ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Virat Kohli Craze: ಆಫ್ಘಾನ್‌ನಲ್ಲೂ ಆರ್‌ಸಿಬಿ ಗೆಲುವು ಸಂಭ್ರಮಿಸಿದ ಕೊಹ್ಲಿ ಅಭಿಮಾನಿಗಳು

Virat Kohli Craze: ಆರ್‌ಸಿಬಿ ಗೆದ್ದರೂ ಕೂಡ ಆ ಬಳಿಕ ಚಿನ್ನಸ್ವಾಮಿಯ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 11ಮಂದಿ ಸಾವನ್ನಪ್ಪಿದ್ದು ತಂಡದ ಕಪ್‌ ಗೆದ್ದ ಎಲ್ಲ ಸಂಭ್ರಮವನ್ನು ಮರೆಯುಂತೆ ಮಾಡಿತ್ತು. ಐಪಿಎಲ್‌ ಇತಿಹಾಸದ ಪುಟದಲ್ಲಿ ಈ ಘಟನೆ ದುರಂತವಾಗಿ ದಾಖಲಾಯಿತು. ಆರ್‌ಸಿಬಿ ಮುಂದೆ ಪ್ರತಿ ಐಪಿಎಲ್‌ ಆಡುವ ವೇಳೆ ಈ ಘಟನೆ ಮುನ್ನಲೆಗೆ ಬರುತ್ತಲೇ ಇರುತ್ತದೆ.

ಆಫ್ಘಾನ್‌ನಲ್ಲೂ ಆರ್‌ಸಿಬಿ ಗೆಲುವು ಸಂಭ್ರಮಿಸಿದ ಕೊಹ್ಲಿ ಅಭಿಮಾನಿಗಳು

Profile Abhilash BC Jun 11, 2025 3:46 PM

ಕಾಬುಲ್‌: ಜೂನ್‌ 3 ರಂದು ನಡೆದಿದ್ದ ಐಪಿಎಲ್‌ ಫೈನಲ್‌ನಲ್ಲಿ(IPL 2025) ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡ ಪಂಜಾಬ್‌ ಕಿಂಗ್ಸ್‌ ತಂಡವನ್ನೂ ಮಣಿಸಿ 18 ವರ್ಷಗಳ ಬಳಿಕ ಮೊದಲ ಐಪಿಎಲ್‌ ಟ್ರೋಫಿ ಗೆದ್ದಿತ್ತು. ಈ ಮೂಲಕ ವಿರಾಟ್ ಕೊಹ್ಲಿ(Virat Kohli Craze) ಅವರ 18 ವರ್ಷಗಳ ಕಾಯುವಿಕೆ ಅಂತ್ಯಗೊಂಡಿತ್ತು. ಆರ್‌ಸಿಬಿ ಚೊಚ್ಚಲ ಕಪ್‌ ಗೆದ್ದ ಬಳಿಕ ತಂಡದ ಮತ್ತು ಕೊಹ್ಲಿ ಅಭಿಮಾನಿಗಳು ದೇಶಾದ್ಯಂತ ಸಂಭ್ರಮಿಸಿದ್ದರು. ಇದೀಗ ದೂರದ ಅಫಘಾನಿಸ್ತಾನದಲ್ಲಿಯೂ ಕೊಹ್ಲಿ ಅಭಿಮಾನಿಗಳು(virat kohli fans) ಆರ್‌ಸಿಬಿ ಗೆಲುವನ್ನು ಕೇಕ್‌ ಕತ್ತರಿಸಿ ಸಂಭ್ರಮಾಚರಿಸಿದ್ದಾರೆ. ಈ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಫೈನಲ್‌ನಲ್ಲಿ ಆರ್‌ಸಿಬಿ ಗೆಲ್ಲುತ್ತಿದ್ದಂತೆ ವಿರಾಟ್‌ ಕೊಹ್ಲಿಏನು ಮಾಡಬೇಕೆಂದು ತೋಚದೇ ಕೆಲವು ಕ್ಷಣ ಮೈದಾನದಲ್ಲೇ ಆನಂದಭಾಷ್ಪ ಸುರಿಸಿದರು. ಆ ವೇಳೆಗೆ ತಂಡದ ಸಹ ಆಟಗಾರರು ತಬ್ಬಿಕೊಂಡಿದ್ದರು. ಕೊಹ್ಲಿ ಅವರಿಗೆ 18 ಅದೃಷ್ಟ ಸಂಖ್ಯೆಯಾಗಿದ್ದು, ಅದರಿಂದಲೇ ಐಪಿಎಲ್‌ 18ನೇ ಆವೃತ್ತಿಯಲ್ಲಿ ಆರ್‌ಸಿಬಿ ಟ್ರೋಫಿ ಗೆದ್ದಿದೆ ಎಂದು ಹೇಳಲಾಗುತ್ತಿದೆ.

ಆರ್‌ಸಿಬಿ ಗೆದ್ದರೂ ಕೂಡ ಆ ಬಳಿಕ ಚಿನ್ನಸ್ವಾಮಿಯ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 11ಮಂದಿ ಸಾವನ್ನಪ್ಪಿದ್ದು ತಂಡದ ಕಪ್‌ ಗೆದ್ದ ಎಲ್ಲ ಸಂಭ್ರಮವನ್ನು ಮರೆಯುಂತೆ ಮಾಡಿತ್ತು. ಐಪಿಎಲ್‌ ಇತಿಹಾಸದ ಪುಟದಲ್ಲಿ ಈ ಘಟನೆ ದುರಂತವಾಗಿ ದಾಖಲಾಯಿತು. ಆರ್‌ಸಿಬಿ ಮುಂದೆ ಪ್ರತಿ ಐಪಿಎಲ್‌ ಆಡುವ ವೇಳೆ ಈ ಘಟನೆ ಮುನ್ನಲೆಗೆ ಬರುತ್ತಲೇ ಇರುತ್ತದೆ. ಈ ಘಟನೆ ಆರ್‌ಸಿಬಿಗೆ ನಿಜಕ್ಕೂ ಒಂದು ಕಪ್ಪು ಚುಕ್ಕೆಯಾಗಿಯೇ ಉಳಿಯಲಿದೆ.

ಅಹಮದಾಬಾದ್‌ನ ನರೆಂದ್ರ ಮೋದಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆದಿದ್ದ ಅತ್ಯಂತ ರೋಚಕ ಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆರ್‌ಸಿಬಿ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 190 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 184 ರನ್‌ ಗಳಿಸಲಷ್ಟೇ ಶಕ್ತವಾಗಿ 6 ರನ್‌ ಅಂತರದಿಂದ ಸೋಲೊಪ್ಪಿಕೊಂಡಿತ್ತು.

ಇದನ್ನೂ ಓದಿ IPL 2025: ಆರ್‌ಸಿಬಿಗೆ ಕಪ್‌ ಗೆದ್ದುಕೊಡಬಲ್ಲ ನಾಲ್ವರು ಸ್ಟಾರ್‌ಗಳನ್ನು ಆರಿಸಿದ ವಿಜಯ್ ಮಲ್ಯ!