ಹೈವೋಲ್ಟೇಜ್ ಭಾರತ-ಇಂಗ್ಲೆಂಡ್ ಟಿ20 ವಿಶ್ವಕಪ್ ಸೆಮಿ ಪಂದ್ಯದ ಪಿಚ್ ರಿಪೋರ್ಟ್
IND vs ENG T20 World Cup Semi-Final: ಮುಂಬೈನಲ್ಲಿ ನಡೆಯುವ ಈ ಪಂದ್ಯಕ್ಕೆ ಯಾವುದೇ ಮಳೆಯಾಗುವ ಮುನ್ಸೂಚನೆ ಇಲ್ಲ ಮತ್ತು ಗರಿಷ್ಠ ತಾಪಮಾನವು 20 ರಿಂದ 30 ° C ವರೆಗೆ ಇರುತ್ತದೆ. ಪಂದ್ಯ ಪೂರ್ಣಗೊಳ್ಳಲು ಪರಿಸ್ಥಿತಿಗಳು ಅನುಕೂಲಕರವಾಗಿ ಕಾಣುತ್ತಿವೆ.
wankhede pitch report -
ಮುಂಬಯಿ, ಮಾ.4: ಕ್ರಿಕೆಟ್ ಅಭಿಮಾನಿಗಳು ಕಾದು ಕುಳಿತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಣ ಹೈವೋಲ್ಟೇಜ್ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯಕ್ಕೆ ವೇದಿಕೆ ಸಜ್ಜುಗೊಂಡಿದೆ. ಇತ್ತಂಡಗಳ ನಡುವಣ ಈ ಕಾದಾಟ ಗುರುವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ. ಪಂದ್ಯ ಹೌಸ್‌ಫುಲ್ ನಿರೀಕ್ಷೆ ಮಾಡಲಾಗಿದೆ. ಈ ಪಂದ್ಯದ ಪಿಚ್ ರಿಪೋರ್ಟ್, ಹವಾಮಾನ ವರದಿಯ ಮಾಹಿತಿ ಇಲ್ಲಿದೆ.
ಪಿಚ್ ರಿಪೋರ್ಟ್
ವಾಂಖೆಡೆ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ. ಸಣ್ಣ ಬೌಂಡರಿಗಳು ಸ್ಟ್ರೋಕ್ ಆಟಕ್ಕೆ ಸಹಾಯ ಮಾಡುತ್ತವೆ ಮತ್ತು ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 170-190 ರಷ್ಟಿದೆ. ಆರಂಭದಲ್ಲಿ ಸ್ವಲ್ಪ ವೇಗ ಮತ್ತು ಬೌನ್ಸ್ ನೀಡಬಹುದು. ಆದರೆ ಸ್ಪಿನ್ನರ್‌ಗಳು ಮಧ್ಯ ಓವರ್‌ಗಳಲ್ಲಿ ಉಪಯುಕ್ತವಾಗಬಹುದು. ಇಬ್ಬನಿ ಬೀಳುವ ಕಾರಣ ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಕಠಿಣವಾಗಬಹುದು.
ಹವಾಮಾನ ವರದಿ
ಮುಂಬೈನಲ್ಲಿ ನಡೆಯುವ ಈ ಪಂದ್ಯಕ್ಕೆ ಯಾವುದೇ ಮಳೆಯಾಗುವ ಮುನ್ಸೂಚನೆ ಇಲ್ಲ ಮತ್ತು ಗರಿಷ್ಠ ತಾಪಮಾನವು 20 ರಿಂದ 30 ° C ವರೆಗೆ ಇರುತ್ತದೆ. ಪಂದ್ಯ ಪೂರ್ಣಗೊಳ್ಳಲು ಪರಿಸ್ಥಿತಿಗಳು ಅನುಕೂಲಕರವಾಗಿ ಕಾಣುತ್ತಿವೆ. ಒಂದೊಮ್ಮೆ ಮಳೆ ಅಥವಾ ಇನ್ನಿತರ ಕಾರಣದಿಂದ ಪಂದ್ಯಕ್ಕೆ ಅಡಚಣೆಯಾದರೆ 90 ನಿಮಿಷದ ಹೆಚ್ಚುವರಿ ಮತ್ತು ಮೀಸಲು ದಿನವಿದೆ.
ಟಿ20 ಮುಖಾಮುಖಿ
ಪಂದ್ಯಗಳು: 29
ಭಾರತ ಗೆಲುವು: 17
ಇಂಗ್ಲೆಂಡ್ ಗೆಲುವು: 12
ಸಂಭಾವ್ಯ ತಂಡಗಳು
ಇಂಗ್ಲೆಂಡ್: ಫಿಲ್ ಸಾಲ್ಟ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಜಾಕೋಬ್ ಬೆಥೆಲ್, ಟಾಮ್ ಬ್ಯಾಂಟನ್, ಹ್ಯಾರಿ ಬ್ರೂಕ್ (ನಾಯಕ), ಸ್ಯಾಮ್ ಕರನ್, ವಿಲ್ ಜ್ಯಾಕ್ಸ್, ಲಿಯಾಮ್ ಡಾಸನ್, ಜೇಮೀ ಓವರ್ಟನ್, ಜೋಫ್ರಾ ಆರ್ಚರ್, ಆದಿಲ್ ರಶೀದ್.
ಇಂಗ್ಲೆಂಡ್ ವಿರುದ್ಧದ ಸೆಮಿ ಪಂದ್ಯಕ್ಕೆ ಭಾರತ ತಂಡದಲ್ಲಿ 2 ಬದಲಾವಣೆ
ಭಾರತ: ಅಭಿಷೇಕ್ ಶರ್ಮ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲ್‌ದೀಪ್ ಯಾದವ್.
ಪ್ರಸಾರ: ಸ್ಟಾರ್‌ಸ್ಪೋರ್ಟ್ಸ್, ಜೀಯೊಹಾಟ್‌ಸ್ಟಾರ್
ಆರಂಭ: ರಾತ್ರಿ 7ಕ್ಕೆ