ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಇಂದೋರ್‌ನಲ್ಲಿ ಭರ್ಜರಿ ಶತಕ ಬಾರಿಸಿ ಸಚಿನ್ ತೆಂಡೂಲ್ಕರ್ ವಿಶ್ವ ದಾಖಲೆ ಮುರಿದ ವಿರಾಟ್ ಕೊಹ್ಲಿ

Virat Kohli: ಕೊಹ್ಲಿ ಅವರ 124 ರನ್ 50 ಓವರ್‌ಗಳ ಸ್ವರೂಪದಲ್ಲಿ ಇಂದೋರ್‌ನಲ್ಲಿ ಭಾರತೀಯನೊಬ್ಬ ಗಳಿಸಿದ ಅತ್ಯಧಿಕ ವೈಯಕ್ತಿಕ ಸ್ಕೋರ್ ಆಗಿದೆ. ನ್ಯೂಜಿಲ್ಯಾಂಡ್‌ ವಿರುದ್ಧ ಏಕದಿನದಲ್ಲಿ ಗರಿಷ್ಠ ಶತಕ ಸಿಡಿಸಿ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಅಗ್ರಸ್ಥಾನಕಕೇರಿದರು. ಕೊಹ್ಲಿ 7 ಶತಕ ಸಿಡಿಸಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಆಟಗಾರ ರಿಕಿ ಪಾಂಟಿಂಗ್‌ 6 ಶತಕ ಬಾರಿಸಿದ್ದರು.

Virat Kohli

ಇಂದೋರ್‌, ಜ. 19: ಇಂದೋರ್‌ನ ಹೋಲ್ಕರ್ ಕ್ರಿಕೆಟ್ ಕ್ರೀಡಾಂಗಣ(Holkar Cricket Stadium)ದಲ್ಲಿ ತಮ್ಮ ಮೊದಲ ಶತಕವನ್ನು ಗಳಿಸುವ ಮೂಲಕ ವಿರಾಟ್ ಕೊಹ್ಲಿ‌(Virat Kohli) ದಿಗ್ಗಜ ಸಚಿನ್ ತೆಂಡೂಲ್ಕರ್‌(Sachin Tendulkar) ಅವರ ವಿಶ್ವ ದಾಖಲೆಯೊಂದನ್ನು ಮುರಿದರು. ವಿರಾಟ್ ಕೊಹ್ಲಿ ತಮ್ಮ 54 ನೇ ಶತಕದೊಂದಿಗೆ ರನ್ ಚೇಸಿಂಗ್‌ನಲ್ಲಿ ಮತ್ತೊಮ್ಮೆ ತಮ್ಮ ಶ್ರೇಷ್ಠತೆಯನ್ನು ಪ್ರದರ್ಶಿಸಿದರೂ, ನ್ಯೂಜಿಲೆಂಡ್ ತಂಡ ಭಾರತವನ್ನು ಸೋಲಿಸಿ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಏಕದಿನ ಸರಣಿಯನ್ನು ಗೆದ್ದಿತು.

ಈ ಶತಕದೊಂದಿಗೆ, ಕೊಹ್ಲಿ ವಿಶ್ವದಾದ್ಯಂತ 35 ವಿಭಿನ್ನ ಸ್ಥಳಗಳಲ್ಲಿ ಏಕದಿನ ಶತಕ ಗಳಿಸಿದ ವಿಶ್ವದ ಮೊದಲ ಆಟಗಾರ ಎನಿಸಿಕೊಂಡರು. 34 ಸ್ಥಳಗಳಲ್ಲಿ ಈ ಸಾಧನೆ ಮಾಡಿದ್ದ ಸಚಿನ್‌ ತೆಂಡೂಲ್ಕರ್‌ ದಾಖಲೆ ಪತನಗೊಂಡಿತು. ರೋಹಿತ್ ಶರ್ಮಾ, 26 ವಿಭಿನ್ನ ಸ್ಥಳಗಳಲ್ಲಿ ಏಕದಿನ ಪಂದ್ಯಗಳಲ್ಲಿ ಶತಕ ಗಳಿಸಿರುವ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ರಿಕಿ ಪಾಂಟಿಂಗ್, ಹಾಶಿಮ್ ಆಮ್ಲಾ, ಎಬಿ ಡಿವಿಲಿಯರ್ಸ್, ಕುಮಾರ್ ಸಂಗಕ್ಕಾರ, ಕ್ರಿಸ್ ಗೇಲ್ ಮತ್ತು ಸನತ್ ಜಯಸೂರ್ಯ ಅವರ ನಂತರದಲ್ಲಿದ್ದಾರೆ.

