ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವಿಜಯ್ ಹಜಾರೆ ಟ್ರೋಫಿ: ಕ್ವಾರ್ಟರ್ ಫೈನಲ್ ವೇಳಾಪಟ್ಟಿ ಪ್ರಕಟ

Vijay Hazare Trophy: ವಿಜಯ್ ಹಜಾರೆ ಟ್ರೋಫಿಯ ಫೈನಲ್ ಪಂದ್ಯ ಜನವರಿ 18 ರಂದು ನಡೆಯಲಿದ್ದು, ಎರಡು ಸೆಮಿಫೈನಲ್ ಪಂದ್ಯಗಳು ಜನವರಿ 15 ಮತ್ತು 16 ರಂದು ನಡೆಯಲಿವೆ. ಕ್ವಾರ್ಟರ್ ಫೈನಲ್‌ನ ಕರ್ನಾಟಕ ಮತ್ತು ಮುಂಬೈ ನಡುವಿನ ಬ್ಲಾಕ್ಬಸ್ಟರ್ ಹಣಾಹಣಿ ಕೂಡ ಅಭಿಮಾನಿಗಳನ್ನು ರೋಮಾಂಚನಗೊಳಿಸುವ ಸಾಧ್ಯತೆಯಿದೆ.

ವಿಜಯ್ ಹಜಾರೆ ಟ್ರೋಫಿ: ಕ್ವಾರ್ಟರ್ ಫೈನಲ್ ವೇಳಾಪಟ್ಟಿ ಪ್ರಕಟ

Vijay Hazare Trophy -

Abhilash BC
Abhilash BC Jan 9, 2026 10:15 AM

ಬೆಂಗಳೂರು, ಜ.9: ವಿಜಯ್ ಹಜಾರೆ ಟ್ರೋಫಿಯ(Vijay Hazare Trophy) ಲೀಗ್ ಹಂತ ಗುರುವಾರ (ಜನವರಿ 8) ಮುಕ್ತಾಯಗೊಂಡಿದ್ದು, ಎಂಟು ತಂಡಗಳು ಕ್ವಾರ್ಟರ್ ಫೈನಲ್‌ನಲ್ಲಿ ಆಡುವುದು ಖಚಿತವಾಗಿದೆ. ಪಂದ್ಯಾವಳಿಯ ಉಳಿದ ಪಂದ್ಯಗಳನ್ನು ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ನಡೆಸಲು ನಿರ್ಧರಿಸಲಾಗಿದ್ದು, ಕ್ವಾರ್ಟರ್ ಫೈನಲ್ ಪಂದ್ಯಗಳು ಜನವರಿ 12 ಮತ್ತು 13 ರಂದು ನಡೆಯಲಿವೆ.

ಹಾಲಿ ಚಾಂಪಿಯನ್ ಕರ್ನಾಟಕ ತಂಡವು ಏಕದಿನ ಕ್ರಿಕೆಟ್ ಟೂರ್ನಿಯ ಮೊದಲ ಕ್ವಾರ್ಟರ್‌ಫೈನಲ್‌ನಲ್ಲಿ ‘ಬದ್ಧ ಎದುರಾಳಿ’ ಮುಂಬೈ ತಂಡದ ವಿರುದ್ಧ ಆಡಲಿದೆ. ಉತ್ತರ ಪ್ರದೇಶ ತಂಡ ಜನವರಿ 12 ರಂದು ಸೌರಾಷ್ಟ್ರ ವಿರುದ್ಧ ಸೆಣಸಲಿದೆ. ಮರುದಿನ ದೆಹಲಿ ತಂಡ ವಿದರ್ಭ ತಂಡವನ್ನು ಎದುರಿಸಲಿದೆ. ಮುಂಬೈ ತಂಡವನ್ನು 1 ರನ್‌ನಿಂದ ಸೋಲಿಸಿದ ಪಂಜಾಬ್ ತಂಡವು ಮಧ್ಯಪ್ರದೇಶ ತಂಡವನ್ನು ಎದುರಿಸಲಿದೆ.

ವಿಜಯ್ ಹಜಾರೆ ಟ್ರೋಫಿಯ ಲೀಗ್ ಹಂತದಲ್ಲಿ ಸ್ಟಾರ್ ಆಟಗಾರರು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ಆಟಗಾರರು ಮೊದಲ ಎರಡು ಪಂದ್ಯಗಳಲ್ಲಿ ಕಾಣಿಸಿಕೊಂಡರು ಮತ್ತು ಇತರ ಭಾರತೀಯ ಆಟಗಾರರು ನಂತರದ ಸುತ್ತಿನಲ್ಲಿ ತಮ್ಮ ತಂಡಗಳಿಗಾಗಿ ಕಾಣಿಸಿಕೊಂಡರು.

ಏತನ್ಮಧ್ಯೆ, ವಿಜಯ್ ಹಜಾರೆ ಟ್ರೋಫಿಯ ಫೈನಲ್ ಪಂದ್ಯ ಜನವರಿ 18 ರಂದು ನಡೆಯಲಿದ್ದು, ಎರಡು ಸೆಮಿಫೈನಲ್ ಪಂದ್ಯಗಳು ಜನವರಿ 15 ಮತ್ತು 16 ರಂದು ನಡೆಯಲಿವೆ. ಕ್ವಾರ್ಟರ್ ಫೈನಲ್‌ನ ಕರ್ನಾಟಕ ಮತ್ತು ಮುಂಬೈ ನಡುವಿನ ಬ್ಲಾಕ್ಬಸ್ಟರ್ ಹಣಾಹಣಿ ಕೂಡ ಅಭಿಮಾನಿಗಳನ್ನು ರೋಮಾಂಚನಗೊಳಿಸುವ ಸಾಧ್ಯತೆಯಿದೆ.

ಸಚಿನ್ ತೆಂಡುಲ್ಕರ್ ಜತೆ ರೀಟಾ ಬಹುಗುಣ ಮಾತನಾಡಿರಬಹುದು, ನನ್ನೊಂದಿಗಲ್ಲ: ಸಚಿನ್ ಪೈಲಟ್

ಕ್ವಾರ್ಟರ್‌ ಫೈನಲ್‌ ವೇಳಾಪಟ್ಟಿ

ಜನವರಿ 12

ಮೊದಲ ಕ್ವಾರ್ಟರ್ ಫೈನಲ್: ಕರ್ನಾಟಕ vs ಮುಂಬೈ - ಬೆಳಿಗ್ಗೆ 9 ಗಂಟೆಗೆ

2ನೇ ಕ್ವಾರ್ಟರ್ ಫೈನಲ್: ಉತ್ತರ ಪ್ರದೇಶ vs ಸೌರಾಷ್ಟ್ರ - ಬೆಳಿಗ್ಗೆ 9 ಗಂಟೆಗೆ

ಜನವರಿ 13

3ನೇ ಕ್ವಾರ್ಟರ್ ಫೈನಲ್: ಪಂಜಾಬ್ vs ಮಧ್ಯಪ್ರದೇಶ - ಬೆಳಿಗ್ಗೆ 9 ಗಂಟೆಗೆ

4ನೇ ಕ್ವಾರ್ಟರ್ ಫೈನಲ್: vs ದೆಹಲಿ vs ವಿದರ್ಭ- ಬೆಳಿಗ್ಗೆ 9 ಗಂಟೆಗೆ

ಜನವರಿ 15

ಮೊದಲ ಸೆಮಿಫೈನಲ್: ಬೆಳಿಗ್ಗೆ 9 ಗಂಟೆಗೆ

ಜನವರಿ 16

ಎರಡನೇ ಸೆಮಿಫೈನಲ್: ಬೆಳಿಗ್ಗೆ 9 ಗಂಟೆಗೆ

ಜನವರಿ 18

ಫೈನಲ್‌: ಬೆಳಿಗ್ಗೆ 9 ಗಂಟೆಗೆ