ್ಡಿ, ಫುಲ್ಮಲಿ, ಶ್ರೇಯಾಂಕಾ ಪಾಟೀಲ್.

ಭಾರತದ ಏಕದಿನ ತಂಡ

ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ರೇಣುಕಾ ಠಾಕೂರ್, ಶ್ರೀ ಚರಣಿ, ವೈಷ್ಣವಿ ಶರ್ಮಾ, ಕ್ರಾಂತಿ ಗೌಡ್, ಸ್ನೇಹ ರಾಣಾ, ದೀಪ್ತಿ ಶರ್ಮಾ, ರಿಚಾ ಘೋಷ್ (ವಿ.ಕೀ.), ಜಿ ಕಮಲಿನಿ (ವಿ.ಕೀ.), ಕಾಶ್ವೀ ಗೌತಮ್, ಅಮನ್ಜೋತ್ ಕೌರ್, ಜೆಮಿಮಾ ರಾಡ್ರಿಗಸ್, ಹರ್ಲೀನ್ ಡಿಯೋಲ್.