IND vs NZ: ಶತಕ ಸಿಡಿಸಿ ವೀರೇಂದ್ರ ಸೆಹ್ವಾಗ್‌ ದಾಖಲೆ ಮುರಿದ ವಿರಾಟ್‌ ಕೊಹ್ಲಿ!

ಕೊಹ್ಲಿ ಅವರ 124 ರನ್ 50 ಓವರ್‌ಗಳ ಸ್ವರೂಪದಲ್ಲಿ ಇಂದೋರ್‌ನಲ್ಲಿ ಭಾರತೀಯನೊಬ್ಬ ಗಳಿಸಿದ ಅತ್ಯಧಿಕ ವೈಯಕ್ತಿಕ ಸ್ಕೋರ್ ಆಗಿದೆ. ನ್ಯೂಜಿಲ್ಯಾಂಡ್‌ ವಿರುದ್ಧ ಏಕದಿನದಲ್ಲಿ ಗರಿಷ್ಠ ಶತಕ ಸಿಡಿಸಿ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಅಗ್ರಸ್ಥಾನಕಕೇರಿದರು. ಕೊಹ್ಲಿ 7 ಶತಕ ಸಿಡಿಸಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಆಟಗಾರ ರಿಕಿ ಪಾಂಟಿಂಗ್‌ 6 ಶತಕ ಬಾರಿಸಿದ್ದರು.

ಹೆಚ್ಚಿನ ಸ್ಥಳಗಳಲ್ಲಿ ODI ಶತಕಗಳು

ವಿರಾಟ್ ಕೊಹ್ಲಿ-35*

ಸಚಿನ್ ತೆಂಡೂಲ್ಕರ್-34

ರೋಹಿತ್ ಶರ್ಮಾ-26

ರಿಕಿ ಪಾಂಟಿಂಗ್-21

ಹಾಶಿಮ್ ಆಮ್ಲಾ-21

ಎಬಿ ಡಿವಿಲಿಯರ್ಸ್-21

ಕುಮಾರ ಸಂಗಕ್ಕಾರ-20

ಕ್ರಿಸ್ ಗೇಲ್-19

ಸನತ್ ಜಯಸೂರ್ಯ-18

ಪಂದ್ಯ ಸೋತ ಭಾರತ

ಭಾನುವಾರ ನಡೆದ ಮೂರನೇ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನೆಡೆಸಿದ ನ್ಯೂಜಿಲ್ಯಾಂಡ್‌ ಆರಂಭಿಕ ಆಘಾತದ ಹೊರತಾಗಿಯೂ 338 ರನ್‌ ಬಾರಿಸಿತು. ಕಠಿಣ ಗುರಿಯನ್ನು ಬೆನ್ನಟ್ಟಿದ್ದ ಭಾರತ ತಂಡ 46 ಓವರ್‌ಗಳಲ್ಲಿ 296 ರನ್‌ ಗಳಿಸಲು ಮಾತ್ರ ಸಾಧ್ಯವಾಯಿತು.

ಸಂಕ್ಷಿಪ್ತ ಸ್ಕೋರು

ನ್ಯೂಜಿಲೆಂಡ್: 50 ಓವರ್‌ಗಳಲ್ಲಿ 8ಕ್ಕೆ337 (ವಿಲ್ ಯಂಗ್ 30, ಡ್ಯಾರಿಲ್ ಮಿಚೆಲ್ 137, ಗ್ಲೆನ್ ಫಿಲಿಪ್ಸ್ 106, ಮೈಕೆಲ್ ಬ್ರೇಸ್‌ವೆಲ್ ಔಟಾಗದೇ 28, ಅರ್ಷದೀಪ್ ಸಿಂಗ್ 63ಕ್ಕೆ3, ಹರ್ಷಿತ್ ರಾಣಾ 84ಕ್ಕೆ3).

ಭಾರತ: 46 ಓವರ್‌ಗಳಲ್ಲಿ 296 (ಶುಭಮನ್ ಗಿಲ್ 23, ವಿರಾಟ್ ಕೊಹ್ಲಿ 124, ನಿತೀಶ್ ಕುಮಾರ್ ರೆಡ್ಡಿ 53, ಹರ್ಷಿತ್ ರಾಣಾ 52, ಝ್ಯಾಕ್ರಿ ಫೌಲ್ಕೆಸ್ 77ಕ್ಕೆ3, ಕ್ರಿಸ್ಟನ್ ಕ್ಲರ್ಕ್ 54ಕ್ಕೆ3, ಜೇಡನ್ ಲೆನಾಕ್ಸ್ 42ಕ್ಕೆ2